f¯Áè ¥ÉÆ°Ã¸ï PÁAiÀiÁð®AiÀÄ ºÁªÉÃj
¢£ÁAPÀ: 11-09-2016
C¥ÀgÁzsÀUÀ¼À ¸ÀÄ¢Ý.
ರಸ್ತೆ
ಅಪಘಾತ ಗಾಯಃ- ದಿನಾಂಕಃ11-09-2016 ರಂದು
ಮದ್ಯಾಹ್ನ 01:40 ಗಂಟೆ ವೇಳೆಗೆ ಸ್ವರೂಪ ಮುರಿಗೆಪ್ಪ ಮಂಡಕ್ಕಿ ಈತನು ತನ್ನ ಮೋಟಾರ ಸೈಕಲ್ ರಜಿಸ್ಟರ ನಂಬರ ಕೆಎ-27/ಇ.ಜಿ-5357 ನೇದ್ದನ್ನು ಹಳೆ ಪಿ ಬಿ ರಸ್ತೆಯ ಮೇಲೆ ಸಿದ್ದಪ್ಪ ಸರ್ಕಲ್ ಕಡೆಯಿಂದ ಜಿ ಎಚ್ ಕಾಲೇಜ್ ಕಡೆಗೆ ಅತೀ ಜೋರಿನಿಂದ ಮತ್ತು ತಾತ್ಸಾರತನದಿಂದ ಚಲಾಯಿಸಿಕೊಂಡು ಬಂದು ಪಂಡೀತ ದವಾಖಾನೆ ಹತ್ತಿರ ಸಂಗೀತ ಮೋಬಲ್ ಅಂಗಡಿ ಎದುರಿಗೆ ರಸ್ತೆ ದಾಟುತ್ತಿದ್ದ ಪಿರ್ಯಾದಿಯ ತಾಯಿ ಸಾವಿತ್ರಮ್ಮ ಬಸಾಪುರ ಇವರಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ, ರಸ್ತೆಯ ಮೇಲೆ ಕೆಡವಿ ಹಿಂದೆಲೆಗೆ ಭಾರಿ ಸ್ವರೂಪದ ಗಾಯ ಪಡಿಸಿದ್ದಲ್ಲದೆ ತಾನು ಕೂಡ ಮೋಟಾರ ಸೈಕಲ್ ಹಾಕಿಕೊಂಡು ಬಿದ್ದು ತನಗೂ ಕೂಡ ಗಾಯಪಡಿಸಿಕೊಂಡ ಅಪರಾಧ.
ಮನುಷ್ಯ
ಕಾಣೆಃ- ಇದರಲ್ಲಿಯ ವರದಿಗಾರರು ಕವಿತಾ ಮರಿಯಮ್ಮನವರ
ರವರ ಗಂಡ ಕುಮಾರ ತಂದೆ ರಂಗಪ್ಪ ಮರಿಯಮ್ಮನವರ ವಯಾ-26 ವರ್ಷ ಸಾ ; ರಾಣೆಬೆನ್ನೂರು ಹರಳಯ್ಯ ನಗರ ಈತನು ನಗರ ಸಬೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದು ಸದರೀಯವನು ಸ್ವಲ್ಪ ಬುದ್ದಿ ಮಾಂದನಿದ್ದು ದಿನಾಂಕ ; 22-08-2016 ರಂದು 18-00 ಗಂಟೆಗೆ ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಇದುವರೆಗೂ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣಿಯಾಗಿರುತ್ತಾನೆ ಕಾಣಿಯಾಗಿ ಹೋದ ನನ್ನ ಗಂಡನಿಗೆ ಹುಡುಕಿ ಕೊಡಲು ವಿನಂತಿ ಅಂತಾ ವಗೈರೆ ವರದಿಯಲ್ಲಿ ನಮೂದ ಇರುತ್ತದೆ.
ಉರುಲು ಹಾಕಿಕೊಂಡು ಅನಾಮಧೇಯ ವ್ಯಕ್ತಿ ಸಾವುಃ- ದಿನಾಂಕ 11/09/2016
ರಂದು ಮುಂಜಾನೆ 06-00 ಗಂಟೆಯಿಂದ 10-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಅನಾಮಧೇಯ ಗಂಡಸ್ಸು ವಯಾ 50-55 ವರ್ಷ ಹೆಸರು ವಿಳಾಸ ತಿಳಿದು ಬಂದಿಲ್ಲಾ. ಈತನು ತನಗಿದ್ದ ಯಾವುದೋ ಸಮಸ್ಯೆಯಿಂದ ಬಳಲಿ ಹಾವೇರಿ ಕೊಳ್ಳೂರ ಮಡಿ ರಸ್ತೆಯಲ್ಲಿರುವ ಸೀಮೆಎಣ್ಣಿ ಬಸಣ್ಣರವರ ಹೊಲದಲ್ಲಿರುವ ಬನ್ನಿಗಿಡದ ಪಕ್ಕದಲ್ಲಿರುವ ಕಂಪೌಂಡ ಮೇಲೆ ಹತ್ತಿ ಪ್ಲಾಸ್ಟಿಕ್ ಹಗ್ಗದ ಒಂದು ತುದಿಯನ್ನು ಬನ್ನಿಗಿಡದ ಕೊಂಬೆಗೆ ಕಟ್ಟಿ, ಇನ್ನೊಂದು ತುದಿಯನ್ನು ಕೊರಳಿಗೆ ಕಟ್ಟಿಕೊಂಡು ಅಲ್ಲಿಂದ ಕೆಳಗೆ ಹಾರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬರುತ್ತದೆ. ಅವನು ಯಾವ ಕಾರಣಕ್ಕಾಗಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅನ್ನುವುದು ಸಂಶಯವಿರುತ್ತದೆ ಅಂತಾ ವರದಿಯಲ್ಲಿ ನಮೂದ ಇರುತ್ತದೆ.
ಆಕಸ್ಮಿಕ ಬೆಂಕಿ ತಗುಲಿ ಮಹಿಳೆ ಸಾವುಃ- ಶಿಗ್ಗಾಂವ ಪೊಲಿಸ್ ಠಾಣಾ ಹದ್ದಿ ಪೈಕಿ, ಹುಲಗೂರ ಗ್ರಾಮದ ಮೃತಳ ಮನೆಯಲ್ಲಿ, ಇದರಲ್ಲಿಯ ಮೃತಳಾದ ಶ್ರೀಮತಿ ಶಾಹೀನಾಬಾನು ಕೊಂ ರಿಯಾಜಅಹ್ಮದ ಬಾವಿಕಟ್ಟಿ ವಯಾ 45 ವರ್ಷ ಇವಳಿಗೆ ಕಳೆದ 3-4 ತಿಂಗಳಿನಿಂದ ಮಾನಸಿಕವಾಗಿ ಅಸ್ತವ್ಯಸ್ತವಾಗಿದ್ದೂ ಉಪಚಾರ ಕೊಡಿಸಿದರೂ ಗುಣವಾಗಿರಲಿಲ್ಲಾ. ನಿನ್ನೆ ದಿನಾಂಕಃ 10-09-2016
ರಂದು ಮದ್ಯಾಹ್ನ 4-00 ಗಂಟೆಯ ಸುಮಾರಿಗೆ ಸಿಲಿಂಡರ ಹಚ್ಚಿ ಕೆಲಸ ಮಾಡಲು ಹೋದಾಗ ಆಕಸ್ಮಾತ ಅವಳ ಉಟ್ಟ ಸಿರೇಗೆ ಬೆಂಕಿ ತಗುಲಿ ಸುಟ್ಟ ಘಾಯಗಳಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲ ಮಾಡಿದಾಗ ಗುಣವಾಗದೇ ಈ ದಿವಸ ದಿನಾಂಕಃ 11-09-2016
ರಂದು ಮುಂಜಾನೆ 11-10 ಗಂಟೆಗೆ ಮರಣ ಹೊಂದಿರುತ್ತಾಳೆ ವಿನಃ ಅವಳ ಮರಣದಲ್ಲಿ ಸಂಶಯವಿರುವದಿಲ್ಲಾ ಮುಂದಿನ ಕ್ರಮ ಜರೂಗಿಸಬೇಕು ಅಂತಾ ವರದಿ ಇದ್ದ ಮೇರೆಗೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ