ಜಿಲ್ಲಾ ಪೊಲೀಸ್ ಕಾಯರ್ಾಲಯ ಹಾವೇರಿ
ದಿನಾಂಕ; 28-07-2015
ಅಪರಾಧಗಳ ಸುದ್ದಿ
ದಿನಾಂಕ; 28-07-2015
ಅಪರಾಧಗಳ ಸುದ್ದಿ
ಮೋಟರ್ ಸೈಕಲ್ ಕಳ್ಳತನ- ರಾಣೆಬೆನ್ನುರ ಶಹರ ಪೊಲೀಸ್ ಠಾಣಾ ವ್ಯಾಪ್ತಿ ರಾಣೆಬೆನ್ನೂರ ರೈಲ್ವೇ ಸ್ಟೇಶನ್ ಹತ್ತಿರ ನಿಲ್ಲಿಸಿದ ಪಿರ್ಯಾದಿ ಬಾಬತ್ತ ಒಂದು ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ಲ ನಂ ಕೆಎ-27/ಆರ್-321 ಅ:ಕಿ: 25.000=00 ರೂ ಗಳು ನೇದ್ದನ್ನು ದಿನಾಂಕಃ 27-07-2015 ರಂದು 10-30 ಗಂಟೆಗೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಮಹೇಶ ತಂದೆ ತಿರಕಪ್ಪ ಕೊಪ್ಪದ ಸಾ; ರಾಣೇಬೆನ್ನೂರು ಇವರು ದೂರು ಕೊಟ್ಟಿದ್ದು ಪಿ.ಎಸ್ ಐ ರಾಣೆಬೆನ್ನೂರ ಶಹರ ಪೊಲೀಸ್ ಠಾಣೆ ರವರು ದೂರು ದಾಖಲಿಸಿಕೊಂಡು ತನಿಖೆ ಕೈಕೊಂಡಿರುವರು.
ಮೋಟರ್ ಸೈಕಲ್ ಕಳ್ಳತನ- ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿ ಹಾವೇರಿಯ ದಾನೇಶ್ವರಿ ನಗರ 2ನೇ ಕ್ರಾಸ್, ಎ ಬ್ಲಾಕ್ದಲ್ಲಿ ತಮ್ಮ ಮನೆಯ ಎದುರಿಗೆ ಹ್ಯಾಂಡ್ಲಾಕ್ ಮಾಡದೇ ಚಾವಿಯನ್ನು ಗಾಡಿಯಲ್ಲಿ ಬಿಟ್ಟು ನಿಲ್ಲಿಸಿದ 1) ಊಔಓಆಂಔ ಂಅಖಿಗಿಂ ಮೋಟರ ಸೈಕಲ್ ನಂ: ಏಂ-27/ಇಅ-7573 2) ಚೆಸ್ಸಿ ನಂ. ಒಇ4ಎಈ491ಊಇ8035315 3) ಇಂಜೆನ್ ನಂ. ಎಈ49ಇ80038621 4) ಮಾಡಲ್-2014 5) ಬಣ್ಣ-ಕಪ್ಪು ನೀಲಿ 6) ಅಃಕಿಃ 45000=00 ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಅಶೋಕ ಈಶಪ್ಪ ಕೊಡ್ಲ್ಯಾಳ ವಯಾ: 35 ವರ್ಷ, ಜ್ಯಾತಿ ಲಿಂಗವಂತ ಇವರು ದೂರು ಕೊಟ್ಟಿದ್ದು ಪಿ.ಐ ಹಾವೇರಿ ಶಹರ ಪೊಲೀಸ್ ಠಾಣೇ ರವರು ದೂರು ದಾಖಲಿಸಿಕೊಂಡು ತನಿಖೆ ಕೈಕೊಂಡಿರುವರು.
ಓ.ಸಿ ಜೂಜಾಟ ವ್ಯಕ್ತಿ ಬಂದನ- ಕಾಗಿನೆಲೆ ಪೋಲಿಸ ಠಾಣೆಯ ಹದ್ದಿ ಪೈಕಿ ಕಾಗಿನೆಲೆ ಗ್ರಾಮದ ಬಸ್ಸ ಸ್ಟ್ಯಾಂಡ ಮುಂದೆ ಸಾರ್ವಜನಿಕ ರಸ್ತೇಯ ಮೇಲೆ ದಿನಾಂಕ;-27-07-2015 ರಂದು 17-00 ಗಂಟೆಗೆ ನಮೂದ ಆರೋಪಿ ಜಫರುಲ್ಲ ತಂದೆ ಅಬ್ದುಲ್ಸಾಬ ದೇವಿಹೊಸೂರ ಈತನು ತನ್ನ ಪಾಯ್ದೇಗೋಸ್ಕರ ಸಾರ್ವಜನಿಕ ರಸ್ತೇಯ ಮೇಲೆ ನಿಂತುಕೊಂಡು ರಸ್ತೇಯಲ್ಲಿ ಬರುವ ಹೋಗುವ ಜನರಿಗೆ 1-00 ರೂ.ಗೆ 80-00 ರೂ ಪಟ್ಟು ಕೊಡುವದಾಗಿ ಹೇಳಿ ಜನರಿಗೆ ನಂಬಿಸಿ ಜನರಿಂದ ಹಣ ಪಡೆದು ಬಾಂಬೆ ಮಟಕಾದ ಮೊದಲ ಮತ್ತು ಕೊನೆಯ ಅಂಕಿ ಸಂಖ್ಯೆಗಳ ಮೇಲೆ ನಡೆಯುವ ಓ.ಸಿ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುವಾಗ ಶ್ರೀ ಎನ್.ಎಚ್.ಹೊಸೂರ ಪಿ.ಎಸ್.ಐ ಕಾಗಿನೆಲೆ ಪಿ.ಎಸ್ ರವರು ರೆಡ್ ಮಆಡಿ ಅವರಿಂದ ರೋಕ ರಕಂ 300-00 ರೂ,ಗಳು ಮತ್ತು ಓಸಿ ಸಲಕರಣೆಗಳು ಹಾಗೂ ಒಂದು ವಾಮಂ ಕಂಪನಿಯ ಮೋಬೈಲ್ ಪೋನ್ ಸಮೇತ ಹಿಡಿದು ಗ್ಗೆ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಕೊಂಡಿರುವರು.
ಈಜು ಬಾರದ ನೀರಿನಲ್ಲಿ ಮುಳಗಿ ವ್ಯಕ್ತಿ ಸಾವು- ರಟ್ಟಿಹಳ್ಳಿ ಪೊಲಿಸ್ ಠಾಣಾ ವ್ಯಾಪ್ತಿ ಹಿರೇಕಬ್ಬಾರ ಗ್ರಾಮದ ಸಣ್ಣತಿಮ್ಮಪ್ಪ ಗಿಡ್ಡಪ್ಪನವರ ಇವರ ಜಮೀನ ಹತ್ತಿರ ಇರುವ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಠಾಣೆಯಿಂದ ದಕ್ಷಿಣಕ್ಕೆ 24 ಕಿ.ಮಿ ಅಂತರದಲ್ಲಿ ನಮೂದ ಮೃತನ ತಂದೆ ಅವನ ಅಣ್ಣತಮ್ಮಂದಿರರು ಒಟ್ಟು ಐದು ಜನರು ಇದ್ದು ಅವರೆಲ್ಲರಿಗೂ ಸಂಭಂದಪಟ್ಟಂತೆ ಒಟ್ಟು 13 ಎಕರೆ ಜಮೀನು ಇದ್ದು ಸದರ ಜಮೀನನ್ನು ಮೃತ ಮತ್ತು ಮೃತನ ಚಿಕ್ಕಪ್ಪಂದಿರರು ಅವರ ಮಕ್ಕಳು ಸೇರಿ ಸಾಗು ಮಾಡುತ್ತಾ ಬಂದಿದ್ದು ಈಗ ಸುಮಾರು 2-3 ವರ್ಷಗಳ ಹಿಂದೆ ತಡಕನಹಳ್ಳಿ ಕೆ.ವಿ.ಜಿ ಬ್ಯಾಂಕಿನಲ್ಲಿ 6 ಲಕ್ಷ ಸಾಲ ಮತ್ತು ಹಿರೇಕಬ್ಬಾರ ಗ್ರಾಮದಲ್ಲಿ 50 ಸಾವಿರ ಸಾಲ ಮಾಡಿದ್ದು ಈಗ ಎರಡು ವರ್ಷದಿಂದ ಮಳೆ ಜಾಸ್ತಿ ಆಗಿ ಮತ್ತು ಮಳೆ ಕಡಿಮೆ ಆಗಿ ಜಮೀನದಲ್ಲಿ ಬಿತ್ತನೆ ಮಾಡಿದ ಬೆಳೆ ಹಾಳಾಗಿ ಹೋಗಿದ್ದು ಅದಕ್ಕೆ ಮನಸ್ಸಿಗೆ ಹಚ್ಚಿಕೊಂಡು ಮೃತನು ತನ್ನ ತಂದೆ ಚಿಕ್ಕಪ್ಜಂದಿರಗೆ ಬ್ಯಾಂಕಿನಲ್ಲಿ ಮಾಡಿದ ಸಾಲ ಹೇಗೆ ತೀರಿಸುವದು ಅಂತಾ ಅನ್ನುತ್ತಿದ್ದು ಅದಕ್ಕೆ ಮೃತನ ತಂದೆ ಹಾಗೂ ಚಿಕ್ಕಪ್ಪಂದಿರರು ಈ ವರ್ಷ ಬೆಳೆದು ತೀರಿಸದರಾಯಿತು ಅಂತಾ ದೈರ್ಯ ಹೇಳಿದ್ದರು. ಈ ವರ್ಷ ಎಲ್ಲ 13 ಎಕರೆ ಜಮೀನಿಗೆ ಗೋವಿನ ಜೋಳ, ಊಟದ ಜೋಳ ಬಿತ್ತನೆ ಮಾಡಿದರೂ ಸಹ ಈ ವರ್ಷ ಮಳೆ ಕಡಿಮೆ ಆಗಿದ್ದರಿಂದ ಬಿತ್ತಿದ ಬೆಳೆ ಎಲ್ಲಾ ಒಳಗುತ್ತಿದ್ದನ್ನು ನೋಡುತ್ತಿದ್ದ ಮೃತನು ಈ ದಿವಸ ದಿ:27/07/2015 ರಂದು ಮುಂಜಾನೆ 08-00 ಗಂಟೆಗೆ ತನ್ನ ತಂದೆ ಮತ್ತು ಚಿಕ್ಕಪ್ಪರಿಗೆ ಈ ವರ್ಷ ಬಿತ್ತನೆ ಮಾಡಿದ ಬೆಳೆಯೆಲ್ಲಾ ಹಾಳಾಗಿ ಹೋಗುತ್ತಿದ್ದು ಹೇಗೆ ಸಾಲ ತೀರಿಸುವದು ಅಂತಾ ಅನ್ನುತ್ತಿದ್ದು ಅದನ್ನೆ ಮನಸ್ಸಿಗೆ ಬೇಜಾರ ಮಾಡಿಕೊಂಡು ಮುಂಜಾನೆ 09-20 ಗಂಟೆಗೆ ತುಂಗಾ ಮೇಲ್ದಂಡೆ ಕಾಲುವೆಗೆ ಹಾರಿ ಹರಿಯುವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಈಜು ಬಾರದೇ ನೀರಿನಲ್ಲಿ ಮುಳುಗಿ ಮರಣ ಹೊಂದಿರುತ್ತಾನೆ ಅಂತಾ ಆಶಾ ಕೋಂ ಗೋಪಾಲಪ್ಪ ಮಲ್ಲಾಡದ ಸಾ:ಹಿರೇಕಬ್ಬಾರ ತಾ:ಹಿರೇಕೇರೂರ ಇವರು ವರದಿ ಕೊಟ್ಟಿದ್ದು ಈದನ್ನು ಪಿ.ಎಸ ಐ ರಟ್ಟಿಹಳ್ಳಿ ಪೊಲೀಸ್ ಠಾಣೆ ರವರು ದೂರು ದಾಖಲಿಸಿಕೊಂಡು ತನಿಖೆ ಕೈಕೊಂಡಿರುವರು.
ಉರುಲು ಹಾಕಿಕೊಂಡು ವ್ಯಕ್ತಿ ಸಾವು- ರಟ್ಟೀಹಳ್ಳಿ ಪಿಎಸ್ ಹದ್ದಿಯ ರೇವಣೆಪ್ಪ ಬಳ್ಳೇರ ಸಾ:ಮೇದೂರ ಇವರ ಬಾಭತ್ತ ಗಂಗಾಯಿಕೊಪ್ಪ ಗ್ರಾಮದ ಹದ್ದಿಯ ಜಮೀನದ ಬದುವಿನಲ್ಲಿದ್ದ ಅತ್ತಿಮರದ ಕೊಂಬೆಗೆ ಪಿ.ಎಸ್.ದಿಂದ ದಕ್ಷಣಕ್ಕೆ 15 ಕಿ.ಮೀ ಅಂತರದಲ್ಲಿ 27/07/2015 ರಂದು 10-00 ಗಂಟೆಯಿಂದ ಮಧ್ಯಾಹ್ನ 12-30 ಗಂಟೆಯ ನಡುವಿನ ಅವಧಿಯಲ್ಲಿ .ಮೃತನು ತಿಪ್ಪಾಯಿಕೊಪ್ಪ ಗ್ರಾಮದ ಕೆ,ವಿ,ಜಿ (ಕನಟಕ ವಿಕಾಸ ಗ್ರಾಮೀಣ ಬ್ಯಾಂಕ್)ದಲ್ಲಿ ಬೆಳೆ ಸಾಲ ಅಂತಾ 70,000/-ರೂಗಳನ್ನು, ಬಂಗಾರದ ಸಾಲ ಅಂತಾ 50,000/- ರೂಗಳನ್ನು ಮತ್ತು ಹೌಸಿಂಗ್ ಲೋನ್ ಅಂತಾ 10,00,000/- ರೂಗಳನ್ನು ಹಾಗೂ ಕೈಸಾಲ ಅಂತಾ 3,00,000/- ರೂಗಳನ್ನು ಸಾಲಮಾಡಿದ್ದು ಬೆಳೆ ಬಾರದೇ ಸಾಲ ತೀರಿಸಲಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:27/07/2015 ರಂದು ಮುಂಜಾನೆ 10-00 ಗಂಟೆಯಿಂದ ಮದ್ಯಾಹ್ನ 12-30 ಗಂಟೆಯ ನಡುವಿನ ಅವಧಿಯಲ್ಲಿ ಗಂಗಾಯಿಕೊಪ್ಪ ಗ್ರಾಮದ ಹದ್ದಿಯ ರೇವಣೇಪ್ಪ ಬಳ್ಳೇರ ಇವರ ಬಾಬತ್ತ ಜಮೀನದ ನದುವಿನಲ್ಲಿದ್ದ ಅತ್ತಿಮರದ ಕೊಂಬೆಗೆ ಪ್ಲಾಸ್ಟಿಕ್ ಹುರಿಯಿಂದಾ ಕಟ್ಟಿಕೊಂಡು ತನ್ನಷ್ಟಕ್ಕೆ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ಅಂತಾ ಶ್ರೀಮತಿ ಹೇಮಾ ಕೋಂ ಗಿರೀಶ ಬಳ್ಳೇರ ವಯಾ:28 ವರ್ಷ ಸಾ||ಮೇದೂರ ಇವರು ದೂರು ಕೊಟ್ಟಿದ್ದು ಪಿ.ಎಸ್.ಐ ರಟ್ಟಿಹಳ್ಳಿ ಪೊಲೀಸ್ ಠಾಣೆ ರವರು ದೂರು ದಾಖಲಸಿಕೊಂಡು ತನಿಖೆ ಕೈಕೊಂಡಿರುವರು.
ಓ.ಸಿ ಜೂಜಾಟ ವ್ಯಕ್ತಿ ಬಂದನ- ಗುತ್ತಲ ಪೋಲಿಸ ಠಾಣೆಯ ಹದ್ದಿ ಪೈಕಿ ಅಜ್ಜಯ್ಯನಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಅ,ನಂ 1 ಹೇಮಣ್ಣ ಚನ್ನಬಸಪ್ಪ ಗಂಗಣ್ಣವರ ಸಾ|| ಗುತ್ತಲ ನೇದವನು ತನ್ನ ಪಾಯ್ದೆಗೊಸ್ಕರ ಮುಂಬೈ ಪೇಟೆಯ ಕೊನೆಯ ಅಂಕಿ ಸಂಖ್ಯೆಗಳ ಸಹಾಯದಿಂದ ರಸ್ತೆಯ ಮೇಲೆ ಬರ ಹೊಗುವ ಒಂದು ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಕೂಗಿ ಕರೆದು ಜನರಿಂದ ಹಣ ಪಡೆದುಕೊಂಡು ಓ ಸಿ ಎಂಬ ನಸೀಬದ ಮಟ್ಕಾ ಚೀಟಿ ಬರೆಯುತ್ತಿದ್ದಾಗ ಸಿಕ್ಕಿದ್ದು ಅಲ್ಲದೆ ಓ ಸಿ ಪಟ್ಟಿಯನ್ನು ಆರೋಪಿ ಅ,ನಂ 2 ನೇದವನು ಪ್ರತಿ ರವಿವಾರ ಗುತ್ತಲಕ್ಕೆ ಬಂದು ಓ ಸಿ ಪಟ್ಟಿಯನ್ನು ಪಡೆದುಕೊಂಡು ಇಬ್ಬರು ಸಾರ್ವಜನಿಕರಿಗೆ ಮೋಸದಾಟ ಆಡಿಸಿ ಅವರಿಂದ ಹಣ ಪಡೆದು ಸಾರ್ವಜನಿಕರಿಗೆ ಮೊಸ ವಂಚನೆ ಮಾಡುವ ಕಾಲಕ್ಕೆ ಪಿ.ಎಸ್.ಐ ಗುತ್ತಲ ಪೊಲೀಸ್ ಠಾಣೆ ರವರು ರೆಡ ಮಾಡಿ ಈ ಬಗ್ಗೆ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುವರು.
ಓ.ಸಿ ಜೂಜಾಟ ವ್ಯಕ್ತಿ ಬಂದನ- ಕಾಗಿನೆಲೆ ಪೋಲಿಸ ಠಾಣೆಯ ಹದ್ದಿ ಪೈಕಿ ಮತ್ತೂರ ಗ್ರಾಮದ ಬಸ್ಸ ಸ್ಟ್ಯಾಂಡ ಮುಂದೆ ಸಾರ್ವಜನಿಕ ರಸ್ತೇಯ ಮೇಲೆ ದಿನಾಂಕ;-28-07-2015 ರಂದು 11-00 ಗಂಟೆಗೆ ನಮೂದ ಆರೋಪಿ 1 ಮಂಜಪ್ಪ ತಂದೆ ಕರಿಯಪ್ಪ ಉಪ್ಪುಣಸಿ ನೇದ್ದವನು ತನ್ನ ಪಾಯ್ದೇಗೋಸ್ಕರ ಸಾರ್ವಜನಿಕ ರಸ್ತೇಯ ಮೇಲೆ ನಿಂತುಕೊಂಡು ರಸ್ತೇಯಲ್ಲಿ ಬರುವ ಹೋಗುವ ಜನರಿಗೆ 1-00 ರೂ.ಗೆ 80-00 ರೂ ಪಟ್ಟು ಕೊಡುವದಾಗಿ ಹೇಳಿ ಜನರಿಗೆ ನಂಬಿಸಿ ಜನರಿಂದ ಹಣ ಪಡೆದು ಬಾಂಬೆ ಮಟಕಾದ ಮೊದಲ ಮತ್ತು ಕೊನೆಯ ಅಂಕಿ ಸಂಖ್ಯೆಗಳ ಮೇಲೆ ನಡೆಯುವ ಓ.ಸಿ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುವಾಗ ರೋಕ ರಕಂ 300-00 ರೂ,ಗಳು ಮತ್ತು ಓಸಿ ಸಲಕರಣೆಗಳು ಹಾಗೂ ಒಂದು ಆರೋಪಿ ನಂ 2 ನೇದ್ದವನು ಓ ಸಿ ಸಂಖ್ಯೆಯನ್ನು ಬರೆಸುವಾಗ ರೊಕ್ಕ ರಖಂ 90 ರೂ ಮತ್ತು ಓ ಸಿ ನಂಬರ್ ಬರೆದ 2 ಚೀಟಿಗಳನ್ನು ಕೊಡುತ್ತಿರುವಾಗ ಪಿ.ಎಸ್.ಐ ಕಾಗಿನೆಲೆ ಪೊಲೀಸ್ ಠಾಣೆ ರವರು ರೆಡ ಮಾಡಿ ಅವರಿಂದ ಹಣ ಮತ್ತು ಓ.ಸಿ.ಚೀಟಿಗಳನ್ನು ವಶಕ್ಕೆ ತೆಗೆದುಕೊಂಡು ದೂರು ದಾಖಲಿಸಿಕೊಂಡು ತನಿಖೆ ಕೈಕೊಂಡಿರುವರು.
ಮೋಟರ್ ಸೈಕಲ್ ಕಳ್ಳತನ- ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿ ಹಾವೇರಿಯ ಹಾವೇರಿಯ ವಿದ್ಯಾನಗರ [ಪಶ್ಚಿಮ] ಪಠಾಣ ವಕೀಲರ ಮನೆಯ ಎದುರಿಗೆ [ಠಾಣೆಯಿಂದ ಉತ್ತರಕ್ಕೆ 0.5 ಕಿ ಮೀ ಅಂತರದಲ್ಲಿ ಹ್ಯಾಂಡ್ಲಾಕ್ ಮಾಡದೇ ನಿಲ್ಲಿಸಿದ 1) ಹಿರೋ ಸ್ಲೇಂಡರ ಪ್ರೋ ಮೋಟರ ಸೈಕಲ್ ನಂ: ಏಂ-27/ಇಅ-4900 2) ಚೆಸ್ಸಿ ನಂ. ಒಃಐಊಂ10ಂ3ಇಊಉ74057 3) ಇಂಜೆನ್ ನಂ. ಊಂ10ಇಐಇಊಉ10178 4) ಮಾಡಲ್-2014 5) ಬಣ್ಣ-ಕಪ್ಪು 6) ಅಃಕಿಃ 40,000=00 ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಅರುಣ ತಂದೆ ಸುಭಾಸಪ್ಪ ಮೇಗಳಮನಿ ಇವರು ದೂರು ಕೊಟ್ಟಿದ್ದು ಪಿ.ಐ ಹಾವೇರಿ ಶಹರ ಪೊಲೀಸ್ ಠಾಣೇ ರವರು ದೂರು ದಾಖಲಿಸಿಕೊಂಡು ತನಿಖೆ ಕೈಕೊಂಡಿರುವರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ