f¯Áè ¥ÉÆ°Ã¸ï PÁAiÀiÁð®AiÀÄ ºÁªÉÃj
¢£ÁAPÀ: 09-11-2016
C¥ÀgÁzsÀUÀ¼À ¸ÀÄ¢Ý.
ಕರ್ತವ್ಯಕ್ಕೆ ಅಡ್ಡಿ ಪಡಿಸಿದ
ಪ್ರಕರಣಃ- ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿ
ಮೊಟೆಬೆನ್ನೂರ ಗ್ರಾಮದ ರಾ.ಹೆ ಬ್ರಿಡ್ಜ್ ಹತ್ತಿರ ಪಿರ್ಯಾದಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನಾದ ಸುಗಪ್ಪ
ಬಳಿಗಾರ ಈತನು ದಿನಾಂಕಃ03-11-2016 ರಂದು ಸುಮಾರಿಗೆ ತಾವು ಕರ್ತವ್ಯ ನಿರ್ವಹಿಸುತಿದ್ದ ಬಸ್ ನಂಬರ ಕೆ.ಎ.27/ಎಫ್ 597 ನೇದ್ದರಲ್ಲಿ ವಿಶಾಲಗಡದಿಂದಾ ಹಿರೇಕೇರೂರಿಗೆ ಹೊರಟಿದ್ದು ಸಂಜೆ 6-20 ಗಂಟೆ ಸುಮಾರಿಗೆ ಮೊಟೇಬೆನ್ನೂರ ಗ್ರಾಮದ ಹೈವೆ ರಸ್ತೆಯ ಬ್ರಿಡ್ಜ ಕೆಳಗೆ ಬಂದಾಗ ತನ್ನ ಎದರುನಿಂದಾ ಬರುತ್ತಿದ್ದ ಎತ್ತಿನಗಾಡಿಯವರಿಗೆ ಕೈಮಾಡಿ ನಿಲ್ಲಿಸಲು ಹೇಳಿ ಇಂಡಿಕೆಟರ್ ಹಾಕಿಕೊಂಡು ಹೊರಟಿದ್ದಾಗ ಎತ್ತಿನ ಗಾಡಿಯಲ್ಲಿದ್ದ ಒಬ್ಬ ವ್ಯಕ್ತಿ ಅವಾಚ್ಯ ಬೈದಾಡಿದಾಗ ಪಿರ್ಯಾದಿಯು ಯಾಕೆ ಬೈದಾಡುತ್ತಿ ಅಂತಾ ಕೇಳಿದಾಗ ಆರೋಪಿ ಮೋಟೆಬೆನ್ನೂರ ಗ್ರಾಮದ
ನಿಂಗಪ್ಪ ಗಿರ್ಜಿಯವರ ಎತ್ತಿನ ಗಾಡಿಯಿಂದಾ ಕೆಳಗೆ ಇಳಿದು ಬಂದು ಹಾಗೂ ಇನ್ನೂ 03 ಜನ ಸೇರಿಕೊಂಡು ಪಿರ್ಯಾದಿಯನ್ನು ಸರಕಾರಿ ನೌಕರ ಅಂತಾ ತಿಳಿದಿದ್ದರೂ ಸಹ ಬಸ್ಸಿನಿಂದಾ ಕೆಳಗೆ ಎಳೆದುಕೊಂಡು ಸಮವಸ್ತ್ರ ಹಿಡಿದು ಎಳದಾಡಿ ಕೈಯಿಂದಾ ಹೊಡಿ ಬಡಿ ಮಾಡಿ ಬಾಯಿಂದಾ ಕಚ್ಚಿ ಕಾಲಿನಿಂದಾ ಒದ್ದು ದುಖಾಪತ್ ಪಡಿಸಿರುತ್ತಾರೆ ಅಂತ ನೀಡಿದ
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಕಿಡಿಗೇಡಿಗಳಿಂದ ಅಟೋರಿಕ್ಷಾಗೆ
ಬೆಂಕಿಃ- ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿ
ಹಾನಗಲ್ ಶಹರದ ಕುಂಬಾರ ಓಣಿಯಲ್ಲಿ ದಿನಾಂಕ:-09-11-2016 ರಂದು ಬೆಳಗಿನ ಜಾವ 01-30 ಘಂಟೆಯ ಸುಮಾರಿಗೆ ಪಿರ್ಯಾದಿ ರವಿ ಚನ್ನಪ್ಪ ಪುರದ
ಈತನ ಬಾಬತ್ತ ಬಜಾಜ ಕಂಪನಿಯ ಪ್ಯಾಸೇಂಜರ್ ಆಟೋ ನಂಬರ್ ಕೆಎ-27/ಬಿ-4564 ನೇದ್ದನು ಹಾನಗಲ್ಲ ನಗರದಲ್ಲಿ ಆಟೋದಲ್ಲಿ ಪ್ರಯಾಣಿಕರಿಗೆ ಹತ್ತಿಸಿಕೊಂಡು ಬಾಡಿಗೆಯಂತೆ ಓಡಿಸಿ ನಂತರ ರಾತ್ರಿ ವಾಪಾಸ್ಸು ಮನೆಯ ಮುಂದೆ ಸದರಿ ಆಟೋವನ್ನು ತನ್ನ ಮನೆಯ ಮುಂದೆ ನಿಲ್ಲಸಿದ್ದು ಇರುತ್ತದೆ. ನಮೂದಿತ ಬಜಾಜ ಕಂಪನಿಯ ಆಟೋಕ್ಕೆ ಯಾರೋ ಆರೋಪಿತರು ಬೆಂಕಿ ಹಚ್ಚಿದ್ದರಿಂದ ಆಟೋದ ಮುಂದಿನ ಶೀಟ್,ಮೇಲಿನ ಟಾಪ್,ಹಾರ್ನ ಬಟನ್,ಪೋಕಸ್ ಲೈಟ್,ಎಕ್ಸಿಲಿಟರ್ ಸುಟ್ಟಿದ್ದರಿಂದ ಸುಮಾರು 20,000/- ಲುಕ್ಸಾಣು ಪಡಿಸಿರುತ್ತಾರೆ ಅಂತ ನೀಡಿದ
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರುತ್ತಾರೆ.
ಹೆದ್ದಾರಿಯಲ್ಲಿ ಕಂಟೇನರ್ ವಾಹನದಲ್ಲಿದ್ದ
ಸಾಮಾನು ಕಳುವುಃ- ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ
ವ್ಯಾಪ್ತಿ ಹಾನಗಲ್ ರೋಡ್ ರಾ.ಹೆ-4 ರ ಬೈಪಾಸ್ ಬ್ರಿಜ್ ಮೇಲೆ ಪಿರ್ಯಾದಿ ನರಸಿಂಹಮೂರ್ತಿ ತಂದೆ ನರಸಪ್ಪ
ಸಾ||ಕೈದಾಳ ತಾ||ತಿಪಟೂರ ಜಿ||ತುಮಕೂರ ಈತನು ತನ್ನ ಕಂಟೇನರ ಕ್ಯಾಂಟರ ಲಾರಿ ನಂ: ಕೆಎ-03-ಎಡಿ-7788 ನೇದ್ದರಲ್ಲಿ ಹುಬ್ಬಳ್ಳಿಯಲ್ಲಿರುವ ಪ್ಲಿಫ್ಕಾರ್ಟದಲ್ಲಿ ಪಾರ್ಸಲ್ ಸಲಕರಣೆಗಳನ್ನು ಲೋಡ ಮಾಡಿಕೊಂಡು ದಿನಾಂಕ: 06-11-2016 ರ ಬೆಳಗಿನ ಜಾವ 02-40 ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಟು ಬೆಳಗಿನ ಜಾವ 04-30 ಗಂಟೆಗೆ ಸುಮಾರಕ್ಕೆ ಹಾವೇರಿಯ ಹಾನಗಲ್ಲ ಬ್ರಿಡ್ಜ ರಾಷ್ಟ್ರೀಯ ಹೆದ್ದಾರಿ ಮೇಲೆ ಹೊರಟಾಗ ಯಾರೋ ಕಳ್ಳರು ತನ್ನ ಕಂಟೇನರ ಲಾರಿಯ ಹಿಂದಿನ ಬಾಗಿಲದ ಲಾಕ್ ಮುರಿದು ಗಾಡಿಯಲ್ಲಿದ್ದ 3,43,516/- ರೂ ಕಿಮ್ಮತ್ತಿನ ಪಾರ್ಸಲ್ ಸಲಕರಣೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ನೀಡಿದ ದೂರಿನ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪಿ.ಎಸ್.ಐ ಹಾವೇರಿ ಗ್ರಾಮೀಣ ರವರ ತನಿಖೆ ಮುಂದುವರೆಸಿರುತ್ತಾರೆ.
ಹೆದ್ದಾರಿಯಲ್ಲಿ ಕಂಟೇನರ್ ವಾಹನದಲ್ಲಿದ್ದ
ಸಾಮಾನು ಕಳುವುಃ- ರಾಣೆಬೆನ್ನೂರ ಗ್ರಾಮೀಣ ಠಾಣಾ ವ್ಯಾಪ್ತಿ ಚಳಗೇರಿ ಯಿಂದ ಹೊಸಸುಲಿಹಳ್ಳಿ ಮಧ್ಯ ಇರುವ
ರಾ.ಹೆ-4 ರಲ್ಲಿ ಕ್ಯಾಂಟರ ಗಾಡಿ ನಂಬರ. ಕೆಎ-21ಬಿ-1293 ನೆದ್ದರಲ್ಲಿ ಅದರ ಚಾಲಕನಾದ ರುದ್ರಸ್ವಾಮಿ ಆರ್. ತಂದೆ ಎನ್.ರಾಮಪ್ಪ ಸಾ||ಬಸಾಪುರ ತಾ||ಹೊಳಲ್ಕೆರೆ
ಜಿ||ಚಿತ್ರದುರ್ಗ ಈತನು ಈ -ಕಾಮ್ ಎಕ್ಸ್ ಪ್ರೆಸ್ ಕೋರಿಯರ ಕಂಪನಿಗೆ ಸಂಬಂದಿಸಿದ ಪಾರ್ಸಲ್ ಬ್ಯಾಗುಗಳನ್ನು ದಾವಣಗೇರಿಯಿಂದ ದಾರವಾಡಕ್ಕೆ ಕೊಲ್ಲಾಪುರಕ್ಕೆ ತೆಗೆದುಕೊಂಡು ಹೋಗಲು , ಚಳಗೇರಿಯಿಂದ ಹೊಸಹುಲಿಹಳ್ಳಿಯ ಘರ್ ಡಾಬಾ ದವರೆಗೆ ಎನ್ ಎಚ್-4 ಪಿ ಬಿ ರಸ್ತೆಯ ಮೇಲೆ ದಿನಾಂಕ: 09-11-2016 ರಂದು ಬೆಳಗಿನ ಜಾವ 3-45 ಗಂಟೆಯಿಂದ 04-05 ಗಂಟೆಯ ನಡುವಿನ ಅವಧಿಯಲ್ಲಿ ನಡೆಯಿಸಿಕೊಂಡು ಹೋಗುತ್ತಿದ್ದಾಗ ಲಾರಿಯ ಹಿಂಬದಿಯ ಮೇಲೆ ಯಾರೋ ಕಳ್ಳರು ಹತ್ತಿ ಅದಕ್ಕೆ ಹಾಕಿದ ಬೀಗವನ್ನು ಮುರಿದು ಅಥವಾ ಕಟ್ ಮಾಡಿ ಗಾಡಿಯ ಒಳಗೆ ಹೋಗಿ ಅದರಲ್ಲಿದ್ದ ಸುಮಾರು 1,41,281/- ರೂಪಾಯಿಗಳ ಕಿಮ್ಮತ್ತಿನ 16 ಮೋಬೈಲ್ ಸೆಟ್ ಗಳು, 1 ಲ್ಯಾಪ್ ಟಾಪ್ , ಸೇವಿಂಗ್ ಮಷಿನಗಳು, ಶೂಗಳು ಬಟ್ಟೆಗಳು ಇತರೆ ಸಾಮಾನುಗಳಿದ್ದ ಬ್ಯಾಗುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ನೀಡಿದ ದೂರಿನ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ವಿಷ ಕುಡಿದು ರೈತ ಆತ್ಮಹತ್ಯೆಃ- ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿ ಹೊಸಗುಂಗುರಕೊಪ್ಪ ಗ್ರಾಮದ ರೈತ ನೂರಪ್ಪ ತಂದೆ ರಾಮಪ್ಪ ಲಮಾಣಿ ಇವನು ತನ್ನ ಹಾಗೂ ಲಾವಣಿ ಹಾಕಿಕೊಂಡ ಜಮೀನುಗಳಿಗೆ ಬೆಳೆ ಮಾಡುವ ಸಲುವಾಗಿ ಶಿಡೇನೂರ ಶಿಂಡಿಕೇಟ ಬ್ಯಾಂಕಿನಲ್ಲಿ 1,00000/-(ಒಂದು ಲಕ್ಷ )ರೂ ಸಾಲ ಹಾಗೂ ಮತ್ತೂರ ಸಹಕಾರಿ ಸಂಘದಲ್ಲಿ 25,000/- ರೂ ಸಾಲ ಹಾಗೂ ಊರಲ್ಲಿ ಪರಿಚಯಸ್ಥರ ಕಡೆಗೆ 1,00000/-(ಒಂದು ಲಕ್ಷ )ರೂ ಸಾಲ ಮಾಡಿದ್ದು ಈ ವರ್ಷ ಮಳೆ ಆಗದೆ ಇದ್ದುದರಿಂದಾ ತಾನು ಮಾಡಿದ ಸಾಲವನ್ನು ತೀರಿಸುವ ಬಗ್ಗೆ ಚಿಂತೆ ಮಾಡುತ್ತಾ ಸರಾಯಿ ಕುಡಿಯುವ ಚಟವನ್ನು ಕಲಿತಿದ್ದು ದಿನಾಂಕಃ05-11-2016 ರ ರಾತ್ರಿ 9-30 ಗಂಟೆ ಸುಮಾರಿಗೆ ತನ್ನ ಮನೆಯ ಹಿಂದಿನ ಜಮೀನದಲ್ಲಿ ಸಾರಾಯಿ ಕುಡಿದ ನಿಸೆಯಲ್ಲಿ ತನ್ನಷ್ಟಕ್ಕೆ ತಾನೇ ಯಾವುದೋ ವಿಷದ ಎಣ್ಣಿಯನ್ನು ಕುಡಿದು ಒದ್ದಾಡುತ್ತಿದ್ದಾಗ ಬ್ಯಾಡಗಿ ಸರಕಾರಿ ಆಸ್ಪತ್ರೆಗೆ ಉಪಚಾರಕ್ಕೆ ತಂದು ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಡಾವಣಗೇರಿ ಎಸ್,ಎಸ್.ಐ ಆಸ್ಪತ್ರೆಗೆ ದಾಖಲಿಸಿದಾಗ ಉಪಚಾರ ಪಲಿಸದೆ ದಿನಾಂಕಃ09-11-2016 ರಂದು ಮುಂಜಾನೆ 9-45 ಗಂಟೆಗೆ ಮರಣ ಹೊಂದಿರುತ್ತಾನೆ ಅಂತಾ ಮೃತ ಪಟ್ಟಿರುತ್ತಾರೆ.
ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವುಃ-
ಹಿರೇಕೆರೂರ ಠಾಣಾ ವ್ಯಾಪ್ತಿ ಶಿರಗಂಬಿ ಗ್ರಾಮದ ಹತ್ತಿರ ಇರುವ ತುಂಗ ಮೇಲ್ದಂಡೆ ಕಾಲುವೆಯಲ್ಲಿ ಮಹಾದೇವಪ್ಪ ತಂದೆ ಹನುಮಂಪತ್ತ ಗುತ್ತಲ ಇವರ ಮಗನಾದ ಮಂಜುನಾಥ @ ಮಂಜು ತಂದೆ ಹನುಮಂತಪ್ಪ ಗುತ್ತಲ ವಯಾ 25 ವರ್ಷ ಜಾತಿ ಹಿಂದೂ ವಾಲ್ಮಿಕಿ, ಉದ್ಯೋಗ: ಹೊಲಮನಿ ಕೆಲಸ ಸಾ: ಶಿರಗಂಬಿ, ತಾ: ಹಿರೇಕೇರೂರ. ಈತನು ನಿನ್ನೆ ದಿವಸ ದಿನಾಂಕ :
08-11-2016 ರಂದು ಮದ್ಯಾಹ್ನ 02-00 ಗಂಟೆಗೆ. ಶಿರಗಂಬಿ ಗ್ರಾಮದ ತುಂಗಾ ಮೇಲ್ದಂಡೆ ಕಾಲುವೆ ನೀರಿನಲ್ಲಿ ಎಮ್ಮೆ ತೊಳೆಯಲು ಹೋಗಿ ಅಕಸ್ಮಿಕವಾಗಿ ಕಾಲು ಜಾರಿ ಚಾನಲ್ ನೀರಿನಲ್ಲಿ ಬಿದ್ದು ಮುಳುಗಿದವನ ಶವವನ್ನು ಹುಡುಕಾಡಿದ್ದು ಶವ ಈ ದಿವಸ ದಿನಾಂಕ :
09/11/2016 ರಂದು ಮದ್ಯಾಹ್ನ 02-00 ಗಂಟೆಗೆ ಶವ ಮೇಲೆದ್ದು ದೊರೆತಿದ್ದರ ಮಹಾದೇವಪ್ಪ ತಂದೆ ಹನುಮಂಪತ್ತ ಗುತ್ತಲ ಇವರು ವರದಿ ನೀಡಿದ್ದು ಕಾನೂನು ಕ್ರಮ ಕೈಗೊಂಡಿರುತ್ತಾರೆ.
ವಿಷ ಕುಡಿದು ರೈತ ಆತ್ಮಹತ್ಯೆಃ- ಕಾಗಿನೆಲೆ ಠಾಣಾ ವ್ಯಾಪ್ತಿ ಚಿನ್ನಿಕಟ್ಟಿ ಗ್ರಾಮದ ರೈತ ಹನುಮಂತಪ್ಪ ತಂದೆ ಬಸಪ್ಪ ಕದರಮಂಡಲಗಿ ವಯಾ:48 ವರ್ಷ ಜಾತಿ ಹಿಂದೂ ಕುರುಬರ ಉದ್ಯೋಗ: ಶೇತ್ಕಿ ಕೆಲಸ ಸಾ|| ಚಿನ್ನಿಕಟ್ಟಿ ತಾ|| ಬ್ಯಾಡಗಿ ಇವನು ತನ್ನ ಹೆಸರಿನಲ್ಲಿಯ ಜಮೀನ ರಿ ಸ ನಂ:37/5 ಕ್ಷೇತ್ರ 2 ಎಕರೆ 20 ಗುಂಟೆ ಜಮೀನಿನ ಬಿತ್ತನೆ ಹಾಗೂ ಬಿಜಗೊಬ್ಬರದ ಖರ್ಚಿಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮತ್ತು ಮನೆ ಕಟ್ಟಲು ಅಂತಾ ಹೆಡಿಗ್ಗೊಂಡದ ಸಿಂಡಿಕೇಟ್ ಬ್ಯಾಂಕ್ದಲ್ಲಿ 1 ಲಕ್ಷ, ಹಿರೇಕೆರೂರ ದಲ್ಲಾಳಿಗಳ ಹತ್ತಿರ 1 ಲಕ್ಷ, ಊರಲ್ಲಿನ ಮಲ್ಲಿಕಾರ್ಜುನ ಸಂಘದಲ್ಲಿ 20 ಸಾವಿರ, ಮಾಲತೇಶ ಸಂಘದಲ್ಲಿ 40 ಸಾವಿರ, ಅನುಪಮ ಸಂಘದಲ್ಲಿ 20 ಸಾವಿರ ಹಾಗೂ ನೆಲ್ಲಿಕೊಪ್ಪದ ಜಗದೀಶ ಶಿವಾನಂದಪ್ಪ ಮಲ್ಲಾಪೂರ ಇವರ ಕಡೆಯಿಂದ 1 ಲಕ್ಷ ಹಾಗೂ ಊರಲ್ಲಿ ಅಲ್ಲಲ್ಲಿ ಕೈಗಡವಾಗಿ 01 ಲಕ್ಷ ಈ ಪ್ರಕಾರ ಸಾಲ ಮಾಡಿದ್ದು ಹೋದ ವರ್ಷ ಮತ್ತು ಈ ವರ್ಷ ಮಳೆಯು ಬಾರದೆ ಬೆಳೆಯು ಬೆಳೆಯದೆ ಲುಕ್ಷಾನಾಗಿದ್ದರಿಂದ ಸದರಿ ಮೃತನು ಮಾಡಿದ ಸಾಲವನ್ನು ಹೇಗೆ ತಿರಿಸುವದು ಅಂತಾ ಮಾನಸಿಕ ಮಾಡಿಕೊಂಡು ಸಾಯಬೇಕು ಅಂತಾ ತಿರ್ಮಾನಿಸಿ ತನ್ನಷ್ಠಕ್ಕೆ ತಾನೇ ದಿನಾಂಕ:07/11/2016
ರ ರಾತ್ರಿ 10:30 ಗಂಟೆಗೆ ಮನೆಯಲ್ಲಿ ವಿಷ ಸೇವಿಸಿ ಒದ್ದಾಡುತ್ತಿದ್ದವನಿಗೆ ಉಪಚಾರಕ್ಕೆ ಅಂತಾ ಬ್ಯಾಡಗಿ ಸರ್ಕಾರಿ ಆಸ್ಪತ್ರೆ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಅಂತಾ ಹಾವೇರಿ ಜಿಲ್ಲಾ ಆಸ್ಪತ್ರೆ, ಅಲ್ಲಿಂದ ಕಿಮ್ಸ್ ಆಸ್ಪತ್ರೆಗೆ ತಂದು ದಾಖಲಿಸಿದಾಗ ಉಪಚಾರ ಫಲಿಸದೆ ದಿನಾಂಕ:07/11/2016
ರಂದು ಮುಂಜಾನೆ 06-00 ಗಂಟೆಗೆ ಮರಣ ಹೊಂದಿರುತ್ತಾನೆ ವಿನಃ ಅವನ ಸಾವಿನಲ್ಲಿ ಬೇರೆ ಏನು ಸಂಶಯವಿಲ್ಲಾ ಅಂತಾ ವರದಿ ನೀಡಿದ್ದು ಕಾನೂನು ಕ್ರಮ ಕೈಗೊಂಡಿರುತ್ತಾರೆ.
ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಆಕಸ್ಮಿಕ ಘಟನೆ ವ್ಯಕ್ತಿ ಸಾವುಃ- ಹಾವೇರಿ ಗ್ರಾಮೀಣ ಠಾಣಾ ವ್ಯಾಪ್ತಿಯ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ದಿನಾಂಕ:08-11-2016
ರಂದು ನಡೆದ ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ರಾಜಪ್ಪ ತಂದೆ ರಾಮಪ್ಪ ವಡ್ಡರ, ಸಾ: ಉಪ್ಪಣಸಿ ಈತನು ಮದ್ಯಾಹ್ನ 02-30 ಗಂಟೆಗೆ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ನೆಡೆದ ಕೊಬ್ಬರಿ ಹೋರಿ ಬೆದರಿಸುವ ಕಾರ್ಯಕ್ರಮ ನೋಡಲು ಹೋಗಿ ಅಲ್ಲಿ ಕೊಬ್ಬರಿ ಹೋರಿ ಹಿಡಿಯಲು ಹೋದಾಗ ಅಕಸ್ಮಾತ ಯಾವುದೋ ಒಂದು ಕೊಬ್ಬರಿ ಹೋರಿ ಆತನಿಗೆ ಹಾಯ್ದಿದ್ದರಿಂದ ಮೃತನ ತಲೆಗೆ ಣ್ಣಿನ ಹತ್ತಿರ ಬಲವಾದ ಪೆಟ್ಟು ಬಿದಿದ್ದರಿಂದಾ ಆತನಿಗೆ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತೆಗೆ ಕರೆದುಕೊಂಡು ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕಃ 09-11-216 ರಂದು ಬೆಳಗಿನ ಜಾವ 01-15 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವದಿಲ್ಲ ಅಂತ ನೀಡಿದ ವರದಿಯನ್ನು ಸ್ವೀಕರಿಸಿಕೊಂಡು ಕಾನೂನು ಕ್ರಮ ಕೈಗೊಂಡಿರುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ