ಭಾನುವಾರ, ಮೇ 21, 2017

ರಾತ್ರಿ ವೇಳೆಯಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ವ್ಯಕ್ತಿಗಳ ಬಂಧನ

ಪತ್ರಿಕಾ ಪ್ರಕಟಣೆ
ದಿನಾಂಕಃ-20/05/2017

ದಿನಾಂಕಃ 19/05/2017 ರಂದು ಹಾವೇರಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಹಾವೇರಿ ಶಹರದ ದಾನೇಶ್ವರಿ ನಗರದಲ್ಲಿ ಆರೋಪಿತರಾದ 1. ಸಮೀರ ತಂದೆ ಶಬ್ಬೀರ ಅಹ್ಮದ ಖತೀಬ ವೃತ್ತಿ ಗ್ಯಾರೇಜ್ ಕೆಲಸ ವ ಸಾ:ರಾಣೆಬೆನ್ನೂರ ಖತೀಬ ಗಲ್ಲಿ  2. ಮದರಸಾಬ ತಂದೆ ಬಾಷಾಸಾಬ ಗಂಗ್ಯವತ ವೃತ್ತಿ:ಗ್ಯಾರೇಜ್ ಕೆಲಸ ಸಾ:ರಾಣೆಬೆನ್ನೂರ ಮಕಾನ ಗಲಿ ಈ ಎರಡು ಜನ ಆರೋಪಿತರು ಸೇರಿಕೊಂಡು ಹಾವೇರಿ ನಗರದಲ್ಲಿ ಕೀಲಿ ಹಾಕಿದ ಮನೆಗಳನ್ನು ನೋಡಿ ರಾತ್ರಿ ವೇಳೆಯಲ್ಲಿ ಸೈಕಲ್ಲ ಮೋಟಾರ ಮೂಲಕ ಬಂದು ಕಬ್ಬಿಣದ ರಾಡದಿಂದಾ ಮನೆ ಕೀಲಿ ಮುರಿದು ಮನೆಯಲ್ಲಿದ್ದ ಟ್ರಜುರಿಗಳನ್ನು ಮುರಿದು ಒಟ್ಟು ಹಾವೇರಿ ನಗರದಲ್ಲಿ 3 ಮನೆಗಳ್ಳತನ ಮಾಡಿ ಆರೋಪಿತರು ಕೆಲವು ಬಂಗಾರದ ಸಾಮಾನುಗಳನ್ನು ಮಾರಾಟ ಮಾಡಿದ್ದು ಅಲ್ಲದೇ ಮಣಿಪ್ಪುರಂ, ಮುತ್ತೂಟ್ ಪೈನಾನ್ಸದಲ್ಲಿ ಅಡುವು ಇಟ್ಟ ಬಗ್ಗೆ ತನಿಖೆಯಿಂದಾ ತಿಳಿದು ಬಂದಿದ್ದು ಪೈನಾನ್ಸದಲ್ಲಿ ಬಂಗಾರದ ಸಾಮಾನುಗಳನ್ನು ಜಪ್ತ ಮಾಡಿಕೊಂಡಿದ್ದು ಅಲ್ಲದೇ ಎರಡು ಜನ ಆರೋಪಿತರ ಹತ್ತಿರ ಕಳ್ಳತನ ಮಾಡಿದ ಬಂಗಾರದ ಸಾಮಾನುಗಳನ್ನು ಮತ್ತು ಕಳ್ಳತನ ಮಾಡಿದ ಎರಡು ಮೊಬೈಲ್ಲಗಳನ್ನು ಮತ್ತು ಕೃತ್ಯಕ್ಕೆ ಬಳಿಸಿದ ಮೋಟಾರ ಸೈಕಲ್ಲ, ಕಬ್ಬಿಣದ ರಾಡು, ಕಳ್ಳತನ ಮಾಡಲು ಉಪಯೋಗಿಸಿದ ಎರಡು ಕರಿಯ ಹ್ಯಾಂಡಗ್ಲೋಜಗಳನ್ನು ಜಪ್ತ ಮಾಡಿದ್ದು ಆರೋಪಿತರ ಕಡೆಯಿಂದಾ ಒಟ್ಟು ಅಂದಾಜು 180 ಗ್ರಾಂ ಬಂಗಾರ 5,42,900/- ರೂಗಳ ಕಿಮ್ಮತ್ತಿನ ಬಂಗಾರದ ಸಾಮಾನುಗಳನ್ನು ಬಂಗಾರದ ಕರಗಿಸಿದ ಗಟ್ಟಿಗಳನ್ನು ಜಪ್ತ ಮಾಡಿದ್ದು ಇರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ