ಮಂಗಳವಾರ, ಡಿಸೆಂಬರ್ 23, 2014

Haveri Dist. Crime News on 21-12-2014

ಹಾವೇರಿ ಜಿಲ್ಲೆ ಪೊಲೀಸ್.
ಅಪರಾಧಗಳ ಸುದ್ದಿ.
 ದಿನಾಂಕ 21-12-2014. 

ಮಹಿಳೆ ಕಾಣೆ ಃ- ಶಿಗ್ಗಾಂವ ಪೊಲೀಸ್ ಠಾಣಾ ವ್ಯಾಪ್ತಿ ಶಿವಪೂರ ತಾಂಡದಿಂದ, ಠಾಣೆಯಿಂದ ಪಶ್ಚಿಮಕ್ಕೆ 6 ಕಿ ಮಿ ಅಂತರದಲ್ಲಿ ದಿನಾಂಕ; 18/12/2014 ರಂದು ಮುಂಜಾನೆ 7-00 ಗಂಟೆಗೆ ವಿನೋದಾ @ ವೀಣಾ ತಂದೆ ರಾಮಪ್ಪ ಲಮಾಣಿ ವಯಾ 20 ವರ್ಷ ಸಾಃ ಶಿವಪೂರ ತಾಂಡಾ ತಾಃ ಶಿಗ್ಗಾಂವ ಈತಳು ತಮ್ಮ ವಾಸದ ಮನೆಯಿಂದಾ ಹಾವೇರಿ ಕೆ.ಎಸ್.ಆರ್.ಟಿ.ಸಿ ಡಿಪೋಗೆ ಕೆಲಸಕ್ಕೆ ಅಂತಾ ಮನೆಯಲ್ಲಿ ಹೇಳಿ ಹೋದವಳು ಕೇಲಸಕ್ಕೆ ಹೋಗದೆ ಮನೆಗೂ ಬಾರದೆ ಕಾಣೆಯಾಗಿರುತ್ತಾಳೆ ಅಂತಾ ಸಂಜಯಕುಮಾರ ರಾಮಪ್ಪ ಲಮಾಣಿ ಇವರು ದೂರು ಕೊಟ್ಟಿದ್ದು ಪಿ.ಎಸ್.ಐ ಶಿಗ್ಗಾಂವ  ಪೊಲೀಸ್ ಠಾಣೆ ರವರು ದೂರು ದಾಖಲಸಿಕೊಂಡು ತನಿಖೆ ಕೈಕೊಂಡಿರುವರು.

ಇಸ್ಪೇಟ ಜೂಜಾಟ  ಬಂದನ ಃ- ಶಿಗ್ಗಾಂವ ಪೊಲೀಸ್ ಠಾಣಾ ವ್ಯಾಪ್ತಿ ವನಹಳ್ಳಿ ಗ್ರಾಮದ ಪ್ಲಾಟಿನ ಹತ್ತಿರ ಇರುವ ಬಸವಣ್ಣ ದೇವರ ದೆವಸ್ಥಾನದ ಎದುರಿಗೆ ಇರುವ ಸಾರ್ವಜನಿಕ ಸ್ಥಳದಲ್ಲಿ, ಠಾಣೆಯಿಂದ ಉತ್ತರಕ್ಕೆ 6 ಕಿ ಮಿ ಅಂತರದಲ್ಲಿ ದಿನಾಂಕ; 21/12/2014 ರಂದು 17-00 ಗಂಟೆಗೆ ಆರೋಪಿತರಾದ ಮಹ್ಮದಗೌಸ ಬಾಬಾಜಾನಸಾಬ ಕಡಕೋಳ ವಯಾ 36 ವರ್ಷ ಸಾಃ ಶಿಗ್ಗಾಂವ ಮಕಾನಗಲ್ಲಿ ಹಾಗು ಇನ್ನು 04 ಜನರು ಸಾಃ ಎಲ್ಲರೂ ವನಹಳ್ಳಿ ಇವರೆಲ್ಲರೂ ಸೇರಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ್ ಎಂಬ ಜೂಜಾಟ ಆಡುತ್ತಿದ್ದಾಗ ಪಿಎಸ್ಐ  ಶ್ರೀ ಜಿ.ಎಂ.ಶಶಿಧರ ಶಿಗ್ಗಾಂವ ಪೊಲೀಸ್  ಠಾಣೆ  ರವರು ಸಿಬ್ಬಂದಿ ಜೋತೆಗೆ ಹೋಗಿ ರೇಡ ಮಾಡಿ ಅವರಿಂದ 1100/- ರೂಪಾಯಿಗಳು ಹಾಗೂ  52 ಇಸ್ಪೀಟ ಎಲೆಗಳು ನೇದ್ದವುಗಳನ್ನು ವಶಪಡಿಸಿಕೊಂಡಿದ್ದು  ಈ ಬಗ್ಗೆ ಶಿಗಾಂವ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಆಕಸ್ಮೀಕ ಕಾಲು ಜಾರಿ ಹೊಂಡದೋಳಗೆ ಬಿದ್ದು ವ್ಯಕ್ತಿ ಸಾವು ಃ- ಕಾಗಿನೆಲೆ ಪೊಲೀಸ್ ಠಾಣಾ ವ್ಯಾಪ್ತಿ ಕಾಶಂಬಿ ಗ್ರಾಮದ ಹೊಂಡದಲ್ಲಿ ಠಾಣೆಯಿಂದ 3 ಕಿ.ಮಿ.ಅಂತರದಲ್ಲಿ  ಪಶ್ಚಿಮಕ್ಕೆ ದಿನಾಂಕ; 18-12-2014  ರಂದು 17-30 ಗಂಟೆಗೆ ಖಂಡೆಪ್ಪ,ದೊದ್ದಬೀರಪ್ಪ, ತಾವರೆಗೊಪ್ಪ @ಮಾಸಣಗಿ ವಯಾ-42 ವರ್ಷ ಸಾ|| ಕಾಶಂಬಿ ತಾ|| ಬ್ಯಾಡಗಿ ಈತನು ಕುರಿಗಳನ್ನು ಮೇಯಿಸಿಕೊಂಡು ನೀರು ಕುಡಿಸಲು ಅಂತಾ ಹೋಗಿ ಒಂದು ಕುರಿ ನೀರಿನಲ್ಲಿ ಉಳಿದಿದ್ದು ಅದನ್ನು ಹಿಡಿಯಲು ಅಂತಾ ಹೋದಾಗ ಆಕಸ್ಮೀಕ ಕಾಲು ಜಾರಿ ನೀರೊಳಗೆ ಬಿದ್ದು ಸಾವನೊಪ್ಪರುತ್ತಾನೆ ಅಂತಾ ಆತನ ಹೆಂಡತಿ ಪಾರ್ವತೆವ್ವ ಖಂಡೆಪ್ಪ ತಾವರೆಗೊಪ್ಪ ವಯಾ;32 ವರ್ಷ ಸಾ|| ಕಾಶಂಬಿ. ಇವರು ದೂರು ಕೊಟ್ಟಿದ್ದು ಪಿ.ಎಸ್.ಐ ಕಾಗಿನೆಲೆ ಪೊಲೀಸ್ ಠಾಣೆ ರವರು ದೂರು ದಾಖಲಿಸಿಕೊಂಡು ತನಿಖೆ ಕೈಕೊಂಡಿರುವರು.

ಮೋಬೈಲ್ ಕಳ್ಳತನ ಃ- ರಾಣೆಬೆನ್ನೂರ ಶಹರ ಪೊಲೀಸ್ ಠಾಣಾ ವ್ಯಾಪ್ತಿ ರಾಣೇಬೆನ್ನೂರ ಶಹರದ ದೊಡ್ಡಪೇಟೆ ರಸ್ತೇಯ ಮೇಲೆ ಠಾಣೆಯಿಂದ ಪಶ್ಚಿಮಕ್ಕೆ 0.5 ಕಿ. ಮಿ. ದಿನಾಂಕಃ21-12-2014 ರಂದು ಬೆಳಿಗ್ಗೆ 08-00  ಗಂಟೆಯಿಂದ 10-00 ಗಂಟೆಯ ನಡುವಿನ ಅವಧಿಯಲ್ಲಿ  ನಮೂದ ಸ್ಥಳದಲ್ಲಿ  ಪಿಯರ್ಾದಿ ಶ್ರೀನಿವಾಸ ತಂದೆ ಹನಮರೆಡ್ಡಿ ಮೈದೂರ  ಸಾ: ರಾಣೆಬೆನ್ನೂರ, ಉಮಾಶಂಕರ ನಗರ ಇವರು ತರಕಾರಿ ತೆಗೆದುಕೊಳ್ಳುತ್ತಿರುವಾಗ ಯಾರೋ ಕಳ್ಳರು ಇವರ ಜೇಬಿನ ಒಳಗಡೆ ಇದ್ದ  ಶಾಮಸಂಗ ಕಂಪನಿಯ ಮೋಬೈಲ ಅಕಿ. 19.200/- ರೂ ನೇದ್ದನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ರಾಣೆಬೆನ್ನೂರ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಕೊಂಡಿರುವರು.
      

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ