f¯Áè ¥ÉÆ°Ã¸ï PÁAiÀiÁð®AiÀÄ ºÁªÉÃj
¢£ÁAPÀ: 11-11-2016
C¥ÀgÁzsÀUÀ¼À ¸ÀÄ¢Ý.
ಲಾರಿ ಡಿಕ್ಕಿ ವ್ಯಕ್ತಿ ಸ್ಥಳದಲ್ಲಿಯೇ
ಸಾವುಃ- ಶಿಗ್ಗಾಂವ ಪೊಲೀಸ್ ಠಾಣಾ ಹದ್ದಿ ಪೈಕಿ, ಶಿಗ್ಗಾಂವ ಶಹರದ ಗಂಗಿಬಾವಿ ಕ್ರಾಸ ಹತ್ತಿರ ವಾಹನಗಳು ಹುಬ್ಬಳ್ಳಿಯಿಂದ ಹಾವೇರಿಗೆ ಹೋಗುವ ಎನ್ ಎಚ್-4 ರಸ್ತೆಯ ಮೇಲೆ ದಿನಾಂಕಃ 10/11/2016 ರಂದು ರಾತ್ರಿ 8-20 ಗಂಟೆ ಸುಮಾರಿಗೆ ಇದರಲ್ಲಿಯ ಘಾಯಾಳು, ಗುಡದಪ್ಪ @ ಮುದುಕಪ್ಪ ತಂದೆ ಈರಪ್ಪ ಕಾಳಿ ಸಾಃ ಶ್ಯಾಡಂಬಿ ಇತನು ಸೈಕಲ್ ಮೋಟರ್ ನಂ ಕೆಎ-27/ಇಸಿ-3120 ನೇದ್ದರಲ್ಲಿ ತನ್ನ ಹಿಂದೆ ಮಾಂತೇಶ ನಿಂಗಪ್ಪ ಕಾಳಿ ವಯಾ 23 ವರ್ಷ ಸಾಃ ಶ್ಯಾಡಂಬಿ ಇತನಿಗೆ ಕೂಡ್ರಿಸಿಕೊಂಡು ಶಿಗ್ಗಾಂವ ಶಹರದಿಂದ ಗಂಗಿಬಾವಿ ಕ್ರಾಸ ಮಾರ್ಗವಾಗಿ ಶ್ಯಾಡಂಬಿ ಕಡೆಗೆ ಹೊರಟಾಗ ಎನ್ ಎಚ್ -4 ರಸ್ತೆ ದಾಟುತ್ತಿದ್ದಾಗ, ಯಾವುದೋ ಲಾರಿ ಚಾಲಕನು ತಾನು ಚಲಾಯಿಸುತ್ತಿದ್ದ ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಅತೀ ಜೋರಾಗಿ ಮತ್ತು ನಿರ್ಲಕ್ಷತದನಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ, ಮುದುಕಪ್ಪನ ಸೈಕಲ ಮೋಟರಗೆ ಡಿಕ್ಕಿ ಮಾಡಿ ಕೆಡವಿ, ಮಾಂತೇಶ ನಿಂಗಪ್ಪ ಕಾಳಿ ವಯಾ 23 ವರ್ಷ ಇತನಿಗೆ ಸ್ಥಳದಲ್ಲಿಯೇ ಮರಣ ಪಡಿಸಿದ್ದು ಅಲ್ಲದೇ, ಗುಡದಪ್ಪನಿಗೆ ಮರಣಾಂತಿಕ ಘಾಯ ನೋವು ಪಡಿಸಿ, ಪರಾರಿ ಆಗಿ ಹೋಗಿರುತ್ತಾನೆ ಅಂತ ದೂರು ನೀಡಿದ್ದು
ಪಿ.ಎಸ್.ಐ ಶಿಗ್ಗಾವಿ ರವರು ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಂಡಿರುತ್ತಾರೆ.
ಬೈಕ್ ಡಿಕ್ಕಿ ವ್ಯಕ್ತಿ ಸಾವುಃ- ಹಾವೇರಿ ಶಹರ ಠಾಣ ವ್ಯಾಪ್ತಿಯ ಗುತ್ತಲ ರಸ್ತೆಯಲ್ಲಿರುವ ರಾಘವೇಂದ್ರ
ಭವನ ಹತ್ತಿರ ದಿನಾಂಕ 10-11-2016 ಸಾಯಂಕಾಲ 06:30 ಗಂಟೆ ವೇಳೆಯಲ್ಲಿ ಪಲ್ಸಾರ್ ಮೋಟಾರ ಸೈಕಲ್ ಕೆಎ-27/ಇಜಿ-5003 ನೇದ್ದರ ಸವಾರ ಪ್ರವೀಣ ಪರಶುರಾಮ ಮರಿಯಮ್ಮನವರ
ಸಾ||ಹಾವೇರಿ ಈತನು ತನ್ನ ಮೋಟಾರ ಸೈಕಲನ್ನು ಹಾವೇರಿ ಹುಕ್ಕೇರಿಮಠದ ಕಡೆಯಿಂದ ಗುತ್ತಲ ರಸ್ತೆಯ ಮೇಲೆ ಹಳೆ ಪಿ.ಬಿ.ರಸ್ತೆಯ ಕಡೆಗೆ ಅತೀ ಜೋರಿನಿಂದ ನಿರ್ಲಕ್ಷ್ಯ ತಾತ್ಸರತನದಿಂದ ಮಾನವೀಯ ಪ್ರಾಣಕ್ಕೆ ಅಪಾಯಕರವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದು ರಾಘವೇಂದ್ರ ಭವನದ ಹತ್ತಿರ ರಸ್ತೆ ದಾಟುತ್ತಿದ್ದ ಪಿರ್ಯಾದಿಯ ತಂದೆ ಭೀಮಪ್ಪ ತಿರಕಪ್ಪ ಸರಾವರಿ ವಯಾ 57 ವರ್ಷ ಸಾ|| ಕೋಲಕಾರ ಓಣಿ ಹಾವೇರಿ ಇವರಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ, ರಸ್ತೆಯ ಮೇಲೆ ಕೆಡವಿದ್ದರಿಂದ ಸದರಿಯವನ ಬಲ ತಲೆಗೆ, ಬಲಗಾಲಿಗೆ ಗಂಭೀರ ಗಾಯಗಳಾಗಿದ್ದು, ಸದರಿಯವರಿಗೆ ಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲ ಮಾಡಿದ್ದು ಗಾಯಾಳು ಒಳರೋಗಿಯಾಗಿ ಉಪಚಾರ ಪಡೆಯುತ್ತಿದ್ದಾಗ ಉಪಚಾರದಿಂದ ಗುಣಮುಖವಾಗದೇ ಈ ದಿವಸ ದಿನಾಂಕ 11/11/2016 ರಂದು ಬೆಳಗಿನ ಜಾವ 03-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಅಂತ ವರದಿ ನೀಡಿದ್ದು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಸಾರ್ವಜನಿಕ ಶಾಂತಿ ಭಂಗ ಪ್ರಕರಣ ದಾಖಲುಃ- ನಮೂದ ಆರೋಪಿತರು ದಿನಾಂಕ:11/11/2016 ರಂದು ಬೆಳಗಿನ 02-00 ಗಂಟೆಗೆ ಕವಲೆತ್ತು ಗ್ರಾಮದ ದುರ್ಗಾದೇವಿ ದೇವಸ್ಥಾನದ ಹತ್ತಿರ ತಮ್ಮ ಟ್ರಾಕ್ಟರ ನಂಬರ: ಕೆಎ-27/ಟಿಬಿ-1151 ಅಂತಾ ಅಸ್ಪಷ್ಟವಾಗಿದ್ದು ಸದರ ಟ್ರ್ಯಾಕ್ಟರನ ಇಂಜಿನ ನಂಬರ: 431024/ಎಸ್.ಆರ್.ಎನ್14932, ಚೆಸ್ಸಿ ನಂಬರ: ಡಬ್ಲೂ.ಆರ್.ಸಿ.ಎ 40606066629 ನೇದ್ದು ಹಾಗೂ ಅದಕ್ಕೆ ಜೋಡಿಸಿದ ಟ್ರಾಕ್ಟರ ಟ್ರೈಲರ್ ನಂಬರ: ಕೆಎ:27/ಟಿಎ-6828 ನೇದ್ದರಲ್ಲಿ 09 ಸೌಂಡ್ ಸಿಸ್ಟಮ್ನ ಬಾಕ್ಷಗಳನ್ನು (ದ್ವನಿವರ್ಧಕವನ್ನು) ಹಾಗೂ ಸೌಂಡ್ ಸಿಸ್ಟಮ ಹಚ್ಚಲು ಉಪಯೋಗಿಸುವ 03) ಅಂಪ್ಲೀಪ್ಲೇಯರ್ ಸಾಧನವನ್ನು ಹಾಗೂ 4) ಒಂದು ನೀಲಿ ಬಣ್ಣದ ಜನರೇಟರ್ ಯಂತ್ರ (ಜನರೇಟರ್ ಯಂತ್ರ ಪ್ರೇಮ್ ನಂಬರ: 4ಎಬಿ200/ಬಿ2) ನೇದ್ದನ್ನು ಇಟ್ಟುಕೊಂಡು ಡಿ.ಜೆ. ಸೌಂಡ್ ಸಿಸ್ಟಮನ್ನು ಏರಿಕೆಯ ದ್ವನಿಯಾಗುವಂತೆ (ದ್ವನಿವರ್ಧಕವನ್ನು) ಸಿಸ್ಟಮನ್ನು ಹಚ್ಚಿಕೊಂಡು ಶಬ್ದ ಮಾಲಿನ್ಯ ಮಾಡಿ ವಾತಾವರಣವನ್ನು ಕಲುಷಿತಗೊಳಿಸಿ, ಸಾರ್ವಜನಿಕರಿಗೆ ಉಪದ್ರವವನ್ನುಂಟು ಮಾಡುತ್ತಿದ್ದ ಬಗ್ಗೆ ಕುಮಾರಪಟ್ಟಣಂ ಪಿ.ಎಸ್. ಎನ್.ಸಿ. ಸಂಖ್ಯೆ: 02/2016 ನೇದ್ದರಡಿ ಪ್ರಕರಣ ದಾಖಲಿಸಿ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿ ಕ್ರಮ ಜರುಗಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ