ಶನಿವಾರ, ಸೆಪ್ಟೆಂಬರ್ 17, 2016

Haveri Dist. Crime News on Sep 17, 2016



f¯Áè ¥Éưøï PÁAiÀiÁð®AiÀÄ ºÁªÉÃj
¢£ÁAPÀ: 17-09-2016
C¥ÀgÁzsÀUÀ¼À ¸ÀÄ¢Ý.

ಮಹಿಳೆ ಮಾನಭಂಗಃ- ಕಾಗಿನೆಲೆ ಪೋಲಿಸ ಠಾಣೆಯ ಹದ್ದಿ ಪೈಕಿ ತಿಮಕಾಪೂರ ಗ್ರಾಮದಲ್ಲಿ ಇದರಲ್ಲಿಯ ಫಿರ್ಯಾದಿ ಶ್ರೀಮತಿ ಸರೋಜಾ ಹಿರೇಮಠ ಇವಳು .ಹಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಅಡುಗೆ ಕೆಲಸವನ್ನು ಮಾಡಿಕೊಂಡಿದ್ದು ಇದರಲ್ಲಿಯ 1 ನೇ ಆರೋಪಿತ ಮಹಾದೇವಯ್ಯ ಹಿರೇಮಠ ಈತನು ಫಿರ್ಯಾದಿಗೆ ಈಗ 7-8 ತಿಂಗಳಗಳಿಂದ ಶಾಲೆಗೆ ಹೋಗುವಾಗ ಬರುವಾಗ ವಿನಾಕಾರಣ ಅವಾಚ್ಯೆ ಶಬ್ದಗಳಿಂದ ಬೈದಾಡುತ್ತಾ ಬಂದಿದ್ದು ಅಲ್ಲದೆ ದಿನಾಂಕ:- 17-09-2016 ರಂದು ಮುಂಜಾನೆ 08-10 ಗಂಟೆಗೆ ಫಿರ್ಯಾದಿ ಕಾಯಿಪಲ್ಯೆ ತೆಗದುಕೊಂಡು ಆರೋಪಿತನ ಮನೆಯ ಮುಂದೆ ಹೊರಟಾಗ ಆರೋಪಿಯು ಫಿರ್ಯಾದಿಗೆ ಲೇ ಮಿಂಡ್ರಿ ನೀನು ಶಾಲೆಗೆ ಹೋಗುವದು ಬೇಡಾ ಅಡುಗೆ ಮಾಡುವದು ಬ್ಯಾಡ ನಿನ್ನಿಂದ ಯಾವ ಮಕ್ಕಳು ಉದ್ದಾರ ಆಗುವದಿಲ್ಲಾ ಅಂತಾ ಅವಾಚ್ಯೆ ಶಬ್ದಗಳಿಂದ ಬೈದಾಡುತ್ತಿದ್ದಾಗ ಯಾಕೇ ಬೈದಾಡುತ್ತಿ ಅಂತಾ ಕೇಳಿದ್ದಕ್ಕೆ  ನೀನು ಶಾಲೆಗೆ ಹೋಗುವದು ಬೇಡಾ ಇವತ್ತ ನಿನಗೆ ಒಂದು ಗತಿ ಕಾಣಿಸುತ್ತೆನೆ ಅಂತಾ ಅಂದವನೆ ಕೈಯಿಂದ ಕಪಾಳಕ್ಕೆ ಹೊಡೆದು ಅವಮಾನ ಮಾಡುವ ಉದ್ದೇಶದಿಂದ ಫಿರ್ಯಾದಿಯ ಸಿರೆಯನ್ನು ಹಿಡಿದು ಎಳೆದಾಡಿ ಅವಮಾನಪಡಿಸಿದ್ದು ಅಲ್ಲದೆ ತಪ್ಪಿಸಿಕೊಂಡು ಮನೆಯೊಳಗೆ ಹೋದ ಫಿರ್ಯಾದಿಗೆ ಆರೋಪಿ ಮಹದೇವಯ್ಯ, ಮಹದೇವಯ್ಯ ಹೆಂಡತಿ ಹಾಗೂ ಇನ್ನು 03 ಜನ ಸೇರಿ ಟೋಳಿ ಕಟ್ಟಿಕೊಂಡು ಮನೆಯೊಳಗೆ ಅತೀಕ್ರಮ ಪ್ರವೇಶ ಮಾಡಿ ಫಿರ್ಯಾದಿಗೆ ಹೊರಗೆ ಎಳೆದುಕೊಂಡು ಬಂದು  ಅವಾಚ್ಯೆ ಬೈದಾಡಿ ಕೈಯಿಂದ ಮೈಮೇಲೆ ಹೊಡೆದು ಜೀವದ ಬೇದರಿಕೆ ಹಾಕಿರುತ್ತಾರೆ.

ಅಕ್ರಮ ಮರುಳು ಸಾಗಣೆ ವಾಹನ ಜಪ್ತಿಃ- ರಾಣೆಬೆನ್ನೂರ ಗ್ರಾಮೀಣ ಠಾಣಾ ಹದ್ದಿ ಕೋಣನತಂಬಿಗಿ ಗ್ರಾಮದ ತುಂಗಭದ್ರಾ ನದಿ ದಂಡೆಯಲ್ಲಿ ದಿನಾಂಕ: 17-09-2016 ರಂದು ಬೆಳಗಿನ ಜಾವ 00-45 ಗಂಟೆಗೆ ಯಾರೋ ಅಪರಿಚಿತ ವ್ಯಕ್ತಿಗಳು ಕೋಣನತಂಬಗಿ ಗ್ರಾಮದ ಹದ್ದಿನಲ್ಲಿ ಇರುವ ತುಂಗಭದ್ರಾ ನದಿಪಾತ್ರದಲ್ಲಿಂದ ಸರಕಾರದ ಖನಿಜ ಸ್ವತ್ತಾದ ಮರಳನ್ನು ಅಕ್ರಮ ಮರಳು ಗಣಿಕಾರಿಕೆ ಮಾಡಿ ||ಕಿ|| 900/- ರೂ ಕಿಮ್ಮತ್ತಿನ ಅಂದಾಜು 01 ಕ್ಯೂಬಿಕ್ ಮೀಟರ ಸಾಧಾರಣ ಮರಳನ್ನು ತಮ್ಮ ಬಾಬತ್ತ Swaraz Mazda Canter No: KA: 17/6480  ನೇದ್ದರಲ್ಲಿ ಯಾವುದೇ ಪಾಸ ಪರ್ಮಿಟ್ ಇಲ್ಲದೇ ತುಂಬುತ್ತಿರುವ  ಕಾಲಕ್ಕೆ ದಾಳಿ ಮಾಡಿದಾಗ ಆರೋಪಿ ಚಾಲಕನು ಕೈಗೆ ಸಿಗದೇ ಪರಾರಿಯಾಗಿ ಓಡಿ ಹೋಗಿದ್ದು ಇರುತ್ತದೆ ಅಂತಾ ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದು ಇರುತ್ತದೆ.
ಇಸ್ಪೀಟ ಜೂಜಾಟ ವ್ಯಕ್ತಿಗಳ ಬಂಧನಃ- ರಾಣೆಬೆನ್ನೂರ ಗ್ರಾಮೀಣ ಠಾಣಾ ವ್ಯಾಪ್ತಿಯ ಕಜ್ಜರಿ ಗ್ರಾಮದ ಪ್ರಾಥಮಿಕ ಶಾಲೆಯ ಮುಂದಿನ ಸಾರ್ವಜನಿಕ  ರಸ್ತೆಯ ಮೇಲೆ ದಿನಾಂಕ: 17-09-2016 ರಂದು ಬೆಳಗಿನ 07:00 ಗಂಟೆಯ ವೇಳೆಯಲ್ಲಿ ಆರೋಪಿತರಾದ 1) ದೇವರಾಜ ಹನುಮಂತಪ್ಪ ಶಿಡಗನಾಳ 2) ಮಾಲತೇಶ ಹುಚ್ಚಮ್ಮನವರ 3) ಮಾಲತೇಶ ಕೆಂಗೊಂಡ 4) ಗುತ್ತೆಪ್ಪ ಅಗಸನಹಳ್ಳಿ ಹಾಗೂ 5) ಶಿವರಾಜ ಪವಡಿ ಇವರೆಲ್ಲ ಸೇರಿಕೊಂಡು ತಮ್ಮ ತಮ್ಮ ಫಾಯ್ದೆಗೋಸ್ಕರ ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅನ್ನುವ ಜೂಜಾಟವನ್ನು ಆಡುತ್ತಿದ್ದಾಗ ದಾಳಿ ಮಾಡಿದ್ದು  ಸಿಕ್ಕ ಆರೋಪಿತರಿಂದ ದಾಳಿ ಕಾಲಕ್ಕೆ 1430/ರೂ ಹಣ ಮತ್ತು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಕೊಂಡಿದೆ.

ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆಃ- ಶಿಗ್ಗಾಂವ ಪೊಲಿಸ್ ಠಾಣಾ ಹದ್ದಿ ಪೈಕಿ,ಶಿವಪೂರ ತಾಂಡಾದಲ್ಲಿ ವಾಸವಿದ್ದ ಶ್ರೀಮತಿ ನೀಲವ್ವ ಕೋಂ. ಶಂಕ್ರಪ್ಪ ಲಮಾಣಿ ವಯಾ;45 ವರ್ಷ ಇವಳಿಗೆ ಈಗ ಒಂದು ವರ್ಷದ ಹಿಂದೆ ಗರ್ಬಕೋಶದ ಆಪರೇಶನ್ ಆಗಿದ್ದು ಅಲ್ಲದೇ ಈಗ ಒಂದು ತಿಂಗಳ ಹಿಂದೆ ಮೂತ್ರ ವಿಸರ್ಜನೆ ತೊಂದರೆಯಾಗಿ ಅಪರೇಶನ್ ಆಗಿದ್ದು ಸರಿಯಾಗಿ ಗುಣವಾಗದ್ದರಿಂದ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ;12-09-2016 ರಂದು ಮುಂಜಾನೆ 07-30 ಗಂಟೆಗೆ ತನ್ನ ವಾಸದ ಮನೆಯಲ್ಲಿ ತನ್ನಷ್ಟಕ್ಕೆ ತಾನೆ ಮೈಮೇಲೆ ಸಿಮೇ ಎಣ್ಣಿ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸುಟ್ಟ ಗಾಯಗಳಿಂದ ಶಿಗ್ಗಾಂವ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲಾಗಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲ ಮಾಡಿದಾಗ ಉಪಚಾರ ಪಲಿಸದೇ ದಿನಾಂಕ;16-09-2016 ರಂದು ರಾತ್ರಿ 7-00 ಗಂಟೆಗೆ ಮರಣ ಹೊಂದಿರುತ್ತಾಳೆ ವಿನ: ಅವಳ ಮರಣದಲ್ಲಿ ಬೇರೆ ಸಂಶಯ ಇರುವದಿಲ್ಲಾ. ಅಂತ ವಗೈರೆ ಇದ್ದ ವರದಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ