ಬುಧವಾರ, ಮೇ 31, 2017

Haveri Dist. Crime News as on 31-05-2017

ಹಾವೇರಿ ಜಿಲ್ಲಾ ಪೊಲೀಸ್
ಅಪರಾಧಗಳ ಸುದ್ದಿ
ದಿನಾಂಕ: 31-05-2017
ರಸ್ತೆ ಅಪಘಾತ, ಸಾವುಃ- ಬಂಕಾಪುರ ಠಾಣಾ ಹದ್ದಿ ಬಂಕಾಪುರ ಗ್ರಾಮದ ಸುಂಕದಕೇರಿ ನಿವಾಸಿ ಗುರುಪಾದಪ್ಪ ಜಮಕಂಡೆಪ್ಪ ಕೊಳಲ ವಯಸ್ಸು: 56 ವರ್ಷ ಈತನು ದಿನಾಂಕ: 30-05-2017 ರಂದು ರಾತ್ರಿ 08-00 ಗಂಟೆಯಿಂದ ರಾತ್ರಿ 08-30 ಗಂಟೆಯ ನಡುವಿನ ಅವಧಿಯಲ್ಲಿ ಜಮೀನಿಗೆ ನೀರು ಹಾಯಿಸುವ ಸಲುವಾಗಿ ಹಂಡೆ ಇವರ ಜಮೀನಿಗೆ ಹೋಗಲು ಬಂಕಾಪುರದ ಹಳ್ಳಿಕೇರಿ ಬಸವಣ್ಣ ದೇವರ ಗುಡಿಯ ಹತ್ತಿರ ಎನ್.ಎಚ್-4 ರಸ್ತೆಯನ್ನು ದಾಟುತ್ತಿರುವಾಗ ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಹೋಗುವ ರಸ್ತೆಯ ಮೇಲೆ ಯಾವುದೋ ವಾಹನವು ಡಿಕ್ಕಿ ಮಾಡಿ ಅಪಘಾತ ಪಡಿಸಿ ಕಾಲಿಗೆ ಮತ್ತು ತಲೆಗೆ ಬಲವಾದ ಗಾಯಪಡಿಸಿದ್ದರಿಂದ  ಸ್ಥಳದಲ್ಲಿಯೇ ಮರಣ ಹೊಂದಿರುತ್ತಾರೆ ಅಂತ ಮೃತನ ಹೆಂಡತಿ ನೀಲವ್ವ ಕೊಳಲ ಇವಳು ಫಿರ್ಯಾದಿ ನೀಡಿದ್ದು ಬಂಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಜೂಜಾಟ ವ್ಯಕ್ತಿಗಳ ಬಂಧನಃ- ಬಂಕಾಪುರ ಠಾಣಾ ವ್ಯಾಪ್ತಿಯ ಬಂಕಾಪುರ ಗ್ರಾಮದ ಬಂಕಾಪುರದ ಅಂಕದಕಣದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯ ಹಿಂದಿನ ಸಾರ್ವಜನಿಕ ರಸ್ತೆ ಮೇಲೆ ದಿನಾಂಕ: 30-05-2017 ರಂದು ಸಾಯಂಕಾಲ 05:10 ಗಂಟೆಗೆ ಕೃಷ್ಣಾಸಿಂಗ್ ಯಲ್ಲುಸಿಂಗ್ ಭವಾನಿ ಹಾಗೂ ಇನ್ನೂ 4 ಜನ ಸೇರಿಕೊಂಡು ತಮ್ಮ ತಮ್ಮ ಪಾಯಿದೆಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಪಿ.ಎಸ್.ಐ ಬಂಕಾಪುರ ರವರು ಸಿಬ್ಬಂದಿಯೊಡನೆ ದಾಳಿ ಮಾಡಿ ಆರೋಪಿಗಳನ್ನು ಸೆರೆ ಹಿಡಿದು ಮಾನ್ಯ ನ್ಯಾಯಾಲಯಕ್ಕೆ ಮಾಹಿತಿ ನೀಡಿ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.


ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆಃ- ಹಾವೇರಿ ಗ್ರಾಮೀಣ ಠಾಣಾ ಹದ್ದಿ ಕಬ್ಬೂರ ಗ್ರಾಮದ ಚಂದ್ರಶೇಖರ ತಂದೆ ಶಿದ್ದಪ್ಪ ದಿಡಗೂರ, ವಯಾ: 25 ವರ್ಷ ಈತನು ತನ್ನ ಸಹೋದರನೊಂದಿಗೆ ಸೇರಿ ಕೃಷಿ ಚಟುವಟಿಕೆ ಹಾಗೂ ಬೇಳೆ ಸಾಲಕ್ಕೆಂದು ಕಳೆದ ಒಂದು ವರ್ಷದ ಹಿಂದೆ ಕಬ್ಬೂರ ಗ್ರಾಮದ ಕಾರ್ಪೊರೇಷನ್ ಬ್ಯಾಂಕಿನಲ್ಲಿ 12 ಲಕ್ಷ ರೂಗಳ ಸಾಲವನ್ನು ಪಡೆದುಕೊಂಡು ಕೃಷಿ ಚಟುವಟಿಕೆಗೆ ಉಪಯೋಗಿಸಿದ್ದು, ಮಾಡಿದ ಸಾಲ ತಿರಿಸುವದು ಹೇಗೆ ಅಂತಾ ಅದರ ಬಗ್ಗೆ ಮನಸ್ಸಿಗೆ ಹಚ್ಚಿಕೊಂಡು ದಿನಾಂಕಃ 30-05-2017 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 31-05-2017 ರಂದು ಬೆಳಗಿನ 06-00 ಗಂಟೆಯ ನಡುವಿನ ಅವದಿಯಲ್ಲಿ ಕಬ್ಬೂರ ಗ್ರಾಮದ ಹದ್ದಿಯ ತನ್ನ ಹೋಲದ ಪಕ್ಕದಲ್ಲಿರುವ ಪುಟ್ಟಪ್ಪ ತಂದೆ ಶೇಖಪ್ಪ ಗಿರಿಗೌಡ್ರ ಇವರ ಹೋಲದ ಬದುವನಿನಲ್ಲಿರುವ ಬೇವಿನ ಮರಕ್ಕೆ ಹಗ್ಗದಿಂದ ಕತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಇತನು ತಾನು ಮಾಡಿದ ಸಾಲದ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ವಿನಃ ಅವನ ಮರಣದಲ್ಲಿ ಬೇರೆ ಯಾವ ಸಂಶಯ ಇರುವುದಿಲ್ಲಾ ಮೃತನ ಸಹೋದರ ಬಸವರಾಜ ಶಿದ್ದಪ್ಪ ದಿಡಗೂರ ವರದಿ ನೀಡಿದ್ದು ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.


ವರದಕ್ಷಿಣೆ ಕಿರುಕುಳಃ- ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮೊರಬ ಗ್ರಾಮದ ಫಿರ್ಯಾದಿ ವನಜಾಕ್ಷಿ ಹನುಮಂಪತ್ತ ಯಡಗೋಡಿ ಇವಳಿಗೆ ಹನುಮಂತಪ್ಪ ಚನ್ನಬಸಪ್ಪ ಯಡಗೋಡಿ ಈತನೊಂದಿಗೆ 9 ವರ್ಷದ ಹಿಂದೆ ಮದುವೆಯಾಗಿದ್ದು ಈಗ ಒಂದು ವರ್ಷದಿಂದಿ ಫಿರ್ಯಾದಿ ವನಜಾಕ್ಷಿ ಇವಳ ಮೇಲೆ ಇವಳ ಗಂಡ ಹನುಮಂತಪ್ಪ ವಿನಾಕಾರಣ ಸಂಶಯಪಡುತ್ತಾ ಹಿಂಸೆಯನ್ನು ಕೊಡುತ್ತಾ ಬಂದಿರುತ್ತಾನೆ. ಅಲ್ಲದೆ ದಿನಾಂಕಃ-29-05-2017 ರಂದು ಮುಂಜಾನೆ 11-30 ಗಂಟೆಯ ಸುಮಾರಿಗೆ ಆರೋಪಿ 1 ನೇದ್ದವನು ಪಿರ್ಯಾದಿಗೆ ಜಮೀನಿಗೆ ಕರೆದುಕೊಂಡು ಹೋಗಿ ಇಲ್ಲ ಸಲ್ಲದ ಆರೋಪ ಮಾಡುತ್ತಾ ಬಿದಿರು ಬಡಿಗೆಯಿಂದ ಹೊಡೆದು ಹೊಲದಲ್ಲೇ ಬಿಟ್ಟು ಹೋಗಿದ್ದು ನಂತರ ಪಿರ್ಯಾದಿಯು ಪುನಃ ಮದ್ಯಾನ್ನ 1-00 ಗಂಟೆಯ ಸುಮಾರಿಗೆ ತನ್ನ ಗಂಡನ ಮನೆಗೆ ಹೋದಾಗ ಮನೆಯಲ್ಲಿದ್ದ ಇವಳ ಗಂಡ ಹಾಗೂ ಅವನ ತಂದೆ ತಾಯಿ ಸೇರಿಕೊಂಡು ಬಿದರಿನ ಬಡಿಗೆ, ಪ್ಲಾಸ್ಟಿಕ್ ಚೇರ್, ಹಾಗೂ ಹಗ್ಗದಿಂದ ಬಾಸುಂಡೆ ಬರುವ ರೀತಿಯಲ್ಲಿ ಹೊಡೆದು ಬಾಯಿಗೆ ಬಟ್ಟೆಯನ್ನು ತುಂಬಿ ಹಗ್ಗದಿಂದ ಕುತ್ತಿಗೆಯ ಕೊರಳಿಗೆ ಹಾಕಿ ನೇಣು ಹಾಕಿ ಜೀವ ತೆಗೆಯಲು ಪ್ರಯತ್ನಿಸಿರುತ್ತಾರೆ ಅಂತ ಫಿರ್ಯಾದಿ ನೀಡಿದ್ದು ರಟ್ಟಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಃ- ಶಿಗ್ಗಾವಿ ಪೋಲಿಸ್ ಠಾಣಾ ಹದ್ದಿ ಪೈಕಿ, ನೀರಲಕಟ್ಟಿ ತಾಂಡಾದ ಪಿರ್ಯಾದಿ ಲಕ್ಷ್ಮವ್ವ ಹಾಲೇಶಪ್ಪ ಅಕ್ಕಸಾಲಿ ಇವರ ವಾಸದ ಮನೆಯಲ್ಲಿ, ದಿನಾಂಕಃ 30-05-2017 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ಪಿರ್ಯಾದಿಯ ಮಗಳು ಕುಮಾರಿಃ ಜ್ಯೋತಿ ತಂದೆ ಹಾಲೇಶಪ್ಪ ಅಕ್ಕಸಾಲಿ ವಯಾ 14 ವರ್ಷ ಸಾಃ ನೀರಲಕಟ್ಟಿ ತಾಂಡಾ ಇವಳು ಅಂಗವಿಕಲೆ ಮತ್ತು ಅಪ್ರಾಪ್ತ ವಯಸ್ಕಳು ಅಂತಾ ಗೊತ್ತಿದ್ಯಾಗ್ಯೂ, ಮನೆಯಲ್ಲಿ ಒಬ್ಬಳೆ ಇದ್ದಾಗ ಆರೋಪಿತನು, ಅವರ ಮನೆಗೆ ಹೋಗಿ ಜ್ಯೋತಿ ಇವಳ ಬಾಯಿ ಹತ್ತಿಕ್ಕಿ ಹಿಡಿದು, ನೆಲಕ್ಕೆ ಕೆಡವಿ ಅತ್ಯಾಚಾರ ಮಾಡಿರುತ್ತಾನೆ ಅಂತ ಫಿರ್ಯಾದಿ ನೀಡಿದ್ದು ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಜೂಜಾಟ ವ್ಯಕ್ತಿಗಳ ಬಂಧನಃ- ಸವಣೂರ ಪೊಲೀಸ್ ಠಾಣ ಹದ್ದಿ ಪೈಕಿ ಮಾವೂರ ಗ್ರಾಮದಿಂದ ಹುರಳಿಕುಪ್ಪಿ ಕಡೆಗೆ ಇರುವ ಹೊಲಗಳಿಗೆ ಹೋಗುವ ಕಚ್ಚಾರಸ್ತೆಯ ಮೇಲೆ ದಿನಾಂಕ: 30/05/2017 ರಂದು 21-45 ಗಂಟೆ ಸುಮಾರಿಗೆ ಆರೋಪಿತರಾದ ರಫೀಕ್ ಮಹ್ಮದ್ ಹನೀಫ್ ಲಾಲನವರ ಸಾ||ಬಂಕಾಪುರ, ಮಾಲತೇಶ ಮಹದೇವಭಟ್ ಜೋಶಿ ಸಾ||ಚಿಲ್ಲೂರ ಬಡ್ನಿ ಹಾಗೂ ಇನ್ನು ಕೆಲವರು ಸೇರಿಕೊಂಡು ತಮ್ಮ ತಮ್ಮ ಲಾಭಕೋಸ್ಕರ 52 ಇಸ್ಪೇಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ್ ಎಂಬುವ ನಸೀಬದ ಜೂಜಾಟವನ್ನು ಆಡುತ್ತಿದ್ದಾಗ ಖಚಿತ ಮಾಹಿತಿ ಪಡೆದು ಪಿ.ಐ ಸವಣೂರ ರವರು ಸಿಬ್ಬಂದಿಯೊಂದಿಗೆ ಸೇರಿಕೊಂಡು ದಾಳಿ ಮಾಡಿ 02 ಜನರನ್ನು ಸೇರೆ ಹಿಡಿದಿದ್ದು ಇನ್ನೂ ಕೆಲವು ಜನರು ಓಡಿ ಹೋಗಿರುತ್ತಾರೆ. ಸೇರೆ ಹಿಡಿದ ಆರೋಪಿತರಿಂದ 1] ನಗದು ಹಣ 19,700/-ರೂ 2) ಒಟ್ಟು 52 ಇಸ್ಪೇಟ್ ಎಲೆಗಳು :ಕಿ:00=00 3]  07 ಮೋಟಾರ್ ಸೈಕಲ್ಗಳು ;ಕಿ; 2,00,000/- 4] 4 ಮೇಣದ ಬತ್ತಿಗಳು ವಶಪಡಿಸಿಕೊಂಡಿದ್ದು ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆಃ- ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬೆನಕನಹಳ್ಳಿ ಗ್ರಾಮದ ರೈತ ರಾಮಪ್ಪ ತಂದೆ ಹೊಸರಪ್ಪ ಹೊಸರಣ್ಣನವರ ವಯಾ: 58 ವರ್ಷ ಇತನು ತನ್ನ ಹೊಲದ ಕೃಷಿ ಚಟುವಟಿಕೆ 02 ವರ್ಷದ ಹಿಂದೆ ಕಬ್ಬೂರ ಗ್ರಾಮದ ಕಾರ್ಪೋರೇಷನ್ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಬ್ಯಾಂಕಿನಲ್ಲಿ 50 ಸಾವಿರ ಸಾಲವನ್ನು ಹಾಗೂ ಸಂಘ ಸಂಸ್ಥೆಯಲ್ಲಿ ಮತ್ತು ಕೈಗಡವಾಗಿ 1 ಲಕ್ಷ 35 ಸಾವಿರ ಸಾಲವನ್ನು ಪಡೆದುಕೊಂಡು, ಮಾಡಿದ ಸಾಲ ತಿರಿಸುವದು ಹೇಗೆ ಅಂತಾ ಅದರ ಬಗ್ಗೆ ಮನಸ್ಸಿಗೆ ಹಚ್ಚಿಕೊಂಡು ದಿನಾಂಕಃ 31-05-2017 ರಂದು ಮದ್ಯಾಹ್ನ 03-30 ಗಂಟೆಗಿಂತ ಪೂರ್ವದಲ್ಲಿ ಬೆನಕನಹಳ್ಳಿ ಗ್ರಾಮದ ಹದ್ದಿಯ ಮಾದರಕಟ್ಟೆಯ ಹತ್ತಿರ ಯಾವುದೋ ವಿಷ ಸೇವನೆ ಮಾಡಿದ್ದು ಉಪಚಾರಕ್ಕೆ ಅಂತಾ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದಾಗ ಉಪಚಾರ ಫಲಿಸದೇ ದಿನಾಂಕ 31-05-2017 ರಂದು ಸಾಯಂಕಾಲ 06-00 ಗಂಟೆಗೆ ಮೃತಪಟ್ಟಿರುತ್ತಾರೆ ಅಂತ ಮೃತನ ಹೆಂಡತಿ ವರದಿ ನೀಡಿದ್ದು ಹಾವೇರಿ ಠಾಣೆಯಲ್ಲಿ ಕಾನೂನು ಕ್ರಮ ಕೈಗೊಂಡಿರುತ್ತಾರೆ.

ಆಕಸ್ಮಿಕ ಬೆಂಕಿ ಅಪಘಾತ ಮಹಿಳೆ ಸಾವುಃ- ಸವಣೂರ ಪೊಲೀಸ್ ಠಾಣಾ ವ್ಯಾಪ್ತಿ ಸಿದ್ದಾಪುರ ಗ್ರಾಮದ ಶ್ರೀಮತಿ ಅಕ್ಕಮ್ಮ ಕೋಂ ಮಹಾದೇವಪ್ಪ ನವಲೆ ವಯಾ-60 ವರ್ಷ ದಿನಾಂಕ: 27/05/2017 ರಂದು ರಾತ್ರಿ 9-30 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿ ಗ್ಯಾಸ್ ಒಲೆಯಲ್ಲಿ ಅಡಿಗೆ ಮಾಡುತ್ತಿದ್ದಾಗ ಕುಕ್ಕರ ಒಮ್ಮೆಲೇ ಬಸ್ಟ್ ಆಗಿ ಮುಚ್ಚಳ ಗ್ಯಾಸ್ ಒಲೆ ಹತ್ತಿರ ಇದ್ದ ಸೀಮೆಎಣ್ಣಿ ಕ್ಯಾನಗೆ ಬಡೆದಾಗ ಅದು ಉರುಳಿಬಿದ್ದು ಅದರಲ್ಲಿದ್ದ ಸೀಮೆಎಣ್ಣಿ ಚಲ್ಲಿ ಗ್ಯಾಸ್ ಒಲೆಯ ಬೆಂಕಿ ಒಮ್ಮೆಲೇ ತಾನುಟ್ಟ ಪತ್ತಲಕ್ಕೆ ಹತ್ತಿ ಮೈ-ಕೈಗೆ ಬೆಂಕಿ ತಾಗಿ ಮುಖದಿಂದ ಪಾದದ ವರೆಗೆ ಸುಟ್ಟು ಗಾಯಗೊಂಡು ಉಪಚಾರಕ್ಕೆ ಕಡಕೋಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಉಪಚಾರ ಪಡೆದುಕೊಂಡು ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಉಪಚಾರ ಪಡೆಯುತ್ತಿದ್ದಾಗ ಉಪಚಾರ ಫಲಿಸದೇ ದಿನಾಂಕ : 30/05/2017 ರಂದು ರಾತ್ರಿ 08-00 ಗಂಟೆಯ ಸುಮಾರಿಗೆ ಮೃತ ಪಟ್ಟಿರುತ್ತಾಳೆ ವಿನ: ಬಿಟ್ಟರೆ ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಮೃತಳ ಗಂಡ ಮಹದೇವಪ್ಪ ವರದಿ ನೀಡಿದ್ದು ಬಗ್ಗೆ ಕ್ರಮ ಕೈಗೊಂಡಿದೆ.