f¯Áè ¥ÉÆ°Ã¸ï PÁAiÀiÁð®AiÀÄ ºÁªÉÃj
¢£ÁAPÀ: 10-11-2016
C¥ÀgÁzsÀUÀ¼À ¸ÀÄ¢Ý.
ವಾಹನ ಡಿಕ್ಕಿ ವ್ಯಕ್ತಿ ಸಾವುಃ- ಕುಮಾರ ಪಟ್ಟಣಂ ಠಾಣಾ ವ್ಯಾಪ್ತಿ ರಾ.ಹೆ-4 ರ ಮೇಲೆ ಕರೂರ
ಕ್ರಾಸ್ ಹತ್ತಿರ ದಿನಾಂಕ:10/11/2016 ರಂದು 10-15 ಗಂಟೆಯ ಸುಮಾರಿಗೆ ಯಾವುದೋ ಕ್ರೂಶರ್ ವಾಹನದ ಚಾಲಕನು ತನ್ನ ವಾಹನವನ್ನು ಡಾವಣಗೇರೆ ಕಡೆಯಿಂದ ರಾಣೇಬೆನ್ನೂರು ಕಡೆಗೆ ಅವಿಚಾರ ಮತ್ತು ನಿರ್ಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಅತೀವೇಗವಾಗಿ ನಡೆಸುತ್ತಾ ತನ್ನ ಮುಂದೆ ಎನ್.ಎಚ್. 04 ರಸ್ತೆಯ ಮೇಲೆ ಕರೂರು ಹಳೇ ಕ್ರಾಸ ಹತ್ತಿರ ಹೊರಟಿದ್ದ ಟಿ.ವಿ.ಎಸ್.ಸ್ಕೂಟಿ ವಾಹನ ಸಂಖ್ಯೆ: ಕೆಎ-28/ಎಲ್-4097 ನೇದ್ದಕ್ಕೆ ಹಿಂದುಗಡೆಗೆ ಡಿಕ್ಕಿಮಾಡಿ ಅಪಘಾತ ಪಡಿಸಿ ಸದರಿ ಟಿ.ವಿ.ಎಸ್.ಸ್ಕೂಟಿ ವಾಹನದ ಸವಾರ ರುದ್ರಪ್ಪ ತಂದೆ ಬಸಪ್ಪ ಪೋರಪ್ಪಗೌಡ್ರ ವಯಾ:74 ವರ್ಷ ಸಾ:ವಡೇರಾಯನಹಳ್ಳಿ ಇವರಿಗೆ ತಲೆಗೆ, ಮುಖಕ್ಕೆ, ಎದೆಗೆ, ಮೈಕೈಗೆ, ಕಾಲುಗಳಿಗೆ ಮರಣಾಂತಿಕ ಗಾಯನೋವು ಪಡಿಸಿ ಗಾಯಾಳುವಿಗೆ ಉಪಚಾರದ ವ್ಯವಸ್ಥೆ ಮಾಡದೇ ಹಾಗೂ ತನ್ನ ವಾಹನವನ್ನು ನಿಲ್ಲಿಸದೇ ಹಾಗೇ ಪರಾರಿಯಾಗಿ ಹೋದಾಗ ಸದರಿ ಗಾಯಾಳು ರುದ್ರಪ್ಪ ಇವರಿಗೆ ಉಪಚಾರದ ಕುರಿತು ಹರಿಹರ ಸರಕಾರಿ ಆಸ್ಪತ್ರೆಗೆ ನಂತರ ಅಲ್ಲಿಂದ ಹೆಚ್ಚಿನ ಉಪಚಾರದ ಕುರಿತು ಡಾವಣಗೇರೆ ಸಿ.ಜೆ. ಆಸ್ಪತ್ರೆಗೆ ದಾಖಲ್ಮಾಡಿದಾಗ ಗಾಯಾಳು ರುದ್ರಪ್ಪ ಇವರು ಚಿಕಿತ್ಸೆ ಫಲಕಾರಿಯಾಗದೇ ಈ ದಿವಸ ದಿನಾಂಕ: 10/11/2016 ರಂದು 12-30 ಗಂಟೆಗೆ ಮರಣ ಹೊಂದಿರುತ್ತಾರೆ ಅಂತ ವರದಿ ನೀಡಿದ್ದರ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಉರುಲು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆಃ- ಹಲಗೇರಿ ಠಾಣಾ ವ್ಯಾಪ್ತಿ ಚಿಕ್ಕಮಾಗನೂರ ಗ್ರಾಮದ ಫಕ್ಕೀರಪ್ಪ ದುರ್ಗಪ್ಪ ಚಲವಾದಿ ವಯಸ್ಸು 50 ವರ್ಷ ಸಾ; ಚಿಕ್ಕಮಾಗನೂರ ಇವನು ತನ್ನ ಹೊಲದ ಸಂಭಂದ ವಿ ಎಸ್ ಎಸ್ ಬ್ಯಾಂಕದಿಂದಾ 45,000=00 ರೂ. ಎಕಲವ್ಯ ಬ್ಯಾಂಕದಿಂದಾ 60 ಸಾವಿರ ರೂಪಾಯಿ ಹಾಗೂ ಕೈಗಡ ಅಂತಾ 4-5 ಲಕ್ಷದಷ್ಟು ಹಣ ಇಸಿದುಕೊಂಡು ಹೊಲದಿಂದ ಬೆಳೆ ತೆಗೆಯಲು ಖರ್ಚು ಮಾಡಿದ್ದು 3 ವರ್ಷದಿಂದಾ ಬೆಳೆ ಬಾರದೇ ಇದ್ದುದರಿಂದ ಸಾಲವನ್ನು ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೇ ತನ್ನ ಮನೆಯ ಕಬ್ಬಿನದ ಯ್ಯಾಂಗಲರಗೆ ನಿನ್ನೇ ದಿವಸ ದಿನಾಂಕ 09-11-2016
ರಂದು ರಾತ್ರಿ 10-30 ಗಂಟೆಯಿಂದಾ ದಿನಾಂಕ 10-11-2016
ರ ಬೆಳಗಿನ 4-00 ಗಂಟೆಯ ನಡುವಿನ ಅವದಿಯಲ್ಲಿ ವಾಯರ್ ಹಗ್ಗದಿಂದಾ ಕೊರಳಿಗೆ ಹಾಕಿಕೊಂಡು ಉರಲು ಹಾಕಿಕೊಂಡು ಮೃತ ಪಟ್ಟಿರುತ್ತಾರೆ ಅಂತ ಮೃತನ ಹೆಂಡತಿ ರೇಣುಕಮ್ಮ ಫಕ್ಕಿರಪ್ಪ ಚಲವಾದಿ ಇವಳು ವರದಿ ನೀಡಿದ್ದು ಕಾನೂನು ಕ್ರಮ ಕೈಗೊಂಡಿರುತ್ತಾರೆ.
ಹಾವು ಕಚ್ಚಿ ಮಹಿಳೆ ಸಾವುಃ- ಸವಣೂರ ಠಾಣಾ ವ್ಯಾಪ್ತಿ ತೊಂಡೂರ ಗ್ರಾಮದ ಶಿವಬಸಪ್ಪ ಸಹದೇವಪ್ಪ ಮರಡೂರ ಇವನ ಹೆಂಡತಿಯಾದ ಪಾರ್ವತಿ ಶಿವಬಸಪ್ಪ ಮರಡೂರ ಇವಳು ದಿ;10-11-2016
ರಂದು ಮುಂಜಾನೆ 8-30 ಗಂಟೆ ಸುಮಾರಿಗೆ ತಮ್ಮ ಹೊಲದಲ್ಲಿ ಹತ್ತಿ ಬಿಡಿಸುವಾಗ ಯಾವುದೋ ವಿಷಕಾರಕ ಹಾವು ಅವಳ ಬಲಗಾಲ ಪಾದಕ್ಕೆ ಕಚ್ಚಿದ್ದು ನಂತರ ಅವಳಿಗೆ ಉಪಚಾರಕ್ಕೆ ಸವಣೂರ ಸರಕಾರಿ ಆಸ್ಪತ್ರೆಗೆ ದಾಖಲ ಮಾಡಿ ಉಪಚಾರ ಪಡೆದುಕೊಂಡು ಮುಂದೆ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೊರಟಾಗ ಮಾರ್ಗವ್ಮದ್ಯ ಗೋಟಗೋಡಿ ಹತ್ತಿರ ಮೃತಪಟ್ಟಿರುತ್ತಾಳೆ ಅಂತಾ ಮೃತಳ ಗಂಡ ವರದಿ ನೀಡಿದ್ದು ಕಾನೂನು ಕ್ರಮ ಕೈಗೊಂಡಿರುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ