ಬುಧವಾರ, ನವೆಂಬರ್ 9, 2016

Haveri Dist Crime News on Nov 06, 2016



f¯Áè ¥ÉÆ°Ã¸ï PÁAiÀiÁð®AiÀÄ ºÁªÉÃj
¢£ÁAPÀ: 06-11-2016
C¥ÀgÁzsÀUÀ¼À ¸ÀÄ¢Ý.
ಮೋಸ ವಂಚನೆ ಪ್ರಕರಣಃ- ಹಿರೇಕೆರೂರು ಪೊಲೀಸ್ ಠಾಣಾ ಹದ್ದಿ ಮಸೂರ ಗ್ರಾಮದ ದುರ್ಗಮ್ಮನ ಗುಡಿಯ ಹತ್ತಿರ ದಿನಾಂಕ: 27-10-2016 ರಿಂದ ದಿನಾಂಕ: 29-10-2016 ರ ಅವಧಿಯಲ್ಲಿ ಆರೋಪಿತರಾದ 1) ಹನುಮಂತಪ್ಪ ತಂದೆ ರಾಮಚಂದ್ರಪ್ಪ ಸಾ||ಚಪ್ಪರದಹಳ್ಳಿ ಹಾಗೂ 2) ರಾಮಣ್ಣ ಸಾ||ಹಾವೇರಿ ಈ ಇಬ್ಬರೂ ಸೇರಿಕೊಂಡು ಪಿರ್ಯಾದಿ ಗೋವಿಂದಪ್ಪ ತಂದೆ ದಿ||ಭೀಮೆಗೌಡ, ರವರಿಗೆ ಮೋಸ ಮಾಡುವ ಉದ್ದೇಶದಿಂದ ಅಸಲು ಬಂಗಾರ ಕೊಡುವುದಾಗಿ ನಂಬಿಸಿ ಪಿರ್ಯಾದಿಗೆ ಮೊದಲು ನಂಬಿಕೆ ಬರುವ ಹಾಗೆ 02 ಪೀಸ್ ಅಸಲು ಬಂಗಾರ ಕೊಟ್ಟು, ನಂತರ ಪಿರ್ಯಾದಿಯನ್ನು ನಂಬಿಸಿ, ಅಸಲು ಬಂಗಾರ ಅಂತಾ ನಕಲು ಬಂಗಾರವನ್ನು ಕೊಟ್ಟು ಪಿರ್ಯಾದಿಯಿಂದ 3,50,500/- ರೂಪಾಯಿ ಇಸಿದುಕೊಂಡು ನಕಲಿ ಬಂಗಾರ ಕೊಟ್ಟು ಮೋಸ ಮಾಡಿರುತ್ತಾರೆ. ಅಂತ ದೂರು ಕೊಟ್ಟಿದ್ದು ಪಿ.ಎಸ್.ಐ ಹಿರೇಕೆರೂರ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರುತ್ತಾರೆ.
ಇಸ್ಪೀಟ್ ಜೂಜಾಟ ವ್ಯಕ್ತಿಗಳ ಬಂಧನಃ- ಶಿಗ್ಗಾಂವ ಪೊಲೀಸ್ ಠಾಣಾ ಹದ್ದಿ ಪೈಕಿ, ಕಬನೂರ ಗ್ರಾಮದ ಹತ್ತಿರ ಕುಂದಗೋಳರವರ ಕೆರೆಯ ಪಕ್ಕ ನಿಂಗಪ್ಪ ಮಕರಿ ಇವರ ಹೋಲದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ, ದಿನಾಂಕ: 06/11/2016 ರಂದು 17-00 ಗಂಟೆಗೆ ಬಸವಣ್ಣೆಪ್ಪ ಸತ್ಯಪ್ಪ ಸೊರಟೂರ ಹಾಗೂ ಸುತ್ತಮುತ್ತ ಹಳ್ಳಿಯ ಇನ್ನು 06 ಜನರು ಆರೋಪಿತರು ಸೇರಿಕೊಂಡು ತಮ್ಮ ತಮ್ಮ ಪಾಯಿದೆಗೊಸ್ಕರ ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂಬ ಜೂಜಾಟ ಆಡುತ್ತಿದ್ದಾಗ ರೇಡ ಕಾಲಕ್ಕೆ  ರೋಖ ರಕಂ 5640/- ರೂ. ಹಾಗೂ 52 ಇಸ್ಪೆಟ್ ಎಲೆಗಳ ಸಮೇತ ಸಿಕ್ಕಿದ್ದು ಅವರನ್ನೆಲ್ಲ ಬಂಧನಕ್ಕೊಳಪಡಿಸಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ