ಹಾವೇರಿ ಜಿಲ್ಲೆ ಪೊಲೀಸ್.
ಅಪರಾಧಗಳ ಸುದ್ದಿ.
ದಿನಾಂಕ 23-12-2014.
ರಸ್ತೆ ಅಪಘಾತ ಘಾಯ- ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿ ಬ್ಯಾಡಗಿ-ಮಲ್ಲೂರ ರಸ್ತೆಯ ಕಟಾವಕರ ಜೀನನ ಸಮೀಪ ಠಾಣೆಯಿಂದ ಪಶ್ಚಿಮಕ್ಕೆ 3 ಕೀ ಮಿ ಅಂತರದಲ್ಲಿ ದಿನಾಂಕ 22-12-2014 ರಂದು ರಾತ್ರಿ 19-45 ಘಂಟೆ ಸುಮಾರಿಗೆ ಆರೋಪಿ ಶೇಖಪ್ಪ ಹನಮಂತಪ್ಪ ನೆಲ್ಲಿಕೊಪ್ಪ ಸಾ/ಕುರುಬಗೊಂಡ ಆಟೋ ನಂ ಕೆಎ-27/9493 ರ ಚಾಲಕ ತಾನು ನಡೆಸುತ್ತಿದ್ದ ಪ್ಯಾಸೆಂಜರ್ ಆಟೋ ನೇದ್ದನ್ನು ಬ್ಯಾಡಗಿ ಕಡೆಯಿಂದ ಮಲ್ಲೂರ ಕಡೆಗೆ ಅತೀ ಜೋರಿನಿಂದ ತಾತ್ಸಾರತನದಿಂದ ನಡೆಸಿಕೊಂಡು ಹೋಗುತ್ತಾ ರಸ್ತೆಯ ತಿರುವಿನಲ್ಲಿ ಆಟೋವನ್ನು ನಿಯಂತ್ರಣೆ ಮಾಡದೇ ತನ್ನ ಎದುರಿಗೆ ಮಲ್ಲೂರ ಕಡೆಯಿಂದ ಬರುತ್ತಿದ್ದ ಮೋಟಾರ ಸೈಕಲ್ ನಂ ಕೆಎ-27/ಇಬಿ-4309 ನೇದ್ದಕ್ಕೆ ಡಿಕ್ಕಿ ಮಾಡಿ ಅದರಲ್ಲಿದ್ದ 1)ರೇಣುಕಸ್ವಾಮಿ ತಂದೆ ಪಂಚಯ್ಯ ನಂದಿಹಳ್ಳಿಮಠ 2) ಸಹನಾ ಕೋಂ ರೇಣುಕಸ್ವಾಮಿ ನಂದಿಹಳ್ಳಿಮಠ 3) ಪ್ರಿಯಾಂಕಾ ತಂದೆ ರೇಣುಕಸ್ವಾಮಿ ನಂದಿಹಳ್ಳಿಮಠ ವಯಾ-6 ತಿಂಗಳು ಇವರೆಲ್ಲರಿಗೂ ಸಾದಾ ಮತ್ತು ಬಾರೀ ಗಾಯ ಪಡಿಸಿ ವಾಹನವನ್ನು ಬಿಟ್ಟು ಗಾಯಾಳುಗಳನ್ನು ಉಪಚಾರಕ್ಕೆ ಕರೆದೊಯ್ಯದೆ ಅಪಘಾತದ ಸುದ್ದಿಯನ್ನು ಠಾಣೆಗೆ ತಿಳಿಸದೇ ವಾಹನ ಬಿಟ್ಟು ಹಾಗೇ ಓಡಿ ಓದ ಅಪರಾಧ. ಈ ಬಗ್ಗೆ ವೀರಯ್ಯ ರುದ್ರಯ್ಯ ಚಿಲ್ಲೂರಮಠ ಸಾ/ಮಲ್ಲೂರ ತಾ/ಬ್ಯಾಡಗಿ ಇವರು ದೂರು ಕೊಟ್ಟಿದ್ದು ಪಿ.ಎಸ್.ಐ ಬ್ಯಾಡಗಿ ಪೊಲೀಸ್ ಠಾಣೆ ರವರು ದೂರು ದಾಖಲಸಿಕೊಂಡು ತನಿಖೆ ಕೈಕೊಂಡಿರುವರು.
ರಸ್ತೆ ಅಪಘಾತ ಘಾಯ ಃ- ಸವಣೂರ ಪೊಲೀಸ್ ಠಾಣೆ ಹತ್ತಿಮತ್ತೂರ-ಕಲಕೊಟಿ ರಸ್ತೆ ಹಳ್ಳದ ಸಮೀಪ ರಸ್ತೆಯ ತಿರುವಿನಲ್ಲಿ ಪಿ.ಎಸ್.ದಿಂದ ದಕ್ಷಿಣಕ್ಕೆ 18 ಕಿ.ಮೀ ಅಂತರದಲ್ಲಿ ದಿನಾಂಕ-21-12-2014 ರಂದು ರಾತ್ರಿ 11-45 ಗಂಟೆ ಸುಮಾರಿಗೆ ಆರೋಪಿ -ಸಿದ್ದಪ್ಪ ಪುಟ್ಟಪ್ಪ ಅರಳಿಕಟ್ಟಿ ಸಾ-ಕಬ್ಬೂರ ತಾ-ಹಾವೇರಿ ಸ್ಕೂಟಿ ಮೊಟಾರ ಸೈಕಲ್ ನಂ-ಕೆ.ಎ.04/ಹೆಚ್.ಸಿ.0300 ನೇದ್ದರ ಚಾಲಕ. ತನ್ನ ಬಾಬತ್ ಮೊಟಾರ ಸೈಕಲ್ನ್ನು ಕಲಕೊಟಿ ಕಡೆಯಿಂದ ಹತ್ತಿಮತ್ತೂರ ಕಡೆಗೆ ಅತೀಜೋರಾಗಿ ಅಲಕ್ಷತನದಿಂದ ಜನರಿಗೆ ಅಪಾಯವಾಗುವಂತೆ ನಡೆಸಿಕೊಂಡು ಬಂದವನೇ ತನ್ನ ಎದುರಿನಿಂದ ರಸ್ತೆಯ ಬದಿಯಲ್ಲಿ ಪಿರ್ಯಾದಿಯವರು ನಡೆಸಿಕೊಂಡು ಬರುತ್ತಿದ್ದ ಮೊಟಾರ ಸೈಕಲ್ ನಂ-ಕೆ.ಎ.27/ಎಕ್ಷ-2786 ನೇದ್ದಕ್ಕೆ ಎದುರಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿ ಪಿರ್ಯಾದಿಗೆ. ಪಿರ್ಯಾದಿಯ ಗಾಡಿಯ ಚಾಲಕ ಬಸಪ್ಪ ಜಿಡ್ಡಿ ಹಾಗೂ ಆರೋಪಿತನ ಗಾಡಿಯ ಹಿಂದೆ ಕುಳಿತಿದ್ದ ಶಿವಬಸಪ್ಪ ಕೆಂಗಣ್ಣನವರ ಇವನಿಗೆ ಸಾದಾ,ವ ಬಾರೀ ಸ್ವರೂಪದ ಗಾಯಪಡಿಸಿದ್ದಲ್ಲದೇ ತನಗೂ ಸಹ ಗಾಯಪಡಿಸಿಕೊಂಡಿದ್ದು ಈ ಬಗ್ಗೆ ರವಿ @ ರವಿಕುಮಾರ ತಂದೆ ಚೆನ್ನಪ್ಪ ಕಾಳಪ್ಪನವರ ಇವರು ದೂರು ಕೊಟ್ಟಿದ್ದು ಪಿ.ಐ ಸವಣೂರ ಪೊಲೀಸ್ ಠಾಣೆ ರವರು ದೂರು ದಾಖಲಸಿಕೊಂಡು ತನಿಖೆ ಕೈಕೊಂಡಿರುವರು.
ರಸ್ತೆ ಅಪಘಾತ ಸಾವು- ತಡಸ್ ಪೊಲೀಸ್ ಠಾಣಾ ವ್ಯಾಪ್ತಿ ಪಿ.ಬಿ. ರಸ್ತೆಯ ಮೇಲೆ ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋದ ರಸ್ತೆಯ ಮೇಲೆ ಆರೋಪಿ ಹೊನಾಪುರ ಗ್ರಾಮದ ಸಮೀಪ ರಸ್ತೆಯ ತಿರುವಿನಲ್ಲಿ ಠಾಣೆಯಿಂದ ಪೂರ್ವಕ್ಕೆ 10 ಕಿ. ಮೀ ಅಂತರದಲ್ಲಿ 22-12-2014 ರಂದು ಮಧ್ಯಾಹ್ನ 12-45 ಗಂಟೆಗೆ ಆರೋಪಿ ತಾನಾಜಿ ರಂದೆ ರಾಮಚಂದ್ರ ಪಾಟೀಲ್ ವಯಾ:44 ವರ್ಷ ಸಾ||ಬೆಂಗಳೂರ ಪ್ಯಾರಾ ಮಿಲ್ಟ್ರಿ ಸೆಂಟರ್ ಮೇಜರ ಹೊಂಡೈ ಐ-10 ಕಂಪನಿಯ ಕಾರನಂ-ಪಿಬಿ-65/ಜಿ-9619 ನೇದ್ದರ ಚಾಲಕ ನೇದ್ದರ ಚಾಲಕನು ತನ್ನ ಕಾರಿನಲ್ಲಿ ತನ್ನ ಹೆಂಡತ್ತಿ ಕವಿತಾ ಮತ್ತು ಮಗಳು ಸಮ್ರದ್ದಿ ವಯಾ;16 ವರ್ಷ ಮತ್ತು ಮಗಾ ಸುಯೇಶ ವಯಾ:12 ವರ್ಷ ಇವರನ್ನು ಹತ್ತಿಸಿಕೊಂಡು ಬೆಂಗಳೂರ ದಿಂದ ಕೊಲ್ಲಾಪೂರಕ್ಕೆ ಹೋಗುವಾಗ ಪಿ.ಬಿ. ರಸ್ತೆಯ ಶಿಗ್ಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ರೋಡ ಮೇಲೆ ಹೊನ್ನಾಪೂರ ಗ್ರಾಮದ ಸಮೀಪ ಬಂದಾಗ ಕಾರನ್ನು ಅವಿಚಾರ ವ ತಾತ್ಸಾರತನದಿಂದ ಮಾಣವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಿಸಿ ರಸ್ತೆಯ ತಿರುವಿನಲ್ಲಿ ಕಾರನ್ನು ನಿಯಂತ್ರಿಸದೇ ಇಳಿಜಾರದಲ್ಲಿ ಪಟ್ಲಿ ಮಾಡಿ ಅಪಘಾತ ಪಡಿಸಿ ತನ್ನ ಕಾರಿನಲ್ಲಿ ಇದ್ದ ತನ್ನ ಮಗಾ ಸುಯೇಶ ಇವನಿಗೆ ಮರಣಾಂತಿಕ ಗಾಯ ಪಡಿಸಿ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದು ಅಲ್ಲದೇ ತನ್ನ ಕಾರಿನಲ್ಲಿದ್ದ ತನ್ನ ಹೆಂಡತ್ತಿ ಕವಿತಾ ಮತ್ತು ಮಗಳು ಸಮ್ರದ್ದಿ ಇವರಿಗೆ ಸಾಧಾ ಸ್ವರೂಪದ ಗಾಯ ಪೆಟ್ಟು ಗೋಳಿಸಿದ್ದಲ್ಲದೇ ತನಗೂ ಸಹಿತ ಮರಣಾಂತಿಕ ಗಾಯ ಪಡಿಸಿಕೊಂಡಿದ್ದು ಅವನನ್ನು ಉಪಚಾರಕ್ಕಾಗಿ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ಒಯ್ಯುವಾಗ ಮಧ್ಯಾಹ್ನ 1:55 ಗಂಟೆಗೆ ದಾರಿಯಲ್ಲಿ ಆಸ್ಪತ್ರೆ ಹತ್ತಿರ ಮರಣ ಹೊಂದಿದ್ದು ಅದೆ. ಅಂತಾ ಶಮೀಮಖಾದೀರ ತಂದೆ ಅಬ್ದುಲ್ಮಜೀದ ಖಾಜಿ ಸಾ|| ಬಂಕಾಪೂರ ಅಹ್ಮದನಗರ ಪಿ.ಬಿ. ರೋಡ ತಾ||ಶಿಗ್ಗಾಂವ ಇವರು ದೂರು ಕೊಟ್ಟಿದ್ದು ಪಿ.ಎಸ್.ಐ ತಡಸ್ ಪೊಲೀಸ್ ಠಾಣೆ ರವರು ದೂರು ದಾಖಲಸಿಕೊಂಡು ತನಿಖೆ ಕೈಕೊಂಡಿರುವರು.
ರಸ್ತೆ ಅಪಘಾತ ಸಾವು - ಶಿಗ್ಗಾಂವ ಪೊಲೀಸ್ ಠಾಣಾ ವ್ಯಾಪ್ತಿ ಶಿಗ್ಗಾಂವ-ಮುಗಳಿ ರಸ್ತೆ ಮೇಲೆ ದಿನಾಂಕ; 22/12/2014 ರಂದು 22-30 ಗಂಟೆಗೆ ಆರೋಪಿ ಮಲ್ಲೇಶ ಶಿವಪ್ಪ ರಾಮಗೇರಿ ಸಾಃಮುಗಳಿ ತಾಃ ಶಿಗ್ಗಾಂವ ಟಾಟಾ ಸೋಮು ಗಾಡಿ ನಂ ಎಮ್-19/ಕ್ಯೂ-8919 ನೇದ್ದರ ಚಾಲಕ ತನ್ನ ಬಾಬತ್ತ ವಾಹನವನ್ನು ಅತೀ ಜೋರ ವ ತಾತ್ಸರ ತನದಿಂದ ನಡಯಿಸಿಕೊಂಡು ಬಂದು ಎದುರಿಗೆ ಬರುತ್ತಿದ್ದ ಮೋಟರ್ ಸೈಕಲ ನಂ ಕೆ.ಎ 27/ ಇಬಿ 2138 ನೇದ್ದಕ್ಕೆ ಡಿಕ್ಕಿ ಮಾಡಿ ಮೋಟರ್ ಸೈಕಲ ಸವಾರ ಮಹದೇವಪ್ಪ. ಪುಟ್ಟಪ್ಪ ಮಣಕಟ್ಟಿ ಹಾಗು ಹಿಂದೆ ಕುಳಿತವನಿಗೆ ಬಾರಿ ಸ್ವರಪದ ಘಾಯ ಪಡಿಸಿದ್ದು ಉಪಚಾರಕ್ಕೆ ಎಂದು ಹುಬ್ಬಳ್ಳಿಗೆ ಸಾಗಿಸುತ್ತಿದ್ದಾಗ ಮಹದೇವಪ್ಪ ಎನ್ನುವವನು ಮರಣ ಹೊಂದಿದ್ದು ಹಿಂದೆ ಕುಳಿತ ವೀರಪ್ಪ ಹನುಮಂತಪ್ಪ ಮಡ್ಲಿ ಈತನಿಗೆ ಗಾಯ ಪಡಿಸಿದ ಅದೆ ಈ ಬಗ್ಗೆ ಸುಬಾಸ ಕತ್ತಿ ಇವರು ದೂರು ಕೊಟ್ಟಿದ್ದು ಪಿ.ಎಸ್.ಐ ಶಿಗ್ಗಾಂವ ಪೊಲೀಸ್ ಠಾಣೆ ರವರು ದೂರು ದಾಖಲಸಿಕೊಂಡು ತನಿಖೆ ಕೈಕೊಂಡಿರುವರು.
ಯಾವುದೋ ವಿಷ ಸೇವಿಸಿ ವ್ಯಕ್ತಿ ಸಾವು- ಶಿಗ್ಗಾಂವ ತಾಲೂಕು ಪಾಣಿಗಟ್ಟಿ ಗ್ರಾಮದ ಬಸಯ್ಯ ತಂದೆ ಶಂಕ್ರಯ್ಯ ಮಠಪತಿ ಇವರ ಯರಿಯ ಹೊಲದ ಬದುವಿನಲ್ಲಿ, ಠಾಣೆಯಿಂದ ಉತ್ತರಕ್ಕ್ಕೆ 13 ಕಿ ಮಿ ಅಂತರದಲ್ಲಿ ದಿನಾಂಕ; 22/12/2014 ರಂದು ಸಂಜೆ 5-30 ಗಂಟೆಗೆ ಈರಣ್ಣ @ ರಾಜು ತಂದೆ ರುದ್ರಯ್ಯ ಪೂಜಾರ ವಯಾ: 25 ವರ್ಷ ಸಾ: ಬೆಳಗಲಿ ತಾ: ಹುಬ್ಬಳ್ಳಿ ಈತನು ಸರಾಯಿ ಕುಡಿಯುವ ಚಟದವನಿದ್ದು ಸದರಿ ದಿನಾಂಕದಂದು ಯಾವುದೊ ವಿಷ ಕುಡಿದು ಬಿದ್ದಾಗ ಉಪಚಾರಕ್ಕೆಂದು ಶಿಗ್ಗಾಂವ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ಮರಣ ಹೊಂದಿದ್ದು ಅದೆ ಅಂತಾ ಶ್ರೀಮತಿ ರತ್ನವ್ವ ಕೋಂ ರುದ್ರಯ್ಯ ಪೂಜಾರ ವಯಾ 45 ವರ್ಷ ಸಾಃ ಬೆಳಗಲಿ ತಾ: ಹುಬ್ಬಳ್ಳಿ ಇವರು ದೂರು ಕೊಟ್ಟಿದ್ದು ಪಿ.ಎಸ್.ಐ ಶಿಗ್ಗಾಂವ ಪೊಲೀಸ್ ಠಾಣೆ ರವರು ದೂರು ದಾಖಲಸಿಕೊಂಡು ತನಿಖೆ ಕೈಕೊಂಡಿರುವರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ