f¯Áè ¥ÉÆ°Ã¸ï PÁAiÀiÁð®AiÀÄ ºÁªÉÃj
¢£ÁAPÀ: 08-11-2016
C¥ÀgÁzsÀUÀ¼À ¸ÀÄ¢Ý.
ಎಸ್.ಸಿ/ಎಸ್.ಟಿ ಪ್ರಕರಣಃ- ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿ ಬೈಚವಳ್ಳಿ ಗ್ರಾಮದಲ್ಲಿ
ದಿನಾಂಕಃ06/11/2016 ರಂದು ಸಾಯಂಕಾಲಃ06-00 ಘಂಟೆಯ ಸುಮಾರಿಗೆ ಫಿರ್ಯಾದಿ ಸುಭಾಷ್ ಚಂದ್ರ ನಾಗನೂರ ಹಾಗೂ ಗ್ರಾಮದ ಜನರು ಸೇರಿಕೊಂಡು ಬೈಚವಳ್ಳಿ ಗ್ರಾಮದಲ್ಲಿ ದೀಪವಳಿ ಹಬ್ಬದ ಪ್ರಯುಕ್ತ ಗ್ರಾಮದೇವತೆಯ ಮೂರ್ತಿ ಮೆರವಣಿಗೆ ಮಾಡುವ ಸಂದರ್ಭದಲ್ಲಿ ಮೆರವಣಿಗೆಯು ಬೈಚವಳ್ಳಿ ಗ್ರಾಮದ ಮರಿಯಮ್ಮ ದೇವಿ ದೇವಸ್ಥಾನದ ಹತ್ತಿರ ಬಂದಾಗ ಆರೋಪಿತರಾದ 1) ಅಣ್ಣಪ್ಪ ನಾಗಪ್ಪ
ಮಂಗಳೇಣವರ ಹಾಗೂ ಇನ್ನೂ 11 ಜನ ಸೇರಿಕೊಂಡು ಮೆರವಣಿಗೆಯಲ್ಲಿ ಅಡ್ಡಾದಿಡ್ಡಿ ಓಡಾಡುತ್ತಾ ಬೈಚಳ್ಳಿ ಗ್ರಾಮದ ಹೆಣ್ಣು ಮಕ್ಕಳ ಜೊತೆ ಅಸಬ್ಯವಾಗಿ ವರ್ತಿಸುತ್ತಿದ್ದುದನ್ನು ನೋಡಿದ ಪಿರ್ಯಾದಿಯು ಸೈಡಿನಲ್ಲಿ ನಿಂತುಕೊಂಡು ಶಾಂತರೀತಿಯಲ್ಲಿ ವರ್ತಿಸಬೇಕೆಂದು ವಿನಂತಿಸಿಕೊಂಡಾಗ ಸದರಿ ಆರೋಪಿತರು ಪಿರ್ಯಾದಿಯೊಂದಿಗೆ ಜಗಳ ತಗೆದು ಪಿರ್ಯಾದಿಯ ಕೊರಳ ಪಟ್ಟಿಯನ್ನು ಹಿಡಿದು ದೂಡಾಡಿ ವಾಲ್ಮಿಕಿ ಬಾಡ್ಯಾ, ಸುಳೇಮಕ್ಕಳ ನಿನ್ನ ಜಾತೀನ ಹಡಾ, ಮತ್ತು ನಿನ್ನ ತಾಯ್ನಿನ ಹಡಾ ನಿಮ್ಮ ಕೀಳು ಜಾತಿನ ಹಡಾ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಆರೋಪಿತರ ಪೈಕಿ 1, 2 ಮತ್ತು 8 ನೇ ಆರೋಪಿತರು ತಮ್ಮ ಬಳಿ ಇರುವ ಮಾರಕಾಸ್ತ್ರಗಳಿಂದ ಪಿರ್ಯಾದಿಯ ತಲೆಯ ಮುಂಬಾಗಕ್ಕೆ ಮತ್ತು ಬಲ ಮುಂಗೈಗೆ ಮತ್ತು ಎಡ ಮೊಣಕೈಗೆ ಹೊಡಿ ಬಡಿ ಮಾಡಿ ತೀವ್ರ ಸ್ವರೂಪದ ರಕ್ತಘಾಯ ಪಡಿಸಿದ್ದು ಅಲ್ಲದೇ ಉಳಿದ ಆರೋಪಿತರೆಲ್ಲರೂ ಪಿರ್ಯಾದಿಗೆ ಹೊಡಿ ಬಡಿ ಮಾಡಿ ಕಾಲಿನಿಂದ ತುಳಿದು ಗಟಾರಕ್ಕೆ ಎಸೆದಾಗ ಬೈಚವಳ್ಳಿವಳ್ಳಿ ಗ್ರಾಮದ ಜನರು ಬಿಡಿಸಲು ಬಂದಾಗ ಇವರಿಗೂ ಸಹ ಆರೋಪಿತರು ಹೊಡಿ ಬಡಿ ಮಾಡಿ ತೀವ್ರ ಸ್ವರೂಪದ ಗಾಯಗಳನ್ನುಂಟು ಮಾಡಿ ಎಲ್ಲಾ ಆರೋಪಿತರು ಪಿರ್ಯಾದಿಗೆ ಮತ್ತು ತಂಟೆಯನ್ನು ಬಿಡಿಸಲು ಬಂದ ಜನರಿಗೆ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ದೂರು ನೀಡಿದ್ದು
ಪಿ.ಎಸ್.ಐ ಹಾನಗಲ್ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರುತ್ತಾರೆ.
ಬೈಕ್ ಕಳ್ಳತನಃ- ಹಿರೇಕೆರೂರ ಠಾಣಾ ವ್ಯಾಪ್ತಿ ಕೋಡಮಗ್ಗಿ ಗ್ರಾಮದಲ್ಲಿ ದಿನಾಂಕ: 06-11-2016 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ: 07-11-2016 ರಂದು ಮುಂಜಾನೆ 05:00 ಗಂಟೆಯ ನಡುವಿನ ಅವಧಿಯಲ್ಲಿ ಕೋಡಮಗ್ಗಿ ಗ್ರಾಮದ ಪಿರ್ಯಾದಿ ರಮೇಶ ಅರ್ಜುನಪ್ಪ ಇವರ ಮನೆಯ ಮುಂದೆ ನಿಲ್ಲಿಸಿದ್ದ ಕೆಂಪು ಬಣ್ಣದ ಹೀರೋ ಕಂಪನಿಯ ಸ್ಪ್ಲೆಂಡರ್ ಪ್ರೋ ಬೈಕ್ ನಂ: ಕೆ.ಎ: 27/ವೈ-5620, ಇಂಜಿನ್ ನಂ: HA10ELCHK23622, ಚೆಸ್ಸಿ ನಂ: MBLHA10ASCHK54755, ಅ||ಕಿ|| 20,000 ರೂಗಳು. ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ದೂರು ನೀಡಿದ್ದು ಪಿ.ಎಸ್.ಐ ಹಿರೇಕೆರೂರ ರವರ ಪ್ರಕರಣ
ದಾಖಲಿಸಿಕೊಂಡು ತನಿಖೆ ಮುಂದುವರೆಸಿರುತ್ತಾರೆ.
ಅಪಘಾತ ಪ್ರಕರಣಃ- ಕಾಗಿನೆಲೆ ಪೋಲಿಸ ಠಾಣೆ ಹದ್ದಿ ಪೈಕಿ ಹೆಡಿಗೊಂಡ ಗ್ರಾಮದ ಫಿರ್ಯಾದಿ ಪರಮೇಶಪ್ಪ ಚನ್ನಬಸಪ್ಪ ತಳಮನಿ ಇವರ ಮನೆಯ ಮುಂದೆ ರಸ್ತೇಯ ಮೇಲೆ ದಿನಾಂಕ;-08-11-2016 ರಂದು 11-00 ಗಂಟೆಗೆ ಆರೋಪಿತನಾದ ರಾಘವೇಂದ್ರ ಕಡೇಮನಿ
ಸಾ||ಬ್ಯಾಡಗಿ ಈತನು ಎಚ್.ಪಿ ಗ್ಯಾಸ ಕಂಪನಿಯ ಗಾಡಿ ನಂ ಕೆಎ-27/ಬಿ-5552 ನೇದ್ದರಲ್ಲಿ ಸಿಲೆಂಡರನ್ನು ಹೆರಿಕೊಂಡು ರಸ್ತೇಯ ಬಲಗಡೆ ಸೈಡ ನಿಲ್ಲಿಸಿ ನಂತರ ಗಾಡಿಯನ್ನು ಅತೀಜೋರಾಗಿ ಮತ್ತು ನಿರ್ಲಕ್ಷ್ಯೆತನದಿಂದ ಹಿಂದುಗಡೆ [ರಿವರ್ಸ] ನಡೆಸಿಕೊಂಡು ಹೋಗಿ ರಸ್ತೇಯ ಎಡಗಡೆಗೆ ನಡೆದುಕೊಂಡು ಹೊರಟ ಫಿರ್ಯಾದಿಯ ಚಿಕ್ಕಮ್ಮ ಮಮತಾ ಕೊಂ ಶಿವಪುತ್ರಪ್ಪ ತಳಮನಿ ಇವರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಮುಖ ಹಚ್ಚಿ ನೆಲಕ್ಕೆ ಕೆಡವಿ ಮೈಮೇಲೆ ಗಾಡಿಯನ್ನು ಹಾಯಿಸಿ ಮುಖಕ್ಕೆ, ತಲೆಗೆ, ಕೈಕಾಲು ತೊಡೆ ಸೊಂಟಕ್ಕೆ ಭಾರಿ ಸ್ವರೂಪದ ಗಾಯಪಡಿಸಿರುತ್ತಾನೆ ಅಂತ ದೂರು
ನೀಡಿದ್ದು ಪಿ.ಎಸ್.ಐ ಕಾಗೆನೆಲೆ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುರೆಸಿರುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ