ಜಿಲ್ಲಾ ಪೊಲೀಸ್ ಕಾಯರ್ಾಲಯ ಹಾವೇರಿ
ದಿನಾಂಕ; 25-03-2015
ಅಪರಾಧಗಳ ಸುದ್ದಿ
ಸಾಗವಾನೆ ಕಟ್ಟಿಗೆ ಕಳ್ಳತನ ಃ- ಹಿರೆಕರೂರ ಪೊಲೀಸ್ ಠಾಣೆ ವ್ಯಾಪ್ತಿ ಹೊಸಳ್ಳಿ ಗ್ರಾಮದ ಪಿಯರ್ಾದಿ ಬಾಬತ್ ಜಮೀನು ಸವರ್ೆ ನಂ: 45/1 ನೇ ಜಮೀನದಲ್ಲಿ. ದಿನಾಂಕ;
19-03-2015 ರಂದು 18-00 ಗಂಟೆಯಿಂದ ದಿ:
20-03-2015 ರಂದು ಮುಂಜಾನೆ 07:00 ಗಂಟೆಯ ನಡುವಿನ ಅವಧಿಯಲ್ಲಿ. ಶಂಭು ತಂದೆ ಗಡ್ಲಪ್ಪ ಮುತ್ತಗಿ, ವಯಾ: 46 ವರ್ಷ, ಜಾತಿ: ಹಿಂದೂ ಲಿಂಗಾಯತ, ಉದ್ಯೋಗ: ವ್ಯವಸಾಯ, ಸಾ: ಹೊಸಳ್ಳಿ.ಇವರಿಗೆ ಸಂಭಂದಿಸಿದ ಜಮೀನು ಸವರ್ೆ ನಂ: 45/1 ನೇದ್ದರ ಜಮೀನಿನಲ್ಲಿದ್ದ 1) 3,1/2
ಅಡಿ ಸುತ್ತಳತೆಯ & 10 ಅಡಿ ಎತ್ತರದ 4 ಸಾಗವಾನಿ ಮರಗಳು, ಅ||ಕಿ||
1,75000/- 2) 3 ಅಡಿ ಸುತ್ತಳತೆಯ & 8 ಅಡಿ ಎತ್ತರದ 5 ಸಾಗವಾನಿ ಮರಗಳು, ಅ||ಕಿ||
1,25000/- ನೇದ್ದವುಗಳನ್ನು ಯಾರೋ ಕಳ್ಳರು ಕಡಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಶಂಭು ಇವರು ದೂರು ಕೊಟ್ಟಿದ್ದು ಪಿ.ಎಸ್.ಐ ಹಿರೆಕರೂರ ಪೊಲೀಸ್ ಠಾಣೆ ರವರು ದೂರು ದಾಖಲಿಸಿಕೊಂಡು ತನಿಖೆ ಕೈಕೊಂಡಿರುವರು.
ಓ.ಸಿ. ಜೂಜಾಟ ವ್ಯಕ್ತಿ ಬಂದನ ಃ- ಹಿರೆಕರೂರ ಪೊಲೀಸ್ ಠಾಣೆ ವ್ಯಾಪ್ತಿ ಹಿರೇಕೆರೂರ ಶಹರದ ಟಿಪ್ಪು ನಗರ ಕ್ರಾಸದ ಸಾರ್ವಜನಿಕ ಸ್ಥಳದಲ್ಲಿ ದಿನಾಂಕ;
24-03-2015 ರಂದು 17-35 ಗಂಟೆಗೆ. ಆರೋಪಿತರು ಮಾಲತೇಶ ತಂದೆ ನಾಗಪ್ಪ ದಿಂದೇರ ವಯಾ 34 ವರ್ಷ ಸಾ: ಹಿರೇಕೆರೂರ ಕಾಳಿದಾಸ ನಗರ ಇವರು ತಮ್ಮ ಪಾಯ್ದೆ ಗೋಸ್ಕರ್ ಸಾರ್ವ ಜನಿಕ ಸ್ಥಳದಲ್ಲಿ ನಿಂತು ಹೋಗು ಬರುವ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿಗಳು ಎಂದು ಕೂಗಿ ಕರೆದು ಅವರಿಂದ ಹಣ ಇಸಿದುಕೊಂಡು ಚೀಟಿ ಬರೆದುಕೊಟ್ಟು ತಾನು ಬರೆದುಕೊಂಡು ತನ್ನ ಪಾಯ್ದೆಗೋಸ್ಕರ ಮುಂಬಯಿ ಪೇಟೆ ಧಾರಣೆಯ ಕೊನೆಯ ಅಂಕಿ ಸಂಖ್ಯೆಗಳ ಸಹಾಯದಿಂದ ಓ.ಸಿ ಎಂಬ ಮಟಕಾ ಜೂಜಾಟ ಆಡುತ್ತಿದ್ದಾಗ ಶ್ರೀ ಶ್ರೀ ಮಹಾಂತೇಶ ಎಂ,ಎಂ ಪಿ, ಎಸ್.ಐ ಹಿರೇಕೆರೂರ ಪೊಲೀಸ್ ಠಾಣೆ ರವರು ರೆಡ್ ಮಾಡಿ ಅವರಿಂದ 440/- ರೂ ಹಾಗೂ ಓ.ಸಿ ಸಲಕರಣಿಗಳನ್ನು ವಶಕ್ಕೆ ತೆಗೆದುಕೊಂಡು ಈ ಬಗ್ಗೆ ಹಿರೆಕರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಸಿಕೊಂಡು ತನಿಖೆ ಕೈಕೊಂಡಿರುವರು.
ರಸ್ತೆ ಅಪಘಾತ ಘಾಯ ಃ- ರಾಣೆಬೆನ್ನೂರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಚೌಡಯ್ಯದಾನಪುರ ರಸ್ತೆ ಕ್ರಾಸ್ ರಾಣೇಬೆನ್ನೂರ-ಗುತ್ತಲ ರಸ್ತೆಯ ಮೇಲೆ ಉತ್ತರಕ್ಕೆ 18 ಕಿ ಮೀ ಅಂತರದಲ್ಲಿ ದಿನಾಂಕ: ದಿನಾಂಕ:
21-03-2015 ರಂದು 12=35 ಗಂಟೆಗೆ ನಮೂದ ತಾ|| ವೇಳೆ ವ ಸ್ಥಳದಲ್ಲಿ ನಮೂದ ಆರೋಪಿತನು ತಾನು ನಡೆಸುತ್ತಿದ್ದ ಮಹೀಂದ್ರಾ ಪ್ಯಾಸೆಂಜರ ಟೆಂಪೋ ನಂ ಕೆಎ 20/7091 ನೇದ್ದನ್ನು ರಾಣೇಬೆನ್ನೂರ-ಗುತ್ತಲ ರಸ್ತೆಯ ಮೇಲೆ ರಾಣೇಬೆನ್ನೂರ ಕಡೆಯಿಂದ ಗುತ್ತಲ ಕಡೆಗೆ ಅತೀ ಜೋರು ವ ತಾತ್ಸಾರತನದಿಂದ ರಸ್ತೆಯ ತುಂಬಾ ಹೊರಳಾಡಿಸುತ್ತಾ ಹೋಗಿ ಚೌಡಯ್ಯದಾನಪೂರ ಕ್ರಾಸ್ ಹತ್ತಿರ ತನ್ನ ಎದುರಿಗೆ ಫಿಯರ್ಾದಿ ರವರು ಗುತ್ತಲ ಕಡೆಯಿಂದ ರಾಣೇಬೆನ್ನೂರ ಕಡೆಗೆ ತನ್ನ ಎಡಬದಿಗೆ ಸಾವಕಾಶವಾಗಿ ನಡೆಯಿಸಿಕೊಂಡು ಹಿರೊಹೊಂಡಾ ಮೋಟಾರ ಸೈಕಲ್ ನಂ;ಕೆಎ-27-ವಾಯ್-5447 ನೆದ್ದಕ್ಕೆ ಢಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ ಸೈಕಲ್ಲ ನಡೆಸುತ್ತಿದ್ದ ಫಿಯರ್ಾದಿಗೆ ಬಲಗೈ ಬೆರಳುಗಳಿಗೆ,ಸೊಂಟಕ್ಕೆ, ಬಲಮೋಣಕಾಲಿಗೆ ರಕ್ತಗಾಯ ಪೆಟ್ಟುಗೊಳಿಸಿ ಗಾಯಾಳುವಿಗೆ ಉಪಚಾರಕ್ಕೆ ಸಹಕರಿಸದೇ ಸಂಗ್ತಿಯನ್ನು ಠಾಣೆಗೆ ತಿಳಿಸದೇ ಇದ್ದ ಅಪರಾಧ. ಈ ಬಗ್ಗೆ ಪುಟ್ಟಪ್ಪ ತಂದೆ ಭೀಮಪ್ಪ ಮಡಿವಾಳರ ಇವರು ದೂರು ಕೊಟ್ಟಿದ್ದು ಪಿ.ಎಸ್.ಐ ಬಂಕಾಪೂರ ಪೊಲೀಸ್ ಠಾಣೆ ರವರು ದೂರು ದಾಖಲಸಿಕೊಂಡು ತನಿಖೆ ಕೈಕೊಂಡಿರುವರು.
ವಿದ್ಯುತ್ ನೆಲಕ್ಕೆ ಗ್ರೌಂಡ್ ಆಗಿದ್ದರಿಂದ ವ್ಯಕ್ತಿ ಸಾವು ಃ- ಕುಮಾರಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿ ನಧಿಹರಳಹಳ್ಳಿ ಗ್ರಾಮ ಹದ್ದಿ ಹನುಮಂತಪ್ಪ ತಂದೆ ನಿಂಗಪ್ಪ ಬಜಾರಿ ಇವರ ಜಮೀನದ ಬದುವಿನಲ್ಲಿರುವ ಜೋಡು ವಿದ್ಯುತ್ ಕಂಬದ ಟಿಸಿ ಹತ್ತಿರ ಭತ್ತದ ಗದ್ದೆಯ ಮೇಲೆ ಕುಮಾರಪಟ್ಟಣಂ ಪಿ.ಎಸ್. ಹದ್ದು ಠಾಣೆಯಿಂದ ಉತ್ತರಕ್ಕೆ 12 ಕಿ.ಮಿ. ಅಂತರದಲ್ಲಿ ಶೇಕಪ್ಪ ತಂದೆ ದಿಳ್ಳೆಪ್ಪ ಕುರುಬರ ವಯಾ:38 ವರ್ಷ. ವೃತ್ತಿ ವ್ಯವಸಾಯ. ಸಾ:ನದೀಹರಳಹಳ್ಳಿ, ತಾ:ರಾಣೇಬೆನ್ನೂರು ಇವನು ತಮ್ಮ ಬಾಬತ್ತ ನದೀಹರಳಹಳ್ಳಿ ಗ್ರಾಮದ ಗುಗ್ಗರಿಪಟ್ಟಿ ಭತ್ತದ ಜಮೀನಕ್ಕೆ ನೀರು ಹಾಯಿಸಲು ಅಂತಾ ಹೋಗಿ ಡಿವಾಲ್ವ್ ರಾಡ್ ಹಾಕಲು ಅಂತಾ ಹನುಮಂತಪ್ಪ ತಂದೆ ನಿಂಗಪ್ಪ ಬಜಾರಿ ಇವರ ಜಮೀನದ ಬದುವಿನಲ್ಲಿರುವ ಜೋಡು ವಿದ್ಯುತ್ ಕಂಬದ ಟಿಸಿ ಹತ್ತಿರ ಹೋಗಿ ದಿನಾಂಕ:25/03/2015
ರಂದು ಬೆಳಗಿನ 06-30 ಗಂಟೆಯ ಸುಮಾರಿಗೆ ಟಿಸಿಯಲ್ಲಿದ್ದ ಡಿವಾಲ್ವ್ ರಾಡನ್ನು ಹಾಕುತ್ತಿರುವಾಗ ಅಕಸ್ಮಾತಾಗಿ ವಿದ್ಯುತ್ ತಂತಿಗಳು ಒಂದಕ್ಕೊಂದು ಕೂಡಿ (ತಗುಲಿ) ಅದರಿಂದ ಕಂಬದಲ್ಲಿ ವಿದ್ಯುತ್ ಪ್ರವಹಿಸಿ ಎರಡು ತಂತಿಗಳು (ಮೇನ್ ಲೈನ್) ಹರಿದು ನೆಲಕ್ಕೆ ಬಿದ್ದಾಗ ಢಂ ಅಂತಾ ಶಬ್ದ ಬಂದು ವಿದ್ಯುತ್ ನೆಲಕ್ಕೆ ಗ್ರೌಂಡ್ ಆಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಈ ಘಟನೆಯು ಆಕಸ್ಮಿಕವಾಗಿದ್ದು ಈ ಬಗ್ಗೆ ಬೇರೆ ಯಾವುದೇ ಸಂಶಯ ವಗೈರೆ ಇರುವುದಿಲ್ಲ. ಈ ಬಗ್ಗೆ ಕೆ,ಇ,ಬಿ ಯವರು ಬಂದು ಘಟನಾ ಸ್ಥಳ ಪರಿಶೀಲಿಸಿ ನೋಡಿದ ನಂತರ ಈಗ ತಡವಾಗಿ ಠಾಣೆಗೆ ಬಂದು ಸದರಿ ಘಟನೆಯ ಬಗ್ಗೆ ಮೃತನ ತಂದೆ ವರದಿ ನೀಡಿದ ಪ್ರಕಾರ ಪಿ.ಎಸ್.ಐ ಕುಮಾರಪಟ್ಟಣ ಪೊಲೀಸ್ ಠಾಣೆ ರವರು ದೂರು ದಾಖಲಸಿಕೊಂಡು ತನಿಖೆ ಕೈಕೊಂಡಿರುವರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ