ಬುಧವಾರ, ಸೆಪ್ಟೆಂಬರ್ 14, 2016

Haveri Dist. Crime News on Sep 12, 2016



f¯Áè ¥Éưøï PÁAiÀiÁð®AiÀÄ ºÁªÉÃj
¢£ÁAPÀ: 12-09-2016
C¥ÀgÁzsÀUÀ¼À ¸ÀÄ¢Ý.

ವಾಹನ ಕಳುವು ಮಾಡಿ ಸಿಕ್ಕ ಅಪರಾಧಃ- ದಿನಾಂಕ : 12-09-2016 ರಂದು ಮುಂಜಾನೆ 11-00 ಘಂಟೆಯ ಸುಮಾರಿಗೆ ತಿಳವಳ್ಳಿ ಗ್ರಾಮದ, ನಗರೇಶ್ವರ ರೈಸ್ ಮಿಲ್ಲ್ ಹತ್ತಿರ, ಹಂದಿ ಜೋಗೆರ ಓಣಿಯ ರಸ್ತೆಯ ಮೇಲೆ,  ರಾಜು ಶೇಖಪ್ಪ ಮರೊಳ್ಳಿ/ವಾಲ್ಮಿಕಿ ಸಾ||ಜಾವಿದ್ ನಗರ ಹಿರೇಕೆರೂರ ಈತನು ಎಲ್ಲಿಯೋ ಕಳ್ಳತನ ಮಾಡಿದ ಒಂದು ಕೆಂಪು ಕಲರಿನ ಸೂಪರ ಸ್ಪ್ಲಂಡರ ಮೋಟಾರ ಸೈಕಲ್ ನೊಂದಣಿ ನಂಬರ ಇಲ್ಲದ, ಚಸ್ಸಿ ನಂಬರ:  MBLJA05EGB9L19734 ಮತ್ತು ಇಂಜನ ನಂಬರ: JA05EBB9L19747  ನೇದ್ದನ್ನು  ಇಟ್ಟುಕೊಂಡು ಮಾರಾಟ ಮಾಡುಲು  ಅನುಮಾನಾಸ್ಪದ ರೀತಿಯಲ್ಲಿ ತಿರುಗುತ್ತಿದ್ದಾಗ  ನಂಬರ ಇಲ್ಲದೆ ಸೂಪರ ಸ್ಪ್ಲಂಡರ ಮೋಟಾರ ಸೈಕಲ್ ಸಮೇತ ಸಿಕ್ಕ ಅಪರಾಧ.

ದೇವಸ್ಥಾನದ ಹುಂಡಿ ಕಳುವುಃ- ದಿನಾಂಕ; 11-09-2016 ರಂದು ರಾತ್ರಿ 9-00 ಘಂಟೆಯಿಂದ ದಿನಾಂಕ; 12-09-2016 ರಂದು ಬೆಳಗಿನ ಜಾವಾ 6-00 ಘಂಟೆಯ ನಡುವಿನ ಅವಧಿಯಲ್ಲಿ ಕರೇಕ್ಯಾತನಹಳ್ಳಿ ಗ್ರಾಮದ, ಗ್ರಾಮದೇವಿ ದೇವಸ್ಥಾನದ ಒಳಗೆ ಯಾರೋ ಕಳ್ಳರು ದೇವಸ್ಥಾನದ ಮುಂದಿನ ಶೇಟ್ರಸಿನ ಬೀಗವನ್ನು ಮುರಿದು ದೇವಸ್ಥಾನದಲ್ಲಿ ಇದ್ದ 1) ಕಾಣಿಕೆಯ ಹುಡಿಯಲ್ಲಿದ್ದ 15.000 ರಿಂದ 20.000/-ರೂಗಳು, 2) 500 ಗ್ರಾಂ ತೂಕದ ಬೆಳ್ಳಿ ಆರತಿ ಸೇಟ್ ||ಕಿ|| 15.000/-ರೂ, 3) ಒಂದು 8 ತೂಲೆಯ ಬೆಳ್ಳಿ ಲಿಂಗದಕಾಯಿ ||ಕಿ|| 2.500/-ರೂ, 4) ಬಂಗಾರದ 3 ಗುಂಡುಗಳುಳ್ಳ ಒಂದು ತಾಳಿ ||ಕಿ|| 8.000/-ರೂ, 5) ಬಂಗಾರದ ಎರಡು ಸರಗಳು ತೂಕ 2 ತೂಲೆಯ ||ಕಿ|| 40.000/-ರೂ, ಸೇರಿ ಒಟ್ಟು 85.500/-ರೂಗಳ ಬೆಳ್ಳಿ, ಬಂಗಾರ ಮತ್ತು ಹಣ ಕಳ್ಳತನ ಮಾಡಿಕೊಂಡ ಹೋದ ಅಪರಾಧ.

ಮಹಿಳೆ ಕಾಣೆಃ- ದಿನಾಂಕಃ11-09-2016 ರಂದು ಮುಂಜಾನೆ 10-00 ಗಂಟೆಯಿಂದ ಮದ್ಯಾಹ್ನ 01-30 ಘಂಟೆಯ ನಡುವಿನ ಅವಧಿಯಲ್ಲಿ ಹಾನಗಲ್ಲ ನಗರದಲ್ಲಿರುವ ರೇಣುಕಾ ನಗರದಲ್ಲಿರುವ ಪಿರ್ಯಾದಿ ರವಿ ಹರಿಜನ ಸಾ||ಜೇಕಿನಕಟ್ಟಿ ತಾ||ಸವಣೂರ ಈತನ ಹೆಂಡತಿಯಾದ ಸುಧಾ ಇವಳು ಆಸ್ಪತ್ರೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಆಸ್ಪತ್ರೆಗೂ ಹೋಗದೆ, ವಾಪಾಸ್ಸು ಮನೆಗೂ ಬಾರದೆ, ತನ್ನ ತವರೂ ಮನೆಗೂ ಹೋಗದೆ ಎಲ್ಲಿಯೋ ಕಾಣೆಯಾಗಿದ್ದು  ಕಾಣೆಯಾದ ಸುಧಾ ಇವಳಿಗೆ ಸಂಬಂದಿಕರ ಊರುಗಳಲ್ಲಿ ಹುಡುಕಾಡಿ ಕಾಣೆಯಾಧ ಬಗ್ಗೆ ಪಿರ್ಯಾಯನ್ನು ನೀಡಿದ್ದರ ಮೇರೆಗೆ ಕ್ರಮ ಕೈಗೊಂಡಿದೆ.
       
ಕಾಣೆಯಾಧ ಸುಧಾ ಕೋಂ ರವಿ ಹರಿಜನ ವಯಾ:20 ವರ್ಷ,ಜಾತಿ:ಹಿಂದೂ-ಹರಿಜನ ಉದ್ಯೋಗ:ಮನೆಕೆಲಸ ಸಾ:ಜೆಕಿನಕಟ್ಟಿ ತಾ:ಸವಣೂರ ಹಾಲಿವಸ್ತಿ:ಹಾನಗಲ್ಲ ಇವಳು ಬಿಳಿ ಬಣ್ಣದ ಚೂಡಿದಾರ ಧರಿಸಿದ್ದು ಕೊರಳಲ್ಲಿ ಕರಿಮಣಿತಾಳಿ, ಎತ್ತರ 5 ಫೂಟ್ ತೆಳುವಾದ ಮೈಕಟ್ಟು ಸಾದಗೆಂಪು ಮೈಬಣ್ಣ ದುಂಡು ಮುಖ ಹೊಂದಿದ್ದು ಇರುತ್ತದೆ. ಕಾಣೆಯಾದ ನನ್ನ ಹೆಂಡತಿ ಸುಧಾ ಇವಳನ್ನು ಪತ್ತೆ ಮಾಡಿ ಕೊಡಬೇಕೆಂದು ಪಿರ್ಯಾದಿ ನೀಡಿರುತ್ತಾರೆ.
ಇಸ್ಪೀಟ್ ಜೂಜಾಟ ವ್ಯಕ್ತಿಗಳ ಬಂಧನಃ- ರಟ್ಟಿಹಳ್ಳಿ ಪಿ.ಎಸ್.ಹದ್ದಿ ಪೈಕಿ ಕಡೂರ ಗ್ರಾಮದ ದುರುಗವ್ವನ ದೇವಸ್ಥಾನದ ಎದುರಿಗೆ ಇರುವ ಸಾರ್ವಜನಿಕ ಸ್ಥಳದಲ್ಲಿ ದಿನಾಂಕ;-12-09-2016 ರಂದು 20-15 ಗಂಟೆಗೆ 1) ಹಾಲೇಶ ಹಳ್ಳೇರ, 2) ಚಂದ್ರಶೇಖರ ತುಮ್ಮಿನಕಟ್ಟಿ 3) ಹನುಮಂತಪ್ಪ ಓಲೆಕಾರ 4) ಶಿವಾನಂದ ಗವಿಯಪ್ಪನವರ 5) ಬಸವರಾಜ ದೊಡ್ಡಕರಿಯಮ್ಮನವರ 6) ಬಸವರಾಜ ಹಳ್ಳೇರ 7) ಕುಮಾರ ತುಮ್ಮಿನಕಟ್ಟಿ 8) ಮಂಜು ಕಾಳೇರ  ಮತ್ತು 9) ಸಿದ್ದಪ್ಪ ಮಕರಿ ಎಲ್ಲರೂ ಸಾ||ಕಡೂರ ತಾ||ಹಿರೇಕೆರೂರ ಇವರೆಲ್ಲ ಸೇರಿಕೊಂಡು  ಕಡೂರ ಗ್ರಾಮದ ದುರುಗವ್ವನ ದೇವಸ್ಥಾನದ ಎದುರಿಗೆ ಇರುವ ಸಾರ್ವಜನಿಕ ಸ್ಥಳದಲ್ಲಿ ಗುಂಪಾಗಿ ಕುಳಿತುಕೊಂಡು  ತಮ್ಮ ತಮ್ಮ ಪಾಯ್ದೆಗೋಸ್ಕರ  ಹಣವನ್ನು ಪಣಕ್ಕೆ ಕಟ್ಟಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅನ್ನುವ ಜೂಜಾಟವನ್ನು ಆಡುತ್ತಿದ್ದಾಗ ರೋಕ ರಕಂ 1710/-ರೂ.ಗಳು ಹಾಗೂ 52 ಇಸ್ಪೇಟ ಎಲೆಗಳ  ಸಮೇತವಾಗಿ ರೇಡ ಕಾಲಕ್ಕೆ ಸಿಕ್ಕ ಅಪರಾಧ.
ಮೋಸದಿಂದ ಬಂಗಾರ ಕಳುವುಃ- ಶಿಗ್ಗಾಂವ ಪೊಲೀಸ್ ಠಾಣಾ ಹದ್ದಿ ಪೈಕಿ, ಶಿಗ್ಗಾಂವ ಶಹರದ ನವನಗರದಲ್ಲಿರುವ ಬಸಪ್ಪ ಭೀಮಪ್ಪ ಸೋಮಣ್ಣವರ ಇವರ ವಾಸದ ಮನೆಯಲ್ಲಿ ದಿನಾಂಕಃ-12/09/2016 ರಂದು ಮಧ್ಯಾನ್ಹ-12-30 ಗಂಟೆಯ ಸುಮಾರಿಗೆ ಯಾರೋ ಇಬ್ಬರು ಆರೋಪಿತರು ಮನೆಗೆ ಬಂದು ಬೆಳ್ಳಿ ಬಂಗಾದ ಚೈನಗಳನ್ನು ಪಾಲಿಸ್ ಮಾಡುತ್ತೇವೆ ಅಂತಾ ಹೇಳಿ ನಂಬಿಸಿ ಇವರ ಸೊಸೆ ಶ್ರೀಮತಿ ಲಲಿತಾ ಕೋಂ. ಮಲ್ಲಪ್ಪ ಇಂಗಳಗಿ ಸಾ||ಹೊಸನೀರಲಗಿ ತಾ||ಸವಣೂರ ಇವರ ತಮ್ಮನ ಮಗಳ ಕಾಲ ಚೈನನ್ನು ಪಾಲಿಸ್ ಮಾಡಿ ಲಲಿತಾ ಅವರಿಗೆ ಯಾವುದೋ ಎಣ್ಣಿಯನ್ನು ಸಿಂಪಡಿಸಿ ಮೊರ್ಚ ಹೋಗುವಂತೆ ಮಾಡಿದ್ದು ನಂತರ ನೋಡಲಾಗಿ ಲಲಿತಾ ರವರ ಕೊರಳಲ್ಲಿದ್ದ ಬಂಗಾರದ ಚೈನ್ ಇರಲಿಲ್ಲ. ಸದರಿ ಯಾರೋ ಆರೋಪಿತರು  ಶ್ರೀಮತಿ ಲಲಿತಾ ರವರಿಗೆ ಚೈನುಗಳನ್ನು ಪಾಲಿಸ್ ಮಾಡುವವರು ಅಂತಾ ನಂಬಿಸಿ ಮೊಸಗೊಳಿಸಿ 20 ಗ್ರಾಂ ತೂಕದ 54,700/- ರೂ ಕಿಮ್ಮತ್ತಿನ ಅವಲಕ್ಕಿ ಮಾಟದ ಬಂಗಾರದ ಚೈನನ್ನು ಮೊಸಗೋಳಿಸಿ ತೆಗೆದುಕೊಂಡು ಹೋದ ಅಪರಾಧ
ಉರುಲು ಹಾಕಿಕೊಂಡು ಅನಾಮಧೇಯ ವ್ಯಕ್ತಿ ಸಾವುಃ- ದಿನಾಂಕ 11/09/2016 ರಂದು ಮುಂಜಾನೆ 06-00 ಗಂಟೆಯಿಂದ 10-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಅನಾಮಧೇಯ ಗಂಡಸ್ಸು ವಯಾ 50-55 ವರ್ಷ ಹೆಸರು ವಿಳಾಸ ತಿಳಿದು ಬಂದಿಲ್ಲಾ. ಈತನು ತನಗಿದ್ದ ಯಾವುದೋ ಸಮಸ್ಯೆಯಿಂದ ಬಳಲಿ ಹಾವೇರಿ ಕೊಳ್ಳೂರ ಮಡಿ ರಸ್ತೆಯಲ್ಲಿರುವ ಸೀಮೆಎಣ್ಣಿ ಬಸಣ್ಣರವರ ಹೊಲದಲ್ಲಿರುವ ಬನ್ನಿಗಿಡದ ಪಕ್ಕದಲ್ಲಿರುವ ಕಂಪೌಂಡ ಮೇಲೆ ಹತ್ತಿ ಪ್ಲಾಸ್ಟಿಕ್ ಹಗ್ಗದ ಒಂದು ತುದಿಯನ್ನು ಬನ್ನಿಗಿಡದ ಕೊಂಬೆಗೆ ಕಟ್ಟಿ, ಇನ್ನೊಂದು ತುದಿಯನ್ನು ಕೊರಳಿಗೆ ಕಟ್ಟಿಕೊಂಡು ಅಲ್ಲಿಂದ ಕೆಳಗೆ ಹಾರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬರುತ್ತದೆ. ಅವನು ಯಾವ ಕಾರಣಕ್ಕಾಗಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅನ್ನುವುದು ಸಂಶಯವಿರುತ್ತದೆ ಅಂತಾ ವರದಿಯಲ್ಲಿ ನಮೂದ ಇರುತ್ತದೆ.
ಮೋಟಾರ್ ಸೈಕಲ್ ಕಳುವುಃ- ದಿನಾಂಕ: 08-09-2016 ರಂದು ಮುಂಜಾನೆ 7-00 ಗಂಟೆಯಿಂದ ಮದ್ಯಾಹ್ನ 12-00 ಗಂಟೆ ನಡುವಿನ ಅವದಿಯಲ್ಲಿ ಸವಣೂರ ಬಸ್ ನಿಲ್ದಾಣದಲ್ಲಿ ಫಿರ್ಯಾದಿ ಫಕ್ಕೀರಯ್ಯ ಮುರುಗಯ್ಯ ಸಾಲಿಮಠ ಸಾ||ಕೋರಿಪೇಟೆ ಸವಣೂರ ರವರು ನಿಲ್ಲಿಸಿದ್ದ ಹೀರೊ ಹೊಂಡಾ ಕಂಪನಿ ಸ್ಲೇಂಡರ್ ಪ್ಲಸ್ ಮೋಟಾರ ಸೈಕಲ್  ನಂ ಕೆಎ-27-ಡಬ್ಲ್ಯೂ-6535  ಚಾಸೀಸ್ ನಂ MBLHA10EYBHL52487, ಇಂಜಿನ್ ನಂ. HA10EFBHL43702, ಕಪ್ಪು ಬಣ್ಣದ್ದು, 2011 ಮಾಡೆಲ್, ;ಕಿ; 30,000/-ರೂ,ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಅಪರಾದ.
ಅನಾಮಧೇಯ ವ್ಯಕ್ತಿ ಆಕಸ್ಮಿಕ ಸಾವುಃ- ಸುಮಾರು 80 ರಿಂದ 85 ವರ್ಷ ವಯಸ್ಸಿನ ಅನಾಮಧೇಯ ಅನಾಥ ಬಿಕ್ಷುಕನು ತನಗೆ ಯಾರೂ ಸಂಭಂಧಿಕರು ಇರುವದಿಲ್ಲಾ ಅಂತಾ ಹೇಳಿ ಕವಲೆತ್ತು ಗ್ರಾಮದ ದುರ್ಗಾದೇವಿ ಗುಡಿಯ ಹತ್ತಿರ ಭಿಕ್ಷೇ ಬೇಡಿ ಬಂದ ಹಣದಿಂದ ಹೋಟೆಲ ಗಳಲ್ಲಿ ಊಟ ಮಾಡುತ್ತಾ ಜೀವನ ಮಾಡುತ್ತಾ ಕವಲೆತ್ತು ಗ್ರಾಮದ ಬಸ್ಟ್ಯಾಂಡದಲ್ಲಿ ಮಲಗುತ್ತಿದ್ದವನು ನಿನ್ನೇ ದಿವಸ ದಿನಾಂಕ: 11/09/2016 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಕವಲೆತ್ತು ಗ್ರಾಮದ ಬಸ್ಟ್ಯಾಂಡದಲ್ಲಿ ಮಲಗಿದವನು ದಿವಸ ದಿನಾಂಕ:12/09/2016 ರಂದು ಬೆಳಗಿನ 07-00 ಗಂಟೆಯ ನಡುವಿನ ಅವಧಿಯಲ್ಲಿ ಪಾಶ್ರ್ವ ವಾಯು ಹೊಡೆದು ಅಥವಾ ಇನ್ನಾವುದೋ ಕಾಯಿಲೆಯಿಂದ ಬಳಲಿ ಮೃತಪಟ್ಟಿರುತ್ತಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ