ಶನಿವಾರ, ನವೆಂಬರ್ 12, 2016

Haveri Dist. Crime News on Nov 13, 2016



f¯Áè ¥ÉÆ°Ã¸ï PÁAiÀiÁð®AiÀÄ ºÁªÉÃj
¢£ÁAPÀ: 13-11-2016
C¥ÀgÁzsÀUÀ¼À ¸ÀÄ¢Ý.

ವಾಹನ ಅಪಘಾತ ವ್ಯಕ್ತಿ ಸಾವುಃ- ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಲ್ಲೇದೇವರು-ಕೆಂಗೊಂಡ ರಸ್ತೆಯ ಮೇಲೆ ದಾನಪ್ಪ ಚೂರಿ ಇವರ ಜಮೀನದ ಹತ್ತಿರ ದಿನಾಂಕಃ12-11-2016 ರಂದು ಮುಂಜಾನೆ 9-00 ಘಂಟೆ ಸುಮಾರಿಗೆ ಟ್ರ್ಯಾಕ್ಟರ ನಂಬರ ಕೆಎ-27/ಟಿಎ-8831 ಹಾಗೂ ನಂಬರ ಇಲ್ಲದ ಟ್ರಾಲಿ ಕೇಸರಿ ಬಣ್ಣದ್ದು ಇದನ್ನು ಆಪಾದಿತ ಬಸವರಾಜ ಹನುಮಂತಪ್ಪ ಹವಳೆಮ್ಮನವರ @ ಕಾಕೋಳ ಸಾ||ಕಲ್ಲೇದೇವರ ತಾ||ಬ್ಯಾಡಗಿ ಈತನು ಅದರಲ್ಲಿ ಕಲ್ಲಪ್ಪ ಹಾವನೂರ ಇವರ ಜಮೀನಿಗೆ ಗೋವಿನ ಜೋಳ ಹೇರಿಕೊಂಡು ಬರಲು ಹೋಗಲು ಹಮಾಲಿ ಕೆಲಸ ಮಾಡುವ ಫಿರ್ಯಾದಿ ಕಲ್ಲಪ್ಪ ಗುಂಡೇನಹಳ್ಳಿ ಹಾಗೂ ಯಲ್ಲಪ್ಪ ನಾಗಪ್ಪ ಮುದುಕಮ್ಮನವರ, ದೇವಿಂದ್ರಪ್ಪ ಚಿಗರಿ, ಕಲ್ಲಪ್ಪ ಬಂಗಿ. ಇವರೆಲ್ಲರಿಗೆ ಹತ್ತಿಸಿಕೊಂಡು ಹೋಗುತ್ತಿರುವಾಗ ಟ್ರ್ಯಾಕ್ಟರನ್ನು ಅತೀ ಜೋರಾಗಿ ನಿರ್ಲಕ್ಷತನದಿಂದ ನಡೆಸಿ ತನ್ನ ಪಕ್ಕದ ಸೀಟಿನಲ್ಲಿ ಇಂಜಿನದಲ್ಲಿ ಕುಳಿತ ಯಲ್ಲಪ್ಪ ಮುದುಕಮ್ಮನವರ ಇವನು ಒಮ್ಮೆಲೆ ಪುಟಿದು ಟ್ರ್ಯಾಕ್ಟರನಿಂದ ಕೆಳಗೆ ಬಿದ್ದಾಗ ಅವನ ತಲೆಗೆ ಹಾಗೂ ಮುಖದ ಮೇಲೆ ಟ್ರಾಲಿಯ ಹಿಂದಿನ ಬಲಗಡೆ ಸೈಡಿನ ಗಾಲಿ ಹತ್ತಿದ್ದರಿಂದ ತಲೆಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಕಲ್ಲಪ್ಪ ಗುಂಡೇನಹಳ್ಳಿ ಈತನು ವರದಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಅಪರಿಚಿತ ಹೆಣ್ಣು ಮಕ್ಕಳಿಂದ ವ್ಯಾನಿಟಿ ಬ್ಯಾಗ ಕಳುವುಃ- ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿ ರಾಣೆಬೆನ್ನೂರ-ಹಲಗೇರಿ ರಸ್ತೆ ಮೇಲೆ ಆರೋಪಿತರಾದ 2 ಅಪರಿಚಿತ ಹೆಣ್ಣು ಮಕ್ಕಳು ದಿನಾಂಕ 12-11-2016 ರಂದು ಮದ್ಯಾನ್ನ 12-00 ಗಂಟೆಯಿಂದಾ 12-30 ಗಂಟೆಯ ನಡುವಿನ ಅವದಿಯಲ್ಲಿ ರಾಣೆಬೆನ್ನೂರದಿಂದಾ ಹಲಗೇರಿಗೆ ಹೋಗುವಷ್ಟರಲ್ಲಿ ಎಲ್ಲಿಯೋ ಯಾವುದೋ ರೀತಿಯಲ್ಲಿ ನನ್ನ ವೆನಿಟ್  ಬ್ಯಾಗನಲ್ಲಿ ಇದ್ದ 50 ಗ್ರಾಮ್ ತೂಕದ ಚೈನ್ ತೂಕ್ 1,50,000-00ರೂ ಕಿಮ್ಮತ್ತಿನವುದನ್ನು ಕದ್ದುಕೊಂಡು ಹೋಗಿರುತ್ತಾರೆ ಅಂತಾ ಪಿರ್ಯಾದಿ ಗಿರಿಜಾ ಬಸನಗೌಡ ಮರದ ಸಾ||ಉಮಾಶಂಕರ ನಗರ ರಾಣೆಬೆನ್ನೂರ ಇವರು ವರದಿ ನೀಡಿದ್ದು ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣೆ ಕಿರುಕುಳ ಮಹಿಳೆ ವಿಷಸೇವನೆಃ- ಕಾಗಿನೆಲೆ ಪೋಲಿಸ ಠಾಣೆಯ ಹದ್ದಿ ಪೈಕಿ ಕಾಗಿನೆಲೆ  ಗ್ರಾಮದಲ್ಲಿ ಇದರಲ್ಲಿಯ ಫಿರ್ಯಾದಿ ಶ್ರೀಮತಿ ಶಕಿಲಾಬಿ ಅಬ್ದುಲ್ ಖಾದರ ಕಮ್ಮಾರ ಇವರ ಮಗಳು ಶಿರಿನಬಾನು ಮತ್ತು ಆರೋಪಿ ನಂ 1 ಇನಾಯಿತುಲ್ಲಾ ತಿಳವಳ್ಳಿ ಇವರಿಗೆ ಈಗ 5 ವರ್ಷಗಳ ಹಿಂದೆ ಮದುವೆಯಾಗಿದ್ದು ಮದುವೆಯಾಗಿ 2 ತಿಂಗಳ ನಂತರ ಆರೋಪಿ ನಂ 1 ಮತ್ತು 2 ನೇದವರು ಶ್ರೀಮತಿ ಫಾತಿಮಾ ಬಾಬುಸಾಬ ತಿಳವಳ್ಳಿ ಫಿರ್ಯಾದಿಯ ಮಗಳ ಸಂಗಡ ವಿನಾಕಾರಣ ತಂಟೆ ಮಾಡುತ್ತಾ ನನಗೆ ಅಡುಗೆ ಮಾಡಲು ಬರುವದಿಲ್ಲಾ ಅಂತಾ ಬೈದಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಕೊಡುತ್ತಾ ಬಂದಿದ್ದು ಅಲ್ಲದೆ ಆರೋಪಿ ನಂ 1 ನೇದವನು ತನ್ನ ಹೆಂಡತಿಗೆ ಗೋವಾದಲ್ಲಿ ಕರೆದುಕೊಂಡು ಹೋಗಿ ಅಲ್ಲಿ ಸಂಸಾರ ಮಾಡುವಾಗ ಮನೆಗೆ ಬಾರದೆ ಬೇರೆ ಹೆಂಗಸಿನ ಮನೆಯಲ್ಲಿ ಇರುತ್ತಿದ್ದರಿಂದ ಕೇಳಿದ್ದಕ್ಕೆ  ಆರೋಪಿ ನಂ 1 ನೇದವನು ಫಿರ್ಯಾದಿಗೆ ಮಗಳು ಶಿರನಬಾನು ಇವಳಿಗೆ ನಾನು ಅವಳಿಗೆ ಹಣ ಕೊಡಬೇಕು ನೀನು ತವರು ಮನೆಗೆ ಹೋಗಿ ಹಣ ತೆಗದುಕೊಂಡು ಬಾ ನಾನು ಹಣ ಕೊಟ್ಟು ಮನೆಯಲ್ಲಿ ಇರುತ್ತೇನೆ ಇಲ್ಲಾಂದ್ರ ನೀನು ಮನೆ ಬಿಟ್ಟು ತವರು ಮನೆಗೆ ಹೋಗು ಅಂತಾ ಅವಾಚ್ಯೆ ಶಬ್ದಗಳಿಂದ ಬೈದಾಡುತ್ತಾ ಕೈಯಿಂದ ಮೈಮೇಲೆ ಹೊಡಿಬಡಿ ಮಾಡಿ  ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಕೊಡುತ್ತಾ ಬಂದಿದ್ದು ಅಲ್ಲದೆ ದಿನಾಂಕ;-09-11-2016 ರಂದು ಮುಂಜಾನೆ 11-30 ಗಂಟೆಗೆ ಆರೋಪಿ ನಂ 1 ಮತ್ತು 2 ನೇದವರು ಕಾಗಿನೆಲೆ ಗ್ರಾಮದ ತಮ್ಮ ಮನೆಯಲ್ಲಿ ಫಿರ್ಯಾದಿ ಮಗಳು ಶಿರಿನಬಾನು ಇವಳಿಗೆ ಕೈಯಿಂದ ಮೈಮೇಲೆ ಹೊಡೆದು ಅವಾಚ್ಯೆ ಶಬ್ದಗಳಿಂದ ಬೈದಾಡಿ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಕೊಟ್ಟಿದ್ದರಿಂದ ಅವರು ಕೊಡುವ ಹಿಂಸೆಯನ್ನು ತಾಳಲಾರದೆ ಮನೆಯಲ್ಲಿ ಮದ್ಯಾನ 12-00 ಗಂಟೆಗೆ ಯಾವುದೋ ವಿಷದ ಎಣ್ಣಿಯನ್ನು ಸೇಮಿಸಿರುತ್ತಾಳೆ, ಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿರುತ್ತೇವೆ ಅಂತ ಫಿರ್ಯಾದಿಯು ವರದಿ ನೀಡಿರುತ್ತಾರೆ. ಆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.



ವಿಷ ಸೇವಿಸಿ ಆತ್ಮಹತ್ಯೆಃ- ಆಡೂರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಕಣ ಗ್ರಾಮದಲ್ಲಿ ಗ್ರಾಮದ ಮೈಲಾರಪ್ಪ ತಂದೆ ಗುತ್ತೇಪ್ಪ ಗಡದರ @ಬಾಳಂಬೀಡ, ಇವನು ತಾನು ಹೊಸ ಮನೆಯನ್ನು ಕಟ್ಟಿಸಲು ಮಾಡಿದ ಸಾಲದ ಸಂಬಂದ, ಮತ್ತು ಬೆಳೆ ಸರಿಯಾಗಿ ಬಾರದೇ ಇರುವದರಿಂದ ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ಬೇಜಾರ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ತನ್ನಷ್ಟಕ್ಕೆ ತಾನೇ ವಿಷ ಪೂರಿತ ಕಳೆಗೆ ಹಾಕುವ ಪೋರೊಟ ಪೌಡರನ್ನು ದಿನಾಂಕ; 11-11-2016 ರಂದು ರಾತ್ರಿ 9-45 ಘಂಟೆಯಿಂದ ದಿನಾಂಕ; 12-11-2016 ರಂದು 17-30 ಘಂಟೆಯ ನಡುವಿನ ಅವದಿಯಲ್ಲಿ. ಹೊಂಕಣ ಗ್ರಾಮದ ರಿ..ನಂಬರ 131 ನೇ ಜಮೀನದಲ್ಲಿ ಹಾಕಿದ ಗುಡಿಸಲಿನಲ್ಲಿ. ಸೇವನೇ ಮಾಡಿ ಮೃತಪಟ್ಟಿರುತ್ತಾನೆ. ನನ್ನ ಗಂಡನ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲಾ ಅಂತಾ ಮೃತನ ಪತ್ನಿ ಮಂಜವ್ವ ಗಡದರ ವರದಿ ನೀಡಿದ್ದ ಪ್ರಕಣ ದಾಖಲಿಸಿಕೊಂಡು ಕ್ರಮ ಕೈಗೊಂಡಿರುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ