ಗುರುವಾರ, ಸೆಪ್ಟೆಂಬರ್ 15, 2016

Haveri Dist. Crime News on Sep 15, 2016



f¯Áè ¥Éưøï PÁAiÀiÁð®AiÀÄ ºÁªÉÃj
¢£ÁAPÀ: 15-09-2016
C¥ÀgÁzsÀUÀ¼À ¸ÀÄ¢Ý.

ರಸ್ತೆ ಅಪಘಾತ ಗಾಯಃ- ದಿ:15/09/2016 ರಂದು ಮುಂಜಾನೆ 05-30 ಗಂಟೆ ಸುಮಾರಿಗೆ ಇನೊವಾ ಕಾರ ನಂ ಕೆಎ04ಸಿ 5580 ನೇದ್ದನ್ನು ಮಧುಕುಮಾರ ತಂ. ಮರಿಯಪ್ಪ ಸಾ||ಜಂಗಮಕೋಟೆ ತಾ||ಶಿಡ್ಲಘಟ್ಟ ಜಿ||ಚಿಕ್ಕಬಳ್ಳಾಪುರ ಈತನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಎನ್.ಹೆಚ್. 4 ರಸ್ತೆ ಮೇಲೆ  ಅತೀ ಜೋರಾಗಿ, ತಾತ್ಸರತನದಿಂದ ನಡೆಸಿಕೊಂಡು ಬಂದು, ಜೀವನ ರಕ್ಷಾ ಪೊಲೀಸ ಠಾಣೆ ಸಮೀಪ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಒಂದು ಟೂರಿಸ್ಟ್ ಬಸ್ ನಂ ಆರ್ಜೆ 19 ಪಿಬಿ 6800 ನೇದ್ದಕ್ಕೆ ಹಿಂದಿನ ಭಾಗದಲ್ಲಿ ಡಿಕ್ಕಿ ಮಾಡಿ ಅಪಘಾತ ಪಡಿಸಿ, ಕಾರನಲ್ಲಿದ್ದ ಬಸೀರಖಾನ ಮತ್ತು ತಮೀಮಪಾಷಾ ಇವರಿಗೆ ಭಾರಿ ಸ್ವರೂಪದ ಗಾಯ ಪಡಿಸಿದ್ದಲ್ಲದೆ, ರಿಯಾಜ್,ಆಸೀಪ,ಇರ್ಪಾನ ಇವರಿಗೆ ತಲೆಗೆ ಮೈ ಕೈಗೆ ಒಳಪೆಟ್ಟು ಪಡಿಸಿದ ಅಪರಾಧ.

ಮಹಿಳೆ ಮಾನಭಂಗಃ- ದಿನಾಂಕ: 14-09-2016 ರಂದು ಮದ್ಯಾಹ್ನ 02:00 ಗಂಟೆ ಸುಮಾರಿಗೆ ಆರೋಪಿತರಾದ 1) ನಾರಾಯಣಪ್ಪ ದಿಡಗೂರ, 2) ಬಸಪ್ಪ ದಿಡಗೂರ, 3) ರಾಮಣ್ಣ ದಿಡಗೂರ, 4) ಪರಸಪ್ಪ ಗುತ್ತಲ, 5) ರಮೇಶ ಗುತ್ತಲ ಸಾ||ಸಿದ್ದೇಶ್ವರ ನಗರ ರಾಣೆಬೆನ್ನೂರ ಹಾಗೂ ಪಿರ್ಯಾದಿ ನಿಂಗಮ್ಮ ಕೋಂ ನಾಗಪ್ಪ ದಿಡಗೂರ ಸಾ||ಮಾರುತಿ ನಗರ ರಾಣೆಬೆನ್ನೂರ, ಇವರೆಲ್ಲರು ಒಬ್ಬರಿಗೊಬ್ಬರು ಸಂಬಂಧಿಕರಿದ್ದು, ಆರೋಪಿತರೆಲ್ಲರು ಗೈರ ಕಾಯ್ದೆಶೀರ ಮಂಡಳಿಯಾಗಿ ಪಿರ್ಯಾದಿಯ ದೊಡ್ಡಮ್ಮ ಶೇಖಮ್ಮ @ ಗಂಗಮ್ಮ ಕೊಳೂರ ಇವರಿಂದ ಪಿರ್ಯಾದಿಗೆ ಬಂದ ಮನೆಯನ್ನು ಮಾರಿ ಹಣವನ್ನು ತೆಗೆದುಕೊಂಡಿದ್ದು, ಅದಕ್ಕೆ ಪಿರ್ಯಾದಿ ತನ್ನ ಮಕ್ಕಳೊಂದಿಗೆ ಅವರನ್ನು ಕೇಳಲು ಹೋದಾಗ ಅವಳಿಗೆ ಬಾಯಿಗೆ ಬಂದಂತೆ ಬೈದಾಡುವುದು, ಜೀವದ ಬೆದರಿಕೆ ಹಾಕುವುದು, ದೂಡಾಡುವುದು ಮಾಡುತ್ತಾ ಬಂದಿದ್ದು, ಅದಕ್ಕೆ ನ್ಯಾಯ ಕೊಡಿಸುವಂತೆ ಮಾನ್ಯ ಐಜಿಪಿ ಸಾಹೇಬರು ಡಾವಣಗೇರಿರವರಿಗೆ ಪಿರ್ಯಾದಿ ಅರ್ಜಿ ಬರೆದಿದ್ದು, ಅದರ ವಿಚಾರಣೆಗೆ ರಾಣೆಬೆನ್ನೂರ ಸಿಪಿಐ ಸಾಹೇಬರು ಪಿರ್ಯಾದಿ ಮತ್ತು ಅವರ ಮಗನಿಗೆ ತಮ್ಮ ಆಫೀಸಿಗೆ ಕರೆದು, ಅಲ್ಲಿಗೆ ಪಿರ್ಯಾದಿ ತನ್ನ ಮಗನೊಂದಿಗೆ ಹೋಗುತ್ತಿದ್ದಾಗ ದಿನಾಂಕ 14/09/2016 ರಂದು 14-00 ಗಂಟೆಗೆ ರಾಣೆಬೆನ್ನೂರ ಶಹರ ಸಿಪಿಐ ಸಾಹೇಬರ ಆಫೀಸ್ ಎದುರಿಗೆ ರಸ್ತೆಯ ಮೇಲೆ ನಮೂದ ಮಾಡಿದ ಆರೋಪಿತರೆಲ್ಲರೂ ಗೈರ ಕಾಯ್ದೇಶಿರ ಮಂಡಳಿಯಾಗಿ ಗುಂಪುಕಟ್ಟಿಕೊಂಡು ಬಂದು ಪಿರ್ಯಾದಿ ಹಾಗೂ ಅವಳ ಮಗನಿಗೆ ಅಡ್ಡಗಟ್ಟಿ ತರಬಿ, ಪಿರ್ಯಾದಿ ಹಾಗೂ ಅವಳ ಮಗನೊಂದಿಗೆ ತಂಟೆ ತೆಗೆದು ಕೈಯಿಂದ ಮೈಕೈಗೆ ಹೊಡೆದು, ಅವಾಚ್ಯವಾಗಿ ಬೈದಾಡಿ, ಜೀವದ ಬೆದರಿಕೆ ಹಾಕಿ ಪಿರ್ಯಾದಿ ಮಹಿಳೆಗೆ ಸಾರ್ವಜನಿಕವಾಗಿ ಅವಮಾನ ಮಾಡಿರುತ್ತಾರೆ.

ಅಕ್ರಮ ಮರುಳು ಗಣಿಗಾರಿಕೆಃ- ದಿನಾಂಕ:15-09-2016 ರಂದು ಮದ್ಯಾಹ್ನ 02:45 ಗಂಟೆಯಿಂದ 03:45 ಗಂಟೆ ವೇಳೆಯಲ್ಲಿ ಹರನಗಿರಿ ಹದ್ದಿಯಲ್ಲಿ ಬರುವ  ತುಂಗಭದ್ರಾ ನದಿಪಾತ್ರದಲ್ಲಿಂದ ಸರಕಾರದ ಖನಿಜ ಸ್ವತ್ತಾದ ಮರಳನ್ನು ಅಕ್ರಮ ಮರಳು ಗಣಿಕಾರಿಕೆ ಮಾಡಿ ||ಕಿ|| 2700/ರೂ ಕಿಮ್ಮತ್ತಿನ ಅಂದಾಜು 03 ಕ್ಯೂಬಿಕ್ ಮೀಟರ ಸಾಧಾರಣ ಮರಳನ್ನು ಆರೋಪಿತರಾದ 1) ಹನುಮಂತಪ್ಪ ಕರಬಸಣ್ಣನವರ ಸಾ||ಹರನಗಿರಿ ತಾ||ರಾಣೆಬೆನ್ನೂರ ಹಾಗೂ 2) ನಾಗಪ್ಪ ಚಿಕ್ಕಪ್ಪ ವೀರಾಪುರ ಸಾ||ಕುದರಿಹಾಳ ತಾ||ರಾಣೆಬೆನ್ನೂರ ಇವರು ತಮ್ಮ ಬಾಬತ್ತ Swaraz Mazda Canter No: KA: 21/B-0820 ನೇದ್ದರಲ್ಲಿ ಕಳ್ಳತನದಿಂದ ತುಂಬಿಕೊಂಡು ಯಾವುದೇ ಪಾಸ ಪರ್ಮಿಟ್ ಇಲ್ಲದೇ ಸಾಗಾಣಿಕೆ ಮಾಡುತ್ತಿರುವ ಕಾಲಕ್ಕೆ ದಾಳಿ ಮಾಡಿದಾಗ ಸಿಕ್ಕ ಅಪರಾಧ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ