ಮಂಗಳವಾರ, ಸೆಪ್ಟೆಂಬರ್ 13, 2016

Haveri Dist. Crime News on Sep 09, 2016



f¯Áè ¥Éưøï PÁAiÀiÁð®AiÀÄ ºÁªÉÃj
¢£ÁAPÀ: 09-09-2016
C¥ÀgÁzsÀUÀ¼À ¸ÀÄ¢Ý.

ಅಕ್ರಮ ಮರುಳು ಗಣಿಗಾರಿಕೆಃ- ರಟ್ಟಿಹಳ್ಳಿ ಪೋಲಿಸ್ ಠಾಣಾ ಹದ್ದಿ ಪೈಕಿ ಹಳ್ಳೂರ ಗ್ರಾಮದ ಗಂಗಾ ಪರಮೇಶ್ವರಿ ದೇವಸ್ಥಾನದ ಹತ್ತೀರ ಹಾಯ್ದು ಹೋಗಿರುವ ತುಂಗಭದ್ರಾ ನದಿಯ ಎಡದಂಡೆಯಲ್ಲಿ ದಿನಾಂಕಃ-09-08-2015 ರಂದು ಮುಂಜಾನೆ 6-00 ಗಂಟೆಗೆ ನಮೂದ ಆರೋಪಿತರು ತಮ್ಮ ಬಾಬತ್ 2,00,000=00ರೂ ಕಿಮ್ಮತ್ತಿನ ನಂಬರ ಪ್ಲೇಟ ಇಲ್ಲದ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರದ ಇಂಜನ್ದ  ಇಂಜನ್ನಿನ ಇಂಜನ್ ನಂಬರ ಆರ್..ಡಬ್ಲೂ.ಎಸ್.01147 ಮತ್ತು 50,000=00ರೂ ಬೆಲೆ ಬಾಳುವ ನಂಬರ ಪ್ಲೇಟ ಇಲ್ಲದ ಟ್ರೇಲರದಲ್ಲಿ ಪೊಲೀಸ್ರು ರೇಡ ಕುರಿತು ಹೋಗಿರುವ ವಿಷಯ ಗೊತ್ತಾಗಿ ಟ್ರಾಕ್ಟರ ಟ್ರೇಲರದಲ್ಲಿ ಅರ್ದಮರ್ದ ಅಂದರೆ 1350=00ರೂ ಬೆಲೆ ಬಾಳುವ 1.1/2 ಕ್ಯೂಬಿಕ್ ಮೀಟರನಷ್ಟು ಮರಳನ್ನು ತುಂಗಭದ್ರಾ ನದಿಯ ದಡದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡಿ ಸರಕಾರದಿಂದ ಯಾವುದೇ ಪಾಸ್.. ಪರ್ಮೀಟ್ ಇಲ್ಲದೆ  ಮರಳನ್ನು ಅಕ್ರಮವಾಗಿ ಟ್ರ್ಯಾಕ್ಟರ ಟ್ರೇಲರದಲ್ಲಿ ತುಂಬಿಸಿಕೊಂಡು ಕಳ್ಳತನದಿಂದ ಸಾಗಾಟ ಮಾಡುತ್ತಿದ್ದಾಗ ಹಳ್ಳೂರ ಗ್ರಾಮದ ಪ್ಲಾಟ ಹತ್ತೀರ ರೇಡ ಕಾಲಕ್ಕೆ ದಡದಲ್ಲಿ ಸಿಕ್ಕ ಅಪರಾಧ.

ಅಕ್ರಮ ಪ್ರಾಣಿ ಸಾಗಾಣಿಕೆಃ- ದಿನಾಂಕ:09/09/2016 ರಂದು 14-30 ಗಂಟೆಯ ಸುಮಾರಿಗೆ ರಾಣೇಬೆನ್ನೂರ ಡಾವಣಗೇರಿ ಎನ್.ಹೆಚ್-04 ರಸ್ತೆಯ ಮೇಲೆ ಕುಮಾರಪಟ್ಟಣಂ ಪೊಲೀಸ ಠಾಣೆಯ ಎದುರಿಗೆ  ನಮೂದ ಆರೋಪಿತರು ಕೂಡಿಕೊಂಡು 1)ಐಶರ್ ವಾಹನ ನಂಬರ:ಕೆಎ-51/-9704 ನೇದ್ದರಲ್ಲಿ 16 ಎತ್ತುಗಳನ್ನು ಹಾಗೂ 2) ಅಶೋಕ ಲೈಲ್ಯಾಂಡ ಮಿನಿ ವಾಹನ ನಂ:ಕೆಎ-17/ಸಿ-7551 ನೇದ್ದರಲ್ಲಿ 04 ಎತ್ತುಗಳನ್ನು ಯಾವುದೇ ಪಾಸ ಮತ್ತು ಪರ್ಮೀಟ್ ಇಲ್ಲದೇ ಅನಧೀಕೃತವಾಗಿ ಮತ್ತು ಅಕ್ರಮವಾಗಿ ಪ್ರಾಣಿಗಳಿಗೆ ಅತ್ಯಂತ ಹಿಂಸೆಯಾಗುವ ರೀತಿಯಲ್ಲಿ ಎತ್ತುಗಳಿಗೆ ಆಹಾರ ನೀರು ಹಾಗೂ ಬೆಳಕಿನ ವ್ಯವಸ್ಥೆ ಮಾಡದೇ ಅಮಾನವೀಯ ರೀತಿಯಲ್ಲಿ 20 (16+04) ಎತ್ತುಗಳನ್ನು ಎರಡೂ ವಾಹನಗಳಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದಾಗ ಇದರಲ್ಲಿಯ ಪಿರ್ಯಾದಿಯು ಸಿಬ್ಬಂದಿ ಹಾಗೂ ಸಾಕ್ಷಿದಾರರೊಂದಿಗೆ ರೇಡ್ ಮಾಡಿ ಹಿಡಿದಾಗ ಆರೋಪಿ ಸೇ.ನಂ:01 ರಿಂದ 04 ನೇದ್ದವರು ವಾಹನಗಳ ಸಮೇತ ಸಿಕ್ಕ ಅಪರಾಧ.

ಗಣೇಶ ವಿಸರ್ಜನೆ ಕಾಲಕ್ಕೆ ದೊಂಬಿಃ- ದಿನಾಂಕ:09/09/2016 ರಂದು 18-00 ಗಂಟೆಗೆ ನಮೂದ ಮಾಡಿದ ಮಾಕನೂರ ಗ್ರಾಮದ ಹಲಗೇರಿ ಓಣಿಯ ಸಾರ್ವಜನಿಕ ಗಣೇಶ ಕಮೀಟಿಯ ಹಾಗೂ ಕರಲ ಓಣಿಯ ಸಾರ್ವಜನಿಕ ಗಣೇಶ ಕಮೀಟಿಯ 10 ರಿಂದ 15 ಜನ ಆರೋಪಿತರು ಸರಕಾರದಿಂದ ಯಾವುದೇ ಪೂರ್ವಾನುಮತಿ ಇಲ್ಲದೇ ಗಣೇಶ ಮೂರ್ತಿಗಳನ್ನು ಕೂಡ್ರಿಸಿದ್ದಲ್ಲದೇ ಗಣೇಶ ವಿಸರ್ಜನೆಯ ಕಾಲಕ್ಕೆ ಎರಡೂ ಕಮೀಟಿಯವರು ಸುಮಾರು 10 ರಿಂದ 15 ಜನರು ಅಕ್ರಮಕೂಟ ಮಾಡಿಕೊಂಡು ಗುಂಪಾಗಿ ಒಮ್ಮಿದೊಮ್ಮಲೇ ಒಬ್ಬರಿಗೊಬ್ಬರು ತಾವು ಮುಂದೆ ಹೋಗಬೇಕು ತಾವು ಮುಂದೆ ಹೋಗಬೇಕು ಅಂತಾ ತಂಟೆ ಮಾಡುತ್ತಾ ಕೇಕೆ ಹೊಡೆಯುತ್ತಾ ಒಬ್ಬರಿಗೊಬ್ಬರು ಕೈಯಿಂದ ಹೊಡಿಬಡಿ ಮಾಡಿಕೊಳ್ಳುತ್ತಾ ಕಲ್ಲು ತೂರಾಟ ಮಾಡಿ ಸರಕಾರಿ ಜೀಪ್ ನಂಬರ: ಕೆಎ-27/ಜಿ:145 ನೇದ್ದರ ಮುಂದಿನ ಗ್ಲಾಸು ಒಡೆಯುವಂತೆ ಮಾಡಿ ಸುಮಾರು 8,000/- ರೂ.ಗಳ ಕಿಮ್ಮತ್ತಿನ ಗ್ಲಾಸನ್ನು ಲುಕ್ಷಾನು ಪಡಿಸಿದ ಅಪರಾಧ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ